ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ ಗೋಪಾಲಕೃಷ್ಣ ಶೆಟ್ಟಿ ನಿಧನ
ಉಡುಪಿ: ಹಿರಿಯ ಕಾಂಗ್ರೆಸಿಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದ ಟಿ ಗೋಪಾಲಕೃಷ್ಣ ಶೆಟ್ಟಿಯವರು ಸೋಮವಾರ ನಿಧನ ಹೊಂದಿದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.
ಮೃತ ಟಿ ಗೋಪಾಲಕೃಷ್ಣ ಶೆಟ್ಟಿಯವರು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ತಾಲೂಕು ಪಂಚಾಯತ್ ಸದಸ್ಯರಾಗಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಗೌರವ ಸಲಹೆಗಾರರಾಗಿ ಸೇವೆ ನೀಡಿರುತ್ತಾರೆ. ಅಲ್ಲದ ಕಿರಣ್ ಮಿಲ್ಕ್ ಸಂಸ್ಥೆಯ ಮಾಲಕರಾಗಿದ್ದ ಅವರು ಹಲವಾರು ವರ್ಷಗಳ ಕಾಲ ನಿರಂತರ ಜನಸೇವೆ ಯಲ್ಲಿ ತೊಡಗಿಸಿಕೊಂಡು ಜನಾದರಣೀಯರಾಗಿದ್ದರು.
ಮೃತರು ಪತ್ನಿ ಗೀತಾ ಶೆಟ್ಟಿ, ಪುತ್ರ ಶಿರೀಶ್ ಶೆಟ್ಟಿ, ಪುತ್ರಿ ಶ್ರುತಿ ಶೆಟ್ಟಿ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಸಂತಾಪ ಸೂಚಿಸಿದ್ದಾರೆ.