Home Mangalorean News Kannada News ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಡಾ. ಮಾಧವಿ ಎಸ್. ಭಂಡಾರಿ

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಡಾ. ಮಾಧವಿ ಎಸ್. ಭಂಡಾರಿ

Spread the love

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಡಾ. ಮಾಧವಿ ಎಸ್. ಭಂಡಾರಿ

ಉಡುಪಿ: ಜನವರಿ 7, 2017, ಶನಿವಾರ ನಡೆಯಲಿರುವ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಡಾ. ಮಾಧವಿ ಎಸ್. ಭಂಡಾರಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ವಿ. ವಿ. ಯಿಂದ ದ್ವಿತೀಯ ರ್ಯಾಂಕ್ ನೊಂದಿಗೆ ಎಂ.ಎ. ಹಾಗೂ ಅನುವಾದದಲ್ಲಿ ಡಿಪ್ಲೋಮಾ ಪದವಿ ಪಡೆದಿರುವ ಭಂಡಾರಿಯವರು 1979 ರಿಂದ ಪೂರ್ಣಪ್ರಜ್ಞ ಕಾಲೇಜು, ಉಡುಪಿಯಲ್ಲಿ ಹಿಂದಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿಯಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ. 2004 ರಲ್ಲಿ ‘ರಾಜೇಂದ್ರ ಯಾದವ್ : ಕಥಾ ಸಾಹಿತ್ಯ ಕೇ ವಿವಿಧ ಆಯಾಮ್’ ಮಹಾ ಪ್ರಬಂಧಕ್ಕೆ ಕರ್ನಾಟಕ ವಿ.ವಿ ಯಿಂದ ಡಾಕ್ಟರೇಟ್ ಪದವಿ. ಮಹಾಪ್ರಬಂಧದ ಪುಸ್ತಕ ರೂಪ -ಅಲ್ಕಾ ಪ್ರಕಾಶನ್, ಕಾನ್ಪುರ್‍ದಿಂದ ಪ್ರಕಟ. ‘ಹಿಂದಿ ಮತ್ತು ಕನ್ನಡ ಬೀದಿ ನಾಟಕಗಳಲ್ಲಿ ಹೊರಹೊಮ್ಮಿದ ಜ್ಯಾತ್ಯಾತೀತ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳ ಅಧ್ಯಯನ’ ಯು.ಜಿ. ಸಿ. ರಿಸರ್ಚ್ ಪ್ರೊಜೆಕ್ಟ್. (ಅಚ್ಚಿನಲ್ಲಿದೆ)

madhavi-bhandary

ಇವರ ಸಂಪಾದಿತ ಕೃತಿಗಳು: ಉತ್ಸವದಿಂದ ಉತ್ಸವಕ್ಕೆ (1988 ) -ಕವನ ಸಂಕಲನ, ಕಟ್ಟುವದು ಬಲು ಕಷ್ಟ (1997 ) -ಕವನ ಸಂಕಲನ- [ಕವನಕ್ಕೆ ಸಂಕ್ರಮಣ ಸಾಹಿತ್ಯ ಪ್ರಶಸ್ತಿ], ಗಾಯ (2005 )-ಕಥಾ ಸಂಕಲನ -[ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ]-ಇದರಲ್ಲಿಯ ಹಲವು ಕಥೆಗಳು ಹಿಂದಿ ಹಾಗೂ ಕೊಂಕಣಿ ಭಾಷೆಗಳಿಗೆ ಅನುವಾದಗೊಂಡಿವೆ. ಮಹಿಳೆ ಮತ್ತು ಕೋಮುವಾದ (2006 ) -ವೈಚಾರಿಕ, ಕನ್ನಡಿಯೊಳಗಿನ ಪ್ರತಿಬಿಂಬ (2007 ) –ಕವನ ಸಂಕಲನ

