ಉಡುಪಿ ಜಿಪಂ ನೂತನ ಸಿಇಒ ಆಗಿ ಯುಪಿಎಸ್ ಸಿ ಟಾಪರ್ ನವೀನ್ ಭಟ್ ಅಧಿಕಾರ ಸ್ವೀಕಾರ
ಉಡುಪಿ: ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಕಾರಿಯಾಗಿ ಡಾ.ನವೀನ್ ಭಟ್ ವೈ. ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ನಿರ್ಗಮನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಕಾರಿ ಪ್ರೀತಿ ಗೆಹ್ಲೋಟ್ ಅವರು ಡಾ. ನವೀನ್ ಭಟ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ನಿವಾಸಿ 28 ವರ್ಷದ ನವೀನ್ ಭಟ್ 2017ರ ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದಿದ್ದರು. ಐಎಎಸ್ ಕರ್ನಾಟಕ ಕೇಡರ್ ಸೇವೆಗೆ ಆಯ್ಕೆಯಾಗಿ ಪ್ರೊಬೆಷನರಿ ತರಬೇತಿ ಮುಗಿಸಿದ್ದರು. ವೈದ್ಯರೂ ಆಗಿರುವ ಹಿನ್ನೆಲೆಯಲ್ಲಿ ಇವರಿಗೆ ದೆಹಲಿಯಲ್ಲಿ 3 ತಿಂಗಳು ಕೇಂದ್ರ ಆರೋಗ್ಯ ಇಲಾಖೆಗೆ ಸಂಬಂಧಿಸಿ ಅಸಿಸ್ಟೆಂಟ್ ಸೆಕ್ರೆಟರಿ ಹುದ್ದೆಯ ತರಬೇತಿ ನೀಡಲಾಗಿತ್ತು. ಬಳಿಕ ಹಾಸನ ಜಿಲ್ಲೆ ಉಪ ವಿಭಾಗ ಆಯುಕ್ತರಾಗಿ 10 ತಿಂಗಳಿನಿಂದ ಸೇವೆ ಸಲ್ಲಿಸುತ್ತಿದ್ದರು.