Home Mangalorean News Kannada News ಉಡುಪಿ: ಜಿಲ್ಲಾ ಪೋಲಿಸ್ ಇಲಾಖೆಯ ನೂತನ ವೆಬ್ ಸೈಟ್ ಎಸ್ಪಿ ಅಣ್ಣಾಮಲೈರಿಂದ ಚಾಲನೆ

ಉಡುಪಿ: ಜಿಲ್ಲಾ ಪೋಲಿಸ್ ಇಲಾಖೆಯ ನೂತನ ವೆಬ್ ಸೈಟ್ ಎಸ್ಪಿ ಅಣ್ಣಾಮಲೈರಿಂದ ಚಾಲನೆ

Spread the love

ಉಡುಪಿ: ಉಡುಪಿ ಜಿಲ್ಲಾ ಪೋಲಿಸ್ ಇಲಾಖೆಯ ನೂತನ ವೆಬ್‍ಸೈಟ್ www.udupipolice.org ನ್ನು ಬುಧವಾರ ಜಿಲ್ಲಾ ಪೋಲಿಸ್ ಅಧೀಕ್ಷಕ ಅಣ್ಣಾಮಲೈ ಲೋಕಾರ್ಪಣೆಗೊಳಿಸಿದರು.

ನೂತನ ವೆಬ್‍ಸೈಟ್‍ನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಇಲಾಖೆಗೆ ಸಂಬಧಿಸಿದ ಎಲ್ಲಾ ರೀತಿಯ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಲಾಗುತ್ತದೆ. ಇನ್ನು ಮುಂದೆ ಜಿಲ್ಲಾ ಪೋಲಿಸ್ ಬ್ಲಾಗ್ ಕಾರ್ಯಾಚರಣೆ ಸ್ಥಗಿತಗೊಳಿಸಲಿದ್ದು, ಅಪರಾಧಗಳಿಗೆ ಸಂಬಂಧಿಸಿದ ಮಾಹಿತಿ ವೈಬ್‍ಸೈಟ್‍ನಲ್ಲಿ ದೊರೆಯಲಿದೆ ಎಂದು ಅಣ್ಣಾಮಲೈ ತಿಳಿಸಿದರು.

 ಆರ್‍ಟಿಐ ಬಗ್ಗೆ, ಪೋಲಿಸ್ ಪದಕಗಳು ದೊರೆತವರ ಬಗ್ಗೆ, ಇಲಾಖೆಗೆ ಬೇಕಾದ ಅಪರಾಧಿಗಳ ಚಿತ್ರ ಸಹಿತ ಮಾಹಿತಿ, ನಾಪತ್ತೆಯಾಗದವರ ಬಗ್ಗೆ ಚಿತ್ರ ಸಹಿತ ಮಾಹಿತಿ, ಕಿರು ಮಾಹಿತಿಯ ವೀಡಿಯೋಗಳು ವೆಬ್‍ಸೈಟ್‍ನಲ್ಲಿದೆ. ಸಕಾಲ, ಆನ್‍ಲೈನ್ ಅಪ್ಲಿಕೇಶನ್‍ಗಳೂ ಬ್ಲಾಗ್‍ನಲ್ಲಿದೆ. ಅಲ್ಲದೆ ಮುಖ್ಯವಾಗಿ ಪಾಸ್ ಪೋರ್ಟ್ಗೆ ಸಂಬಂಧಿಸಿದ ಮಾಹಿತಿಯನ್ನೂ ವೆಬ್‍ಸೈಟ್‍ನಲ್ಲಿ ಪಡೆಯಬಹುದಾಗಿದೆ. ಅಪರಾಧ ಕೃತ್ಯಗಳಿಗೆ ಸಂಬಧಿಸಿ ಮಾಧ್ಯಮಗಳಿಗೆ ಮಾಹಿತಿಯನ್ನು  ಬೆಳಗ್ಗೆ 8.30ಕ್ಕೆ ಹಾಗೂ ಸಾಯಂಕಾಲ 7ಕ್ಕೆ ಅಪ್‍ಡೇಟ್ ಮಾಡಲಾಗುತ್ತದೆ ಎಂದು ಅಣ್ಣಾಮಲೈ ತಿಳಿಸಿದರು.

