Home Mangalorean News Kannada News ಉಡುಪಿ : ತುಳುನಾಡ ರಕ್ಷಣಾ ವೇದಿಕೆ  ಕಲ್ಯಾಣಪುರ ಘಟಕ ಅಸ್ತಿತ್ವಕ್ಕೆ

ಉಡುಪಿ : ತುಳುನಾಡ ರಕ್ಷಣಾ ವೇದಿಕೆ  ಕಲ್ಯಾಣಪುರ ಘಟಕ ಅಸ್ತಿತ್ವಕ್ಕೆ

Spread the love

ಉಡುಪಿ : ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಸಂಘಟನೆ ಕಲ್ಯಾಣಪುರ ಘಟಕವನ್ನು ಭಾನುವಾರ ತು.ರ.ವೇ. ಸ್ಥಾಪಕಾದ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ರವರು ಘಟಕದ ಕಛೇರಿ ಉದ್ಘಾಟನೆ ಮಾಡಿದರು.

tulu-nadu-vedike-kallianpura

ಬಳಿಕ  ನೇಜಾರು ಕೇಂದ್ರ ಮೈದಾನದಲ್ಲಿ ನಡೆಸ ಸಭಾ ಕಾರ್ಯಕ್ರಮವನ್ನು ಉಡುಪಿ ನಗರ ಸಭಾ ಅದ್ಯಕ್ಷೆ ಮೀನಾಕ್ಷಿಯವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ  ಉದ್ಘಾಟಿಸಿದರು,

ಮುಖ್ಯ ಅತಿಥಿಯಾಗಿ ಮಾಜಿ ಶಾಸಕರಾದ ರಘುಪತಿ ಭಟ್ ಮಾತನಾಡಿ ತು.ರ.ವೇ ಅತಿ ವೇಗವಾಗಿ ತನ್ನ ಸಮಾಜಮುಖಿ ಕಾರ್ಯಕ್ರಮದ ಮೂಲಕ ಜನಪ್ರಿಯತೆಯನ್ನು ಪಡೆಯುತ್ತಿದೆ, ತುರವೇಯ ಇಂತಹ ಘಟಕಗಳು ಇನ್ನೂ ಹೆಚ್ಚು ಹುಟ್ಟಲಿ ಈ ಮೂಲಕ ತುಳುವರ ಪರ  ಹೋರಾಡುವ ಯೋಗೀಶ್ ಜಪ್ಪುರವರ ಶ್ರಮ ಫಲಶ್ರುತಿಗೆ ಯಾಗಲಿ ಎಂದು ಹೇಳಿದರು,

ಸಮಾರಂಭದ ಅದ್ಯಕ್ಷತೆಯನ್ನು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾದ್ಯಕ್ಷರಾದ ಯೊಗೀಶ್ ಶೆಟ್ಟಿ ಜಪ್ಪು ವಹಿಸಿ ಅಧ್ಯಕ್ಷೀಯ ಭಾಷಣ ಮಾಡಿ ಮಾತನಾಡಿದ ಇವರು ತುರವೇ ಎಂದಿಗೂ ಜನರ ಪರವಾಗಿ ಕೆಲಸ ಮಾಡುವ ಸಂಘಟನೆಯಾಗಿದ್ದು ರಾಜಕೀಯೇತರ ಜಾತ್ಯಾತೀತ ಮೌಲ್ಯಗಳು ನಮಗೆ ಪ್ರೇರಣೆ ಎಂದರು  ಕಾನೂನು ಬಾಹಿರ ಚಟುವಟಿಕೆಗಳಿಗೆ ನಮ್ಮಲ್ಲಿ ಅವಕಾಶವಿಲ್ಲ ಎಂದರು,

ರಾಜ್ಯ ಯುವ ಘಟಕದ ಪ್ರ.ಕಾರ್ಯದರ್ಶಿ ಸಿರಾಜ್ ಅಡ್ಕರೆ ಪ್ರಾಸ್ತಾವಿಕ ಭಾಷಣ ಮಾಡಿದರು, ಕಲ್ಯಾಣ್ಪುರ ಘಟಕದ ನೂತನ ಅಧ್ಯಕ್ಷರಾಗಿ ಐವನ್ ರಿಚರ್ಡ್ ರವನ್ನು ನೇಮಕ ಮಾಡಲಾಯಿತು, ವೇದಿಕೆಯಲ್ಲಿ ತುರವೇ ಕೇಂದ್ರೀಯ ಮಂಡಳಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ರಾವ್ ಕಡಬ,  ಮಹಿಳಾ ಘಟಕದ ರಾಜ್ಯಾದ್ಯಕ್ಷರಾದ ಜ್ಯೋತಿಕಾ ಜೈನ್, ದ.ಕ. ಜಿಲ್ಲಾ ಘಟಕದ ಕಾರ್ಯದರ್ಶಿ ಆನಂದ್ ಅಮೀನ್ ಅಡ್ಯಾರ್, ತುರವೇ ಉಡುಪಿ ಜಿಲ್ಲಾದ್ಯಕ್ಷರಾದ ಚಿತ್ತರಂಜನ್ ದಾಸ್ ಶೆಟ್ಟಿ ಯುವ ಘಟಕದ ಜಿಲ್ಲಾದ್ಯಕ್ಷರಾದ ನಝೀರ್ ಕೋಟೇಶ್ವರ, ಜಿಲ್ಲಾ ಮಹಿಳಾ ಘಟಕದ ಸಿಲ್ಮಾ ರಿಚರ್ಡ್,  ಕಾರ್ಮಿಕ ಘಟಕದ ಅಝರುದ್ದೀನ್, ರಹ್ಮಾನ್, ಹಾಗೂ ಉಡುಪಿ ಜಿಲ್ಲಾ ಹಾಗೂ ವಿಧಾನ ಸಭಾ ಕ್ಷೇತ್ರದ ಪದಾದಿಕಾರಿಗಳು ವೇದಿಕೆಯಲ್ಲಿ ಹಾಜರಿದ್ದರು. ಅಬೂಬಕರ್ ಕಾರ್ಯಕ್ರಮ ನಿರೂಪಣೆ ಮಾಡಿದರು.


Spread the love

Exit mobile version