ಕನ್ನಡದಿಂದ ಹಿಂದಿಗೆ:
ಉದ್ಯಾವರ ಮಾಧವ ಆಚಾರ್ಯರ ‘ಪಾಂಚಾಲಿ’ ಏಕವ್ಯಕ್ತಿ ಯಕ್ಷಗಾನ-ಭರತನಾಟ್ಯ ರಂಗಕೃತಿಯ ಹಿಂದಿ ಅನುವಾದ. ಶ್ರೀಮತಿ ವೈದೇಹಿಯವರ ‘ಅಸ್ಪøಶ್ಯರು’ ಕಾದಂಬರಿಯ ಹಿಂದಿ ಅನುವಾದ ‘ಅಂತ್ಯಜ’(2007 )[ರಾಧಾಕೃಷ್ಣ ಪ್ರಕಾಶನ್, ದಿಲ್ಲಿ] ಡಾ. ನಾರಾಯಣ ರಾವ್‍ರ ‘ವಿಚಿತ್ರ ದಾಂಪತ್ಯ ಮತ್ತು ವಿಶಿಷ್ಟ ಕಾಯಿಲೆಗಳು’ ವೈದ್ಯಕೀಯ ಪುಸ್ತಕದ ಹಿಂದಿ ಅನುವಾದ ‘ವೈಚಿತ್ರಪೂರ್ಣ ದಾಂಪತ್ಯ ಔರ್ ವಿಶಿಷ್ಟ ಪ್ರಕಾರ ಕೀ ಚಿಕಿತ್ಸಾ’ (2010)[ ಜಯಭಾರತಿ ಪ್ರಕಾಶನ, ಅಲಹಾಬಾದ್], ದಾಸವರೇಣ್ಯ ಕನಕದಾಸರ ‘ನಳಚರಿತೆ’ ಯ ಗದ್ಯಾನುವಾದದ ಹಿಂದಿ ಅನುವಾದ(2014) ಜವಾಹರ ಪ್ರಕಾಶನ, ಮಥುರಾ ಡಾ. ಮೃತ್ಯುಂಜಯಪ್ಪ ರ ಆತ್ಮಚರಿತ್ರೆ ‘ನನಗೆ ನಾನೇ ಶಿಲ್ಪಿ’ ಯ ಅನುವಾದ ‘ಖುದೀ ಕೊ ಕಿಯಾ ಬುಲಂದ್’ (2015) ಜವಾಹರ ಪ್ರಕಾಶನ, ಮಥುರಾ ವೈದೇಹಿಯವರು ಬರೆದ ಕಮಲಾದೇವಿ: ಒಂದೊಂದೇ ನೆನಪು-ಏಕವ್ಯಕ್ತಿ ನಾಟಕ ದ ಅನುವಾದ ಕಮಲಾದೇವಿ: ಯಾದೋಂಕಾ ಸಿಲಸಿಲಾ ದ ಮೊದಲ ಯಶಸ್ವಿ ಪ್ರಯೋಗ ದಿಲ್ಲಿಯಲ್ಲಿ ಭಾಗೀರಥಿ ಬಾಯಿ ಕದಂರವರಿಂದ. ರಾಜೇಂದ್ರ ಕಾರಂತರ ನಾಟಕ- ‘ನಮ್ಮ-ನಿಮ್ಮೊಳಗೊಬ್ಬ’ ಅನುವಾದ- ಅಪನೋಂ ಕೇ ಬೀಚ ಕಾ ಏಕ್

ಹಿಂದಿಯಿಂದ ಕನ್ನಡಕ್ಕೆ:
ಚಂದ್ರಕಾಂತಾ -ದೇವಕೀನಂದನ ಖತ್ರಿಯವರ ಅದೇ ಹೆಸರಿನ ಹಿಂದೀ ಕಾದಂಬರಿಯ ಅನುವಾದ. (2008 ), ಕಡತದೊಳಗಿನ ಕಥೆಗಳು -ಹಿಂದಿಯಿಂದ ಅನುವಾದಗೊಂಡ ಹೆಸರಾಂತ ಕಥೆಗಾರರ ಕಥೆಗಳ ಸಂಕಲನ(2011), ಅಂತಃಸ್ವರ – ಸುಸ್ಮಿತಾ ಬಾಗ್ಚಿಯವರ ಮೂಲ ಒರಿಯಾ ಕಥೆಗಳ ಅನುವಾದದ ಪುಸ್ತಕ ರೂಪ (2013), ಸಫ್ದರ್ ಹಾಶ್ಮಿಯವರ ‘ಯೇ ದಿಲ್ ಮಾಂಗೇ ಮೋರ ಮತ್ತಿತರ ಬೀದಿ ನಾಟಕಗಳು (2014) ಬಂಡಾಯ ಪ್ರಕಾಶನ, ಹೊನ್ನಾವರ, ದೇವಶಿಶು- ಸುಸ್ಮಿತಾ ಬಾಗ್ಚಿಯವರ ಮೂಲ ಒರಿಯಾ ಕಾದಂಬರಿಯ ಅನುವಾದ ಭಗವಂತನ ಕಂದಮ್ಮಗಳು ತರಂಗ ವಾರ ಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾಗುತ್ತಿಲಿದೆ.