policewebsite_udupi 23-09-2015 12-15-29

 ಸುರಕ್ಷಾ ಪೋಲಿಸ್ ಆ್ಯಪನ್ನು ಮೇಲ್ದರ್ಜೆಗೇರಿಸಲಾಗಿದ್ದು, ಆ್ಯಂಡ್ರಾಯ್ಡ್ ವರ್ಶನ್‍ನೊಂದಿಗೆ ಆ್ಯಪಲ್ ಫೋನ್ ಗಳಲ್ಲಿಯೂ ದೊರೆಯುವಂತೆ ಮಾಡಲಾಗಿದೆ. ಅಲ್ಲದೆ ಟೂರಿಸ್ಟ್‍ಗಳು ಉಡುಪಿಗೆ ಬಂದಿರುವ ವೇಳೆ ಯಾವುದಾದರೂ ಅವಘಡಗಳು ಸಂಭವಿಸಿದರೆ ಸುಲಭವಾಗುವಂತೆ ಆ್ಯಪ್‍ನಲ್ಲಿ ಹತ್ತಿರದ ಠಾಣಾ ದೂರವಾಣಿ ಸಂಖ್ಯೆ, ಎಸ್‍ಐ ನಂಬರ್ ಹಾಗೂ ರೂಟ್ ನ್ಯಾವಿಗೇಶನ್ ಅಳವಡಿಸಲಾಗಿದೆ. ಈಗಾಗಲೇ ಸುಮಾರು 7ಸಾವಿರಕ್ಕೂ ಅಧಿಕ ಮಂದಿ ಆ್ಯಪ್ ಡೌನ್‍ಲೋಡ್ ಮಾಡಿದ್ದಾರೆ. 400 ಕಂಪ್ಲೇಂಟ್‍ಗಳು ರಿಜಿಸ್ಟರ್ ಆಗಿದೆ ಎಂದರು.

 ಉಡುಪಿಯ ಕಲ್ಸಂಕದ ಭಕ್ತ ಟವರ್ಸ್‍ನಲ್ಲಿರುವ ಚಿಪ್ಸಿ ಮೊಬಿಲಿಟಿ ಸರ್ವಿಸ್‍ನವರು ಪೋಲಿಸ್ ಇಲಾಖೆಯ ನೂತನ ವೈಬ್‍ಸೈಟ್ ನಿರ್ಮಾಣ ಮಾಡಿದೆ. ಯುವ ಸಾಫ್ಟ್‍ವೇರ್ ಇಂಜಿನಿಯರ್‍ಗಳಾದ ಸಂದೀಪ್ ಭಕ್ತ, ರಾಮಚಂದ್ರ, ಶ್ರೀನಿಧಿ, ಲಕ್ಷ್ಮೀಶ್ ಹಾಗೂ ಸಚಿನ್ ಭಂಡಾರಿ ನೇತೃತ್ವದ ತಂಡ ವೆಬ್‍ಸೈಟ್ ನಿರ್ಮಾಣ ಮಾಡಿದೆ. ಸುರಕ್ಷಾ ಪೋಲಿಸ್ ಆ್ಯಪನ್ನೂ ಇದೇ ತಂಡ ನಿರ್ಮಾಣ ಮಾಡಿತ್ತು.

ಹೆಚ್ಚುವರಿ ಪೋಲಿಸ್ ಅಧೀಕ್ಷಕ ಸಂತೋಷ್ ಕುಮಾರ್ ಉಡುಪಿ ಉಪ ವಿಭಾಗದ ಡಿವೈಎಸ್‍ಪಿ ಚಂದ್ರಶೇಖರ್, ಕಾರ್ಕಳ ಎಎಸ್‍ಪಿ ಸುಮನ್ ಉಪಸ್ಥಿತರಿದ್ದರು.

