Home Mangalorean News Kannada News ಉಡುಪಿ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ಸ್ನೇಹಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ

ಉಡುಪಿ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ಸ್ನೇಹಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ

Spread the love

ಉಡುಪಿ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ಸ್ನೇಹಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ

ಉಡುಪಿ: ಉಡುಪಿ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ನಗರದ ಸ್ನೇಹಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವ ಮೂಲಕ ಮಂಗಳವಾರ ಆಚರಿಸಿದರು.

ಸ್ನೇಹಾಲಯದ ಆವರಣದಲ್ಲಿ ಹಣ್ಣಿನ ಮತ್ತು ಆಯುರ್ವೇದ ಸಸ್ಯಗಳ ಗಿಡಗಳನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಜಿಲ್ಲಾ ಎನ್ ಎಸ್ ಯು ಐ ಅಧ್ಯಕ್ಷ ಕ್ರಿಸ್ಟನ್ ಡಿಆಲ್ಮೇಡಾ ಚಾಲನೆ ನೀಡಿದರು.

ಈ ವೇಳೆ ಮಾತನಾಡಿ ಕ್ರಿಸ್ಟನ್ ಡಿಆಲ್ಮೇಡಾ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಸಸಿ ನೆಡುವುದು ಮಾತ್ರವಲ್ಲ; ಅದನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.

ಸ್ನೇಹಾಲಯ ಸಂಸ್ಥೆಯ ಮೇಲ್ವೀಚಾರಕ ಚಾರ್ಲ್ಸ್ ಅಂಬ್ಲರ್, ಮಾಜಿ ಎನ್.ಎಸ್.ಯು.ಐ ನಾಯಕ ಮೆಲ್ವಿನ್ ಸಿಕ್ವೇರಾ, ಎನ್.ಎಸ್.ಯು.ಐ ಸದಸ್ಯರಾರದ ದೀಪಕ್, ಸರೋಶ್, ಮಾರ್ಸ್, ಡಿಯೋನ್, ಪ್ರಜ್ವಲ್, ಯುವ ಕಾಂಗ್ರೆಸ್ ನಾಯಕರಾದ ನೀರಜ್ ಪಾಟೀಲ್, ಜೋಯೆಲ್ ಸೋನ್ಸ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version