ನಾಟಕಾಭಿನಯ:
25 ಕ್ಕೂ ಹೆಚ್ಚು ರಂಗನಾಟಕ ಹಾಗೂ ಆಕಾಶವಾಣಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗಾಗಿ 10 ಕ್ಕಿಂತ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ.’ಅಜಿತ್ ಅನ್ವರ್ ಆ್ಯಂಟನಿ’ ಭಯೋತ್ಪಾದನಾ ವಿರೋಧಿ ಅಭಿಯಾನದ ಬೀದಿ ನಾಟಕ ರಚನೆ ಹಾಗೂ ನಿರ್ದೇಶನದ ಯಶಸ್ವಿ ಪ್ರಯೋಗ, ‘ಅರಿವು ವರವಾದಾಗ’ –ಮಹಿಳಾ ದೌರ್ಜನ್ಯ ತಡೆ ಸಮಿತಿಯ ಪರವಾಗಿ ನಾಟಕ ರಚನೆ ಹಾಗೂ ನಿರ್ದೇಶನದಲ್ಲಿ ಯಶಸ್ವಿ ಪ್ರಯೋಗ. ನಾಟಕಾಭಿನಯ ಕ್ಷೇತ್ರದಲ್ಲಿ ಮೂರು ಬಾರಿ ರಾಜ್ಯ ಮಟ್ಟದ ಶ್ರೇಷ್ಠ ನಟಿ ಪ್ರಶಸ್ತಿ :

ಟಿ.ವಿ. ಧಾರಾವಾಹಿಗಳಲ್ಲಿ ಅಭಿನಯ :
ಆಬೋಲಿನ –ಯಶವಂತ ಚಿತ್ತಾಲರ ಕತೆ-ರೂಪಾಂತರ ತಂಡ, ಬೆಂಗಳೂರು. ಗುಡ್ಡದ ಭೂತ-ಸದಾನಂದ ಸುವರ್ಣಓನನ್ನ ಬೆಳಕೆ (‘ಅನಾಥೆ’ ಕಾದಂಬರಿ)-ಟಿ.ಎಸ್. ನಾಗಾಭರಣ.ಮಾರಿ ಬಲೆ-ತುಳು ಚಲನಚಿತ್ರ-ಕೃಷ್ಣಪ್ಪ ಉಪ್ಪೂರಕೋಟಿ-ಚೆನ್ನಯ್ಯ- ಕನ್ನಡ ಧಾರಾವಾಹಿ- ಚೆಲ್ಲಡ್ಕ ಚಂದ್ರಹಾಸ ಆಳ್ವ ಯಶೋದೆ-ಧಾರಾವಾಹಿ

ಸಾಹಿತ್ಯಿಕ- ಸಾಂಸ್ಕøತಿಕ ದಸ್ತಾವೇಜು
ದಸರಾ ಕವಿಗೋಷ್ಠಿ, ಆಕಾಶವಾಣಿ ಕವಿಗೋಷ್ಠಿ, ದೂರದರ್ಶನ ಕವಿಗೋಷ್ಠಿ, ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಲನದ ಕವಿಗೋಷ್ಠಿ, ಬನವಾಸಿಯ ಕದಂಬೋತ್ಸವದಲ್ಲಿಯ ಕವಿಗೋಷ್ಠಿ, ಆಳ್ವಾಸ್ ನುಡಿಸಿರಿಯ ‘ಕವಿಸಮಯ-ಕವಿನಮನ’, ಭದ್ರಾವತಿಯಲ್ಲಿ ಅಖಿಲ ಭಾರತ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ.ದೂರ ಶಿಕ್ಷಣ ನಿರ್ದೇಶನಾಲಯ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ,ಧಾರವಾಡದಿಂದ ಎಮ್.ಫಿಲ್ ಹಾಗೂ ಪಿಎಚ್.ಡಿಗೆ ಮಾರ್ಗದರ್ಶಕಿ. ಇದುವರೆಗೆ 10 ಅಭ್ಯರ್ಥಿಗಳು ಎಮ್.ಫಿಲ್ ಹಾಗೂ 07 ಪಿಎಚ್.ಡಿ ಪದವಿ ಪಡೆದಿರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ತಾಲೂಕು ಘಟಕದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಣೆ. ಮಂಗಳೂರು ಆಕಾಶವಾಣಿಯಲ್ಲಿ ಹಿಂದಿ ಪಾಠ, ನಾಟಕಾಭಿನಯ, ಭಾವಗಾನ ಪ್ರಸಾರಗೊಳ್ಳುತ್ತಿದ್ದು, ರಾಷ್ಟ್ರೀಯ ನಾಟಕಗಳ ಅನುವಾದಗಳು ಕರ್ನಾಟಕದ ಎಲ್ಲ ಬಾನುಲಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರಗೊಂಡಿವೆ.

