ಉಡುಪಿ ಜಿಲ್ಲೆಯಲ್ಲಿ ಕೊರೋನಾ ಗೆ ಮೂರನೇ ಬಲಿ – ಬೈಂದೂರಿನ 48 ವರ್ಷದ ವ್ಯಕ್ತಿ ಸಾವು
ಉಡುಪಿ: ಕೊರೋನಾ ಮಹಾ ಮಾರಿಗೆ ಉಡುಪಿ ಜಿಲ್ಲೆಯಲ್ಲಿ ಮೂರನೇ ಬಲಿಯಾಗಿದ್ದು ಬೈಂದೂರು ತಾಲೂಕಿನ 48 ವರ್ಷದ ವ್ಯಕ್ತಿ ಸಾವನಪ್ಪಿದ್ದಾರೆ.
ಮೃತ ವ್ಯಕ್ತಿ ಬಹುವಿಧದ ಖಾಯಿಲೆಯಿಂದ ಬಳಲುತ್ತಿದ್ದು, ಶನಿವಾರ ಮುಂಬೈನಿಂದ ತವರಿಗೆ ವಾಪಾಸಾಗಿದ್ದು ಭಾನುವಾರ ತನ್ನ ಸ್ವಗ್ರಾಮ ಕಾಲ್ತೋಡಿನಲ್ಲಿ ಮೃತಪಟ್ಟಿದ್ದರು. ಮೃತ ವ್ಯಕ್ತಿ ಮಹಾರಾಷ್ಟ್ರದಿಂದ ವಾಪಾಸಾಗಿದ್ದರಿಂದ ಅವರ ಗಂಟಲ ದ್ರವ ಪರೀಕ್ಷೆ ಮಾಡಿದ್ದು ಅದರ ವರದಿ ಮಂಗಳವಾರ ಬಂದಿದ್ದು ಅವರಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ.
ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆ ಆಗಿದೆ.