ಉಡುಪಿ ನಗರದ ಎರಡನೇ ಇಂದಿರಾ ಕ್ಯಾಂಟಿನ್ ಉದ್ಘಾಟನೆ; ಉಪ್ಪಿಟ್ಟು, ಕೇಸರಿಬಾತ್ ಸವಿದ ಸಚಿವ ಪ್ರಮೋದ್

Spread the love

ಉಡುಪಿ ನಗರದ ಎರಡನೇ ಇಂದಿರಾ ಕ್ಯಾಂಟಿನ್ ಉದ್ಘಾಟನೆ; ಉಪ್ಪಿಟ್ಟು, ಕೇಸರಿಬಾತ್ ಸವಿದ ಸಚಿವ ಪ್ರಮೋದ್

ಉಡುಪಿ : ಉಡುಪಿ ನಗರದ ಹಳೆ ತಾಲೂಕು ಕಚೇರಿ ಬಳಿ ನಿರ್ಮಾಣಗೊಂಡು ಉಡುಪಿಯ ಎರಡನೇ ಇಂದಿರಾ ಕ್ಯಾಂಟಿನನ್ನು ರಾಜ್ಯ ಮೀನುಗಾರಿಕೆ, ಯುವಜನಾ ಸೇವೆ ಹಾಗೂ ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಗುರುವಾರ ಲೋಕಾರ್ಪಣೆ ಮಾಡಿದರು.

ನಗರದ ಹಳೆ ತಾಲೂಕು ಕಚೇರಿ ಆವರಣದಲ್ಲಿ ಕ್ಯಾಂಟಿನ್ ನಿರ್ಮಾಣಗೊಂಡಿದ್ದು ಉದ್ಘಾಟನಾ ದಿನದ ಅಂಗವಾಗಿ ಸಾರ್ವಜನಿಕರಿಗೆ ಉಚಿತವಾಗಿ ಉಪ್ಪಿಟ್ಟು, ಕೇಸರಿಬಾತ್ ವಿತರಿಸಲಾಯಿತು. ಸಾರ್ವಜನಿಕರು ಸರದಿಯಲ್ಲಿ ಆಗಮಿಸಿ ಉಪಹಾರ ಸ್ವೀಕರಿಸಿದರು.

ಇದೇ ವೇಳೆ ಸಚಿವ ಪ್ರಮೋದ್ ಮಧ್ವರಾಜ್, ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್ ರಾಜ್ ಹಾಗೂ ನಗರಸಭಾ ಸದಸ್ಯರು, ಸಾರ್ವಜನಿಕರು ಸಹ ಕ್ಯಾಂಟಿನ್ನಲ್ಲಿ ತಯಾರಿಸಿದ ಉಪಹಾರದ ರುಚಿ ಸವಿದರು.

ಇಂದಿರಾ ಕ್ಯಾಂಟಿನ್ ರಾಜ್ಯ ಸರಕಾರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾಗಿದೆ. ಕ್ಯಾಂಟಿನ್ನಲ್ಲಿ ಗುಣಮಟ್ಟದ ತಿಂಡಿ ಮತ್ತು ಊಟವನ್ನು ಎಲ್ಲ ವರ್ಗದ ಜನರು ಸೇವಿಸಲು ಅವಕಾಶವಿದೆ. ಪ್ರತಿಯೊಬ್ಬರೂ ಇದನ್ನು ಸದಪಯೋಗಪಡಿಸಿಕೊಳ್ಳಬೇಕು. ಈ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಕಾಂಗ್ರೆಸ್ ಸರಕಾರ ಕೇವಲ 25 ರೂ.ಗಳಿಗೆ ಒಬ್ಬ ವ್ಯಕ್ತಿಯ ಒಂದು ದಿನದ ಊಟದ ಖರ್ಚನ್ನು ನಿಭಾಯಿಸುವಂತೆ ಮಾಡಿದೆ.


Spread the love