Home Mangalorean News Kannada News ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂ.ವರ್ಗಗಳ ಬ್ಲಾಕ್ ಘಟಕಗಳ ಅಧ್ಯಕ್ಷರಿಗೆ ಅಭಿನಂದನೆ

ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂ.ವರ್ಗಗಳ ಬ್ಲಾಕ್ ಘಟಕಗಳ ಅಧ್ಯಕ್ಷರಿಗೆ ಅಭಿನಂದನೆ

Spread the love
RedditLinkedinYoutubeEmailFacebook MessengerTelegramWhatsapp

ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂ.ವರ್ಗಗಳ ಬ್ಲಾಕ್ ಘಟಕಗಳ ಅಧ್ಯಕ್ಷರಿಗೆ ಅಭಿನಂದನೆ

ಉಡುಪಿ : ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ಘಟಕದ ವತಿಯಿಂದ ಬ್ಲಾಕ್ ಘಟಕಗಳಿಗೆ ನೂತನ ಅಧ್ಯಕ್ಷರುಗಳ ನೇಮಕ ಹಾಗೂ ಅಭಿನಂಧನಾ ಸಮಾರಂಭ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜರುಗಿತು.

ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಸಚಿವ ಪ್ರಮೋದ್ ಮಧ್ವರಾಜ್, ಕಾಪು ಶಾಸಕ ವಿನಯ್ ಕುಮಾರ್ ಸೊರಕೆ, ಬೈಂದೂರು ಶಾಸಕ ಗೋಪಾಲ ಪೂಜಾರಿ, ವಿಧಾನಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿಯವರ ಶಿಫಾರಸ್ಸಿನಂತೆ ನೇಮಕ ಪ್ರಕ್ರಿಯೆ ನಡೆಯಿತು. ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ನೂತನ ಅಧ್ಯಕ್ಷರುಗಳಿಗೆ ಅಭಿನಂಧಿಸಿದರು.

10 ಬ್ಲಾಕ್ ಘಟಕಗಳ ಅಧ್ಯಕ್ಷರುಗಳಾಧ ಜತೀನ್ ಕಡೆಕಾರ್ (ಉಡುಪಿ), ರಾಘವೇಂದ್ರ ಬಿ ಕೆ (ಬ್ರಹ್ಮಾವರ), ನವೀನ್ ದೇವಾಡಿಗ (ಕಾರ್ಕಳ), ದೀಪಕ್ ಎರ್ಮಾಳ್ (ಕಾಪು), ಚರಣ್ ವಿಠಲ್ (ಹಿರಿಯಡ್ಕ), ದಿನೇಶ್ ಬಂಗೇರ (ಕೋಟ), ಕೃಷ್ಣಪ್ಪ ಪೂಜಾರಿ (ಕುಂದಾಪುರ), ಮಂಜುನಾಥ ಖಾರ್ವಿ (ಬೈಂದೂರು), ಚಂದ್ರ ನಾಯಕ್ (ವಂಡ್ಸೆ), ಬೋಜ ಪೂಜಾರಿ (ಹೆಬ್ರಿ) ಅಭಿನಂದಿಸಲಾಯಿತು.

ಈ ವೇಳೆ ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷ ಯತೀಶ್ ಕರ್ಕೇರಾ, ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ಘಟಕದ ಉಸ್ತುವಾರಿಗಳಾದ ಪ್ರಖ್ಯಾತ್ ಶೆಟ್ಟಿ, ಜಯಶ್ರೀ ಕೃಷ್ಣರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಎಮ್ ಎ ಗಫೂರ್, ಕಾಂಗ್ರೆಸ್ ನಾಯಕರಾದ ಮುರಳಿ ಶೆಟ್ಟಿ, ನರಸಿಂಹಮೂರ್ತಿ, ಮಹಾಬಲ ಕುಂದರ್, ಶಂಕರ್ ಕುಂದರ್ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

Exit mobile version