Home Mangalorean News Kannada News ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಸವರಾಜ ಬೊಮ್ಮಾಯಿ, ದಕ ಗೆ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಸವರಾಜ ಬೊಮ್ಮಾಯಿ, ದಕ ಗೆ ಕೋಟ ಶ್ರೀನಿವಾಸ ಪೂಜಾರಿ

Spread the love

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಸವರಾಜ ಬೊಮ್ಮಾಯಿ, ದಕ ಗೆ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಹೆಚ್ಚು ಕಡಿಮೆ ಸಂಪುಟ ವಿಸ್ತರಣೆಯಾಗಿ ಒಂದು ತಿಂಗಳ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊನೆಗೂ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ನೇಮಕ ಮಾಡಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿಯನ್ನು ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯನ್ನು ನೇಮಿಸಿದ್ದಾರೆ.

ಹೆಚ್ಚಿನ ಸಚಿವರಿಗೆ ಎರಡೆರಡು ಜಿಲ್ಲೆಗಳನ್ನು ಉಸ್ತುವಾರಿ ನೀಡಲಾಗಿದ್ದು, ಇವುಗಳಲ್ಲಿ ಒಂದು ಜಿಲ್ಲೆಯನ್ನು ಅಧಿಕ ಪ್ರಭಾರ ನೆಲೆಯಲ್ಲಿ ನೀಡಲಾಗಿದೆ. ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಈ ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿಯನ್ನು ಹಾಲಿ ಮಂತ್ರಿಗಳು ಕಳೆದುಕೊಳ್ಳಲಿದ್ದಾರೆ.

ರಾಜ್ಯದ ಸಚಿವರು ಮತ್ತು ಅವರ ಉಸ್ತುವಾರಿ ಜಿಲ್ಲೆಗಳ ಪಟ್ಟಿ ಈ ಕೆಳಗಿನಂತಿದೆ,
* ಬಿ.ಎಸ್. ಯಡಿಯೂರಪ್ಪ – ಬೆಂಗಳೂರು ನಗರ
* ಗೋವಿಂದ ಎಂ. ಕಾರಜೋಳ – ಬಾಗಲಕೋಟೆ, ಕಲಬುರಗಿ (ಹೆಚ್ಚುವರಿ)
* ಡಾ. ಅಶ್ವಥ್ ನಾರಾಯಣ್ – ರಾಮನಗರ, ಚಿಕ್ಕಬಳ್ಳಾಪುರ (ಹೆಚ್ಚುವರಿ)
* ಲಕ್ಷ್ಮಣ ಸವದಿ – ಬಳ್ಳಾರಿ, ಕೊಪ್ಪಳ (ಹೆಚ್ಚುವರಿ)
* ಕೆ.ಎಸ್. ಈಶ್ವರಪ್ಪ – ಶಿವಮೊಗ್ಗ, ದಾವಣಗೆರೆ (ಹೆಚ್ಚುವರಿ)
* ಆರ್. ಅಶೋಕ್ – ಬೆಂಗಳೂರು ಗ್ರಾಮಾಂತರ, ಮಂಡ್ಯ (ಹೆಚ್ಚುವರಿ)
* ಬಿ. ಶ್ರೀರಾಮುಲು – ರಾಯಚೂರು, ಚಿತ್ರದುರ್ಗ (ಹೆಚ್ಚುವರಿ)
* ಎಸ್. ಸುರೇಶ್ ಕುಮಾರ್ – ಚಾಮರಾಜನಗರ
* ವಿ. ಸೋಮಣ್ಣ – ಮೈಸೂರು, ಮಡಿಕೇರಿ (ಹೆಚ್ಚುವರಿ)
* ಸಿ.ಟಿ. ರವಿ – ಚಿಕ್ಕಮಗಳೂರು
* ಬಸವರಾಜ ಬೊಮ್ಮಾಯಿ – ಉಡುಪಿ, ಹಾವೇರಿ (ಹೆಚ್ಚುವರಿ)
* ಕೋಟ ಶ್ರೀನಿವಾಸ ಪೂಜಾರಿ – ದಕ್ಷಿಣ ಕನ್ನಡ
* ಜೆ.ಸಿ. ಮಾಧುಸ್ವಾಮಿ – ತುಮಕೂರು, ಹಾಸನ (ಹೆಚ್ಚುವರಿ)
* ಸಿ.ಸಿ. ಪಾಟೀಲ್ – ಗದಗ, ವಿಜಯಪುರ (ಹೆಚ್ಚುವರಿ)
* ಎಚ್. ನಾಗೇಶ್ – ಕೋಲಾರ
* ಪ್ರಭು ಚೌವ್ಹಾಣ್ – ಬೀದರ್, ಯಾದಗಿರಿ (ಹೆಚ್ಚುವರಿ)
* ಶಶಿಕಲಾ ಜೊಲ್ಲೆ – ಉತ್ತರ ಕನ್ನಡ


Spread the love

Exit mobile version