ಸಮ್ಮಾನ
ಲಯನ್ಸ್ ಕ್ಲಬ್, ದಕ್ಷಿಣ ವಲಯ ಉಡುಪಿ ಇವರಿಂದ ಸಾಹಿತ್ಯ ಸಾಧನೆಗಾಗಿ ಸನ್ಮಾನ.(2006),ವಿಶ್ವ ರಂಗಭೂಮಿ ದಿನಾಚರಣೆಯಂದು ಅಮೋಘ(ರಿ) ಉಡುಪಿ ಇವರ ವತಿಯಿಂದ ರಂಗ ಸಾಧನೆಗಾಗಿ ಖ್ಯಾತ ರಂಗನಟಿ ಹಾಗೂ ಚಲನಚಿತ್ರ ನಟಿ ಉಮಾಶ್ರೀಯವರಿಂದ ಸನ್ಮಾನ.(2011), ಹೆಬ್ರಿಯಲ್ಲಿ ಜರುಗಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಸಾಧನೆಗಾಗಿ ಸಮ್ಮಾನ(7-06-20113), ರಾಜ್ಯ ಮಾನವ ಹಕ್ಕುಗಳ ಆಯೋಗ, ವಿಜಯಪುರದಿಂದ ಸದ್ಭಾವನಾ ಪುರಸ್ಕಾರ(21-11-2014), ಸುಮನಸಾ, ಕೊಡವೂರು, ಇವರ ‘ರಂಗಹಬ್ಬ-3’ ರಲ್ಲಿ ರಂಗ ಸಾಧಕಿ ಪ್ರಶಸ್ತಿ (22-02-2015), ‘ನನಗೆ ನಾನೇ ಶಿಲ್ಪಿ’ ಯ ಹಿಂದಿ ಅನುವಾದ ‘ಖುದೀ ಕೊ ಕಿಯಾ ಬುಲಂದ್’ ಕೃತಿಗೆ ಬೆಂಗಳೂರಿನ ಕಮಲಾ ಗೋಯಂಕಾ ಫೌಂಡೇಶನ್‍ನ ಗೋಪಿನಾಥ್ ಗೋಯಂಕಾ ಅನುವಾದ ಪುರಸ್ಕಾರ ಹಾಗೂ ರೂ. 31000/- (10-4-2016)

ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ದೇವಾಡಿಗರ ಒಕ್ಕೂಟ, ಬೈಂದೂರು, ಇವರಿಂದ 2016ರ ದೇವಾಡಿಗ ವೈಭವ ಸಾಧಕ ಪ್ರಶಸ್ತಿ (21-05-2016), ಉತ್ತರ ಪ್ರದೇಶ ಹಿಂದಿ ಸಂಸ್ಥಾನ, ಲಖನೌನಿಂದ ಕನ್ನಡ-ಹಿಂದಿ, ಹಿಂದಿ-ಕನ್ನಡ ಅನುವಾದ ಕ್ಷೇತ್ರಕ್ಕೆ ನೀಡಿದ ಅನುಪಮ ಸೇವೆಗಾಗಿ ಸೌಹಾರ್ದ ಪುರಸ್ಕಾರ ಹಾಗೂ ರೂ. 200000/-(14-09-2016), ಸಿಂಡಿಕೇಟ್ ಬ್ಯಾಂಕ್ ನ 91ನೆಯ ಸಂಸ್ಥಾಪನಾ ದಿನದಂದು ಹಿಂದಿ-ಕನ್ನಡ ಸಾಹಿತ್ಯ ಸೇವೆಗಾಗಿ ಪ್ರಶಸ್ತಿ-ಪತ್ರ ಹಾಗೂ ರೂ.15000/-(20-10-2016), ಉಡುಪಿ ಜಿಲ್ಲಾಡಳಿತದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ-2016 (01-11-2016)


Spread the love

Exit mobile version