ಉಡುಪಿ: ಜಿಲ್ಲಾ ಪೋಲಿಸ್ ಇಲಾಖೆಯ ನೂತನ ವೆಬ್ ಸೈಟ್ ಎಸ್ಪಿ ಅಣ್ಣಾಮಲೈರಿಂದ ಚಾಲನೆ

ಉಡುಪಿ: ಉಡುಪಿ ಜಿಲ್ಲಾ ಪೋಲಿಸ್ ಇಲಾಖೆಯ ನೂತನ ವೆಬ್‍ಸೈಟ್ ನ್ನು ಬುಧವಾರ ಜಿಲ್ಲಾ ಪೋಲಿಸ್ ಅಧೀಕ್ಷಕ ಅಣ್ಣಾಮಲೈ ಲೋಕಾರ್ಪಣೆಗೊಳಿಸಿದರು.

ನೂತನ ವೆಬ್‍ಸೈಟ್‍ನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಇಲಾಖೆಗೆ ಸಂಬಧಿಸಿದ ಎಲ್ಲಾ ರೀತಿಯ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಲಾಗುತ್ತದೆ. ಇನ್ನು ಮುಂದೆ ಜಿಲ್ಲಾ ಪೋಲಿಸ್ ಬ್ಲಾಗ್ ಕಾರ್ಯಾಚರಣೆ ಸ್ಥಗಿತಗೊಳಿಸಲಿದ್ದು, ಅಪರಾಧಗಳಿಗೆ ಸಂಬಂಧಿಸಿದ ಮಾಹಿತಿ ವೈಬ್‍ಸೈಟ್‍ನಲ್ಲಿ ದೊರೆಯಲಿದೆ ಎಂದು ಅಣ್ಣಾಮಲೈ ತಿಳಿಸಿದರು.

 ಆರ್‍ಟಿಐ ಬಗ್ಗೆ, ಪೋಲಿಸ್ ಪದಕಗಳು ದೊರೆತವರ ಬಗ್ಗೆ, ಇಲಾಖೆಗೆ ಬೇಕಾದ ಅಪರಾಧಿಗಳ ಚಿತ್ರ ಸಹಿತ ಮಾಹಿತಿ, ನಾಪತ್ತೆಯಾಗದವರ ಬಗ್ಗೆ ಚಿತ್ರ ಸಹಿತ ಮಾಹಿತಿ, ಕಿರು ಮಾಹಿತಿಯ ವೀಡಿಯೋಗಳು ವೆಬ್‍ಸೈಟ್‍ನಲ್ಲಿದೆ. ಸಕಾಲ, ಆನ್‍ಲೈನ್ ಅಪ್ಲಿಕೇಶನ್‍ಗಳೂ ಬ್ಲಾಗ್‍ನಲ್ಲಿದೆ. ಅಲ್ಲದೆ ಮುಖ್ಯವಾಗಿ ಪಾಸ್ ಪೋರ್ಟ್ಗೆ ಸಂಬಂಧಿಸಿದ ಮಾಹಿತಿಯನ್ನೂ ವೆಬ್‍ಸೈಟ್‍ನಲ್ಲಿ ಪಡೆಯಬಹುದಾಗಿದೆ. ಅಪರಾಧ ಕೃತ್ಯಗಳಿಗೆ ಸಂಬಧಿಸಿ ಮಾಧ್ಯಮಗಳಿಗೆ ಮಾಹಿತಿಯನ್ನು  ಬೆಳಗ್ಗೆ 8.30ಕ್ಕೆ ಹಾಗೂ ಸಾಯಂಕಾಲ 7ಕ್ಕೆ ಅಪ್‍ಡೇಟ್ ಮಾಡಲಾಗುತ್ತದೆ ಎಂದು ಅಣ್ಣಾಮಲೈ ತಿಳಿಸಿದರು.

