Home Mangalorean News Kannada News ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿಯಾಗಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಆಯ್ಕೆ

ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿಯಾಗಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಆಯ್ಕೆ

Spread the love

ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿಯಾಗಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಆಯ್ಕೆ

ಉಡುಪಿ: ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿಯಾಗಿದ್ದ ತಾಜುಲ್ ುಖಹಾಅ ಬೇಕಲ್ ಉಸ್ತಾದರ ವಿಯೋಗದಿಂದ ತೆರವಾದ ಸ್ಥಾನಕ್ಕೆ ನೂತನ ಖಾಝಿಯಾಗಿ ಕರ್ನಾಟಕ ಸುನ್ನೀ ಉಲಮಾ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕನ್ನಡ ನಾಡಿನ ಖ್ಯಾತ ವಿದ್ವಾಂಸ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್ ಅವರನ್ನು ನೇಮಿಸಲಾಗಿದೆ.

ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್

ಸಂಯುಕ್ತ ಜಮಾಅತ್ ಸರ್ವ ಸದಸ್ಯರ ಸಭೆಯಲ್ಲಿ ತೆಗೆದುಕೊಂಡ ಸರ್ವಾನುಮತ ಈ ತೀರ್ಮಾನವನ್ನು ಉಡುಪಿಯ ಮಣಿಪಾಲ ಇನ್ ಹೊಟೇಲಿನಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಜಮಾಅತ್ ನಿರ್ದೇಶಕ ಯು.ಕೆ. ಮುಸ್ತ ಸಅದಿ ಪ್ರಕಟಿಸಿದರು.

ಅ.10ರಂದು ಬೆಳಗ್ಗೆ 10ಗಂಟೆಗೆ ಮೂಳೂರು ಕೇಂದ್ರ ಮಸೀದಿಯಲ್ಲಿ ಖಾಝಿ ಸ್ವೀಕಾರ ಸಮಾರಂ‘ವು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಾದಾತುಗಳು, ಉನ್ನತ ಉಲಮಾಗಳು, ಉಮರಾ ನಾಯಕರು ‘ಾಗವಹಿ ಸಲಿರುವರು. ಮಾಣಿ ಉಸ್ತಾದ್, ಸಂಯುಕ್ತ ಜಮಾಅತ್ ವ್ಯಾಪ್ತಿಯ ಉಡುಪಿ ಜಿಲ್ಲೆಯ ಸುಮಾರು 100 ಮಸೀದಿಗಳಿಗೆ ಖಾಝಿಯಾಗಿ ಕಾರ್ಯನಿರ್ವ ಹಿಸಲಿರುವರು.

ಅದೇ ದಿನ ಬೆಳಗ್ಗೆ 11ಗಂಟೆಗೆ ಅಗಲಿದ ಶೈಖುನಾ ಖಾಝಿ ಬೇಕಲ ಉಸ್ತಾದರ ಹೆಸರಿನಲ್ಲಿ ಜಿಲ್ಲಾಮಟ್ಟದ ಪ್ರಾರ್ಥನಾ ಮಜ್ಲಿಸ್ ಹಾಗೂ ಅನು ಸ್ಮರಣಾ ಸಂಗಮ ನಡೆಯಲಿದೆ. 1997ರಲ್ಲಿ ಜಿಲ್ಲಾ ಖಾಝಿಯಾಗಿ ನೇಮಕ ಗೊಂಡ ಬೇಕಲ ಉಸ್ತಾದ್, ಸುಮಾರು 23ವರ್ಷಗಳ ಕಾಲ ಖಾಝಿಯಾಗಿ ಸೇವೆ ಸಲ್ಲಿಸಿದ್ದರು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಯುಕ್ತ ಜಮಾಅತ್ ಅ‘್ಯಕ್ಷ ಹಾಜಿ ಪಿ.ಅಬೂಬಕ್ಕರ್ ನೇಜಾರು, ಸಂಘಟನಾ ಕಾರ್ಯದರ್ಶಿ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಪ್ರ‘ಾನ ಕಾರ್ಯದರ್ಶಿ ಹಾಜಿ ಎಂ.ಎ.ಬಾವು ಮೂಳೂರು, ಕಾಪು ಉಸ್ತಾದ್ ಅಹ್ಮದ್ ಖಾಸಿಮಿ, ಮೂಳೂರು ಕೇಂದ್ರ ಮಸೀದಿ ಅ‘್ಯಕ್ಷ ಎಂಎಚ್ಬಿ ಮುಹಮ್ಮದ್, ಎಚ್.ಐ.ಯೂಸ್ು ಸಖಾಫಿ ಕೋಡಿ, ಅಶ್ರ್ ಸಖಾಫಿ ಕನ್ನಂಗಾರ್, ಇಸ್ಮಾಯಿಲ್ ಮುಸ್ಲಿಯಾರ್ ಆಕಳಬೈಲು, ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ಹಾಜಿ ಚೆರಿಯಬ್ಬ ಮಾವಿನಕಟ್ಟೆ, ಎಚ್.ಬಿ.ಮುಹಮ್ಮದ್ ಕನ್ನಂಗಾರ್, ಅಬ್ದುರ್ರಹ್ಮಾನ್ ಸಖಾಫಿ ಕುಂದಾಪುರ, ಅಬ್ದುಲ್ ಲತ್ೀ ಾಳಿಲಿ ನಾವುಂದ, ಮನ್ಸೂರ್ ಮರವಂತೆ, ಅಬ್ದುಲ್ ಸತ್ತಾರ್ ನಾವುಂದ, ಪಿ.ಎಂ.ಅಶ್ರ್ ಅಂಜದಿ, ಬಿಎಸ್ಎ್ ರಫೀಕ್ ಕುಂದಾಪುರ, ಶಹಬಾನ್ ಹಂಗಳೂರು, ಮುಹಮ್ಮದ್ ಅಲಿ ಕೋಡಿ, ಅಬ್ದುಲ್ ಹಮೀದ್ ಅದ್ದು ಮೂಳೂರು, ಅಬ್ದುಲ್ ಅಝೀಝ್ ಹೆಜಮಾಡಿ, ಕಾಸಿಂ ಬಾರ್ಕೂರು, ಹಾಜಿ ಮೊಯ್ದಿನ್ ಗುಡ್ವಿಲ್, ಇಬ್ರಾಹಿಂ ತವಕ್ಕಲ್ ಉಚ್ಚಿಲ, ವೈಬಿಸಿ ಬಾವ ಮೂಳೂರು, ಅಬ್ಬು ಹಾಜಿ ಮೂಳೂರು, ಇಬ್ರಾಹಿಂ ಮಾಣಿಕೊಳಲು, ಹಾಜಿ ಕೆ.ಉಸ್ಮಾನ್ ಉಚ್ಚಿಲ, ಇಬ್ರಾಹಿಂ ಐಡಿಯಲ್ ಮಜೂರು ಮೊದಲಾದವರು ಉಪಸ್ಥಿತರಿದ್ದರು.


Spread the love

Exit mobile version