ಉಡುಪಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ಪ್ರಕಟ

Spread the love

 ಉಡುಪಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ಪ್ರಕಟ

ಉಡುಪಿ: ರಾಜ್ಯದ ಉಡುಪಿ ನಗರಸಭೆ ಸೇರಿದಂತೆ  58 ನಗರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ಪ್ರಕಟಿಸಿ ರಾಜ್ಯ ಸರಕಾರ ಬುಧವಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ.

ಉಡುಪಿ ನಗರ ಸಭೆಯ ಅಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ ಮೀಸಲಾದರೆ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಪರ ಮೀಸಲಾತಿ ಪ್ರಕಟವಾಗಿದೆ.

2018 ರ ಅಗಸ್ಟ್ 31ರಂದು ಉಡುಪಿ ನಗರಸಭೆಯ 35 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ  ಭಾರತೀಯ ಜನತಾ ಪಕ್ಷವು 31 ಸ್ಥಾನಗಳಲ್ಲಿ ಭರ್ಜರಿ ಗೆಲುವನ್ನು ಸಾಧಿಸದರೆ ಕಾಂಗ್ರೆಸ್ ಪಕ್ಷ  ಕೇವಲ 4 ಸ್ಥಾನ ಪಡೆದಿತ್ತು.


Spread the love