 ಸುರಕ್ಷಾ ಪೋಲಿಸ್ ಆ್ಯಪನ್ನು ಮೇಲ್ದರ್ಜೆಗೇರಿಸಲಾಗಿದ್ದು, ಆ್ಯಂಡ್ರಾಯ್ಡ್ ವರ್ಶನ್‍ನೊಂದಿಗೆ ಆ್ಯಪಲ್ ಫೋನ್ ಗಳಲ್ಲಿಯೂ ದೊರೆಯುವಂತೆ ಮಾಡಲಾಗಿದೆ. ಅಲ್ಲದೆ ಟೂರಿಸ್ಟ್‍ಗಳು ಉಡುಪಿಗೆ ಬಂದಿರುವ ವೇಳೆ ಯಾವುದಾದರೂ ಅವಘಡಗಳು ಸಂಭವಿಸಿದರೆ ಸುಲಭವಾಗುವಂತೆ ಆ್ಯಪ್‍ನಲ್ಲಿ ಹತ್ತಿರದ ಠಾಣಾ ದೂರವಾಣಿ ಸಂಖ್ಯೆ, ಎಸ್‍ಐ ನಂಬರ್ ಹಾಗೂ ರೂಟ್ ನ್ಯಾವಿಗೇಶನ್ ಅಳವಡಿಸಲಾಗಿದೆ. ಈಗಾಗಲೇ ಸುಮಾರು 7ಸಾವಿರಕ್ಕೂ ಅಧಿಕ ಮಂದಿ ಆ್ಯಪ್ ಡೌನ್‍ಲೋಡ್ ಮಾಡಿದ್ದಾರೆ. 400 ಕಂಪ್ಲೇಂಟ್‍ಗಳು ರಿಜಿಸ್ಟರ್ ಆಗಿದೆ ಎಂದರು.

 ಉಡುಪಿಯ ಕಲ್ಸಂಕದ ಭಕ್ತ ಟವರ್ಸ್‍ನಲ್ಲಿರುವ ಚಿಪ್ಸಿ ಮೊಬಿಲಿಟಿ ಸರ್ವಿಸ್‍ನವರು ಪೋಲಿಸ್ ಇಲಾಖೆಯ ನೂತನ ವೈಬ್‍ಸೈಟ್ ನಿರ್ಮಾಣ ಮಾಡಿದೆ. ಯುವ ಸಾಫ್ಟ್‍ವೇರ್ ಇಂಜಿನಿಯರ್‍ಗಳಾದ ಸಂದೀಪ್ ಭಕ್ತ, ರಾಮಚಂದ್ರ, ಶ್ರೀನಿಧಿ, ಲಕ್ಷ್ಮೀಶ್ ಹಾಗೂ ಸಚಿನ್ ಭಂಡಾರಿ ನೇತೃತ್ವದ ತಂಡ ವೆಬ್‍ಸೈಟ್ ನಿರ್ಮಾಣ ಮಾಡಿದೆ. ಸುರಕ್ಷಾ ಪೋಲಿಸ್ ಆ್ಯಪನ್ನೂ ಇದೇ ತಂಡ ನಿರ್ಮಾಣ ಮಾಡಿತ್ತು.

ಹೆಚ್ಚುವರಿ ಪೋಲಿಸ್ ಅಧೀಕ್ಷಕ ಸಂತೋಷ್ ಕುಮಾರ್ ಉಡುಪಿ ಉಪ ವಿಭಾಗದ ಡಿವೈಎಸ್‍ಪಿ ಚಂದ್ರಶೇಖರ್, ಕಾರ್ಕಳ ಎಎಸ್‍ಪಿ ಸುಮನ್ ಉಪಸ್ಥಿತರಿದ್ದರು.

Spread the love

Exit mobile version