ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ: ಮೇ 13 ರಂದು ನೇರ ಸಂದರ್ಶನ
ಉಡುಪಿ: ಕೋವಿಡ್-19 ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ , ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸಲು ವೈದ್ಯಕೀಯ ಸೇವೆಯನ್ನು ಒದಗಿಸಲು ಅಗತ್ಯವಿರುವ ಹುದ್ದೆಗಳಿಗೆ, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಈ ಮೊದಲು ಪ್ರಕಟಣೆ ನೀಡಿದ್ದು, ಹೆಚ್ಚಿನ ಹುದ್ದೆಗಳು ಭರ್ತಿಯಾಗದ ಕಾರಣ ಹಲವು ಹುದ್ದೆಗಳು ಖಾಲಿ ಇವೆ.
ಈ ಹುದ್ದೆಗಳಿಗಾಗಿ, ಮೇ 13 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಆಸ್ಪತ್ರೆಯ , ಜಿಲ್ಲಾ ಸರ್ಜನರ ಕೊಠಡಿಯಲ್ಲಿ ನೇರ ಸಂದರ್ಶನ ನಡೆಯಲಿದೆ.
ಖಾಲಿ ಹುದ್ದೆ ವಿವರ : ವೈದ್ಯರು /ತಜ್ಞರು 6 ಹುದ್ದೆಗಳು (ವೇತನ 60,000),ವಿದ್ಯಾರ್ಹತೆ : ಎಂಬಿಬಿಎಸ್/ತಜ್ಞತೆ(ಸರ್ಕಾರದಿAದ ಮಾನ್ಯತೆ ಪಡೆದ ವಿವಿ ಯಿಂದ ಪದವಿ ಆಗಿರಬೇಕು), ಶುಶ್ರೂಶಕರು 16 ಹುದ್ದೆಗಳು (ವೇತನ 20,000), ವಿದ್ಯಾರ್ಹತೆ : ಕರ್ನಾಟಕ ಸರ್ಕಾರದ ನೊಂದಾಯಿತ ಸಂಸ್ಥೆಗಳಿAದ ಜಿ.ಎನ್.ಎಂ/ಬಿ.ಎಸ್ಸಿ ನರ್ಸಿಂಗ್ ಪದವಿ ಪಡೆದಿರಬೇಕು.
ಅರ್ಜಿಯೊಂದಿಗೆ ವಿದ್ಯಾರ್ಹತೆಗೆ ಸಂಬದಿಸಿದ ಎಲ್ಲಾ ಅಂಕಪಟ್ಟಿಗಳ ಮೂಲ ಪ್ರತಿಗಳನ್ನು ಸಂದರ್ಶನಕ್ಕೆ ಬರುವಾಗ ತರಬೇಕು, ಹೆಚ್ಚಿನ ಮಾಹಿತಿಗೆ ಜಿಲ್ಲಾ ಸರ್ಜನ್ ರ ಮೊಬೈಲ್ ಸಂ. 9449843181 ಅಥವಾ ಜಿಲ್ಲಾ ಸರ್ಜನರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಸರ್ಜನ್ ಅವರ ಪ್ರಕಟಣೆ ತಿಳಿಸಿದೆ.