ಈ ಕುರಿತು ಮಂಗಳೂರು ದಕ್ಷಿಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ ಮಹಮ್ಮದ್ ಪರ್ವೆಜ್ ಅವರು ತಾನು ಕಂಪೆನಿಯ ಕೆಲಸ ಮುಗಿಸಿ ಕಂಕನಾಡಿ ಕಚೇರಿಯಿಂದ ಸ್ಕೂಟರ್‌ನಲ್ಲಿ ಮನೆಕಡೆ ಹೊರಟು ನಂದಿಗುಡ್ಡೆ ಮೈನ್ ರಸ್ತೆಯಿಂದ ಮನೆಯ ಕಡೆಗೆ ಹಾದುಹೋಗುವ ಒಳ ಡಾಮಾರು ರಸ್ತೆ ತಲುಪುತ್ತಿದ್ದಂತೆ ರಾತ್ರಿ ಸುಮಾರು 8.30 ರ ವೇಳಗೆ ದ್ವಿಚಕ್ರದಲ್ಲಿ ಬಂದ ಇಬ್ಬರು ಯುವಕರು ಅವರ ದ್ವಿಚಕ್ರ ವಾಹನಕ್ಕೆ ತಮ್ಮ ಬೈಕ್‌ನ್ನು ಅಡ್ಡವಾಗಿ ಇಟ್ಟರು.
ವಾಹನದಲ್ಲಿದ್ದ ಇಬ್ಬರ ಪೈಕಿ ಓರ್ವ ಚೂರಿಯೊಂದಿಗೆ ಮಹಮ್ಮದ್ ಫರ್ವೆಜ್ ಅವರ ಬಳಿಗೆ ಬಂದು ದ್ವಿಚಕ್ರ ವಾಹನದ ಢಿಕ್ಕಿ ತೆರೆಯುವಂತೆ ತಿಳಿಸಿದ. ತೆಗೆಯಲು ನಿರಾಕರಿಸಿದಾಗ ಅವರಿಗೆ ಹಲ್ಲೆ ಮಾಡಲು ಪ್ರಯತ್ನಿಸಿದ್ದು ನಂತರ ಸೀಟನ್ನು ತೆಗೆದು ಪ್ಲಾಸ್ಟಿಕ್ ತೊಟ್ಟೆಯಲಿದ್ದ 22,000 ರೂ, ನಗದು ಹಾಗೂ 1 ಚಿನ್ನದ ಉಂಗುರವನ್ನು ತೆಗೆದು ಬೈಕಿನಲ್ಲಿ ಪರಾರಿಯಾಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮಂಗಳೂರು ದಕ್ಷಿಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.