ಉಡುಪಿ ನ್ಯಾಯಾಲಯ, ಉಡುಪಿ ವಕೀಲರ ಸಂಘದ ಶತಮಾನೋತ್ತರ ಬೆಳ್ಳಿಹಬ್ಬ ವರ್ಷಾಚರಣೆ

Spread the love

ಉಡುಪಿ ನ್ಯಾಯಾಲಯ, ಉಡುಪಿ ವಕೀಲರ ಸಂಘದ ಶತಮಾನೋತ್ತರ ಬೆಳ್ಳಿಹಬ್ಬ ವರ್ಷಾಚರಣೆ

ಉಡುಪಿ ನ್ಯಾಯಾಲಯ ಹಾಗೂ ಉಡುಪಿ ವಕೀಲ ಸಂಘದ ಸ್ಥಾಪನೆಯ 125ನೇ ವರ್ಷಾಚರಣೆಯನ್ನು ಇದೇ ನ.17 ಮತ್ತು 18ರಂದು ಉಡುಪಿ ನ್ಯಾಯಾಲಯದ ಆವರಣದಲ್ಲಿ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ವಿಜೃಂಭಣೆ ಯಿಂದ ನಡೆಯಲಿದೆ.

ಶತಮಾನೋತ್ತರ ರಜತ ಮಹೋತ್ಸವದ ಎರಡು ದಿನಗಳ ಕಾರ್ಯಕ್ರಮಕ್ಕೆ ನ.17ರ ಬೆಳಗ್ಗೆ 10ಗಂಟೆಗೆ ಕರ್ನಾಟಕದವರಾದ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಜಸ್ಟಿಸ್ ಅರವಿಂದ ಕುಮಾರ್ ಬೆಳಗ್ಗೆ 10 ಗಂಟೆಗೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಗಳಾದ ಜ.ಎನ್.ವಿ. ಅಂಜಾರಿಯ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಸಂದರ್ಭ ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿಗಳೂ ಪ್ರಸ್ತುತ ಆಂಧ್ರಪ್ರದೇಶ ರಾಜ್ಯದ ರಾಜ್ಯಪಾಲರಾಗಿ ರುವ ಮೂಡಬಿದ್ರೆಯ ಜ.ಎಸ್.ಅಬ್ದುಲ್ ನಝೀರ್ ಸಾಹೇಬ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾಜ್ಯ ಹೈಕೋರ್ಟ್ನ ನ್ಯಾಯಾಧೀಶರು ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳೂ ಆದ ಜ.ಇ.ಎಸ್. ಇಂದಿರೇಶ್ 125ರ ಸಂಭ್ರಮದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ರಾಜ್ಯ ಕಾನೂನು ಸಚಿವ ಎಚ್.ಕೆ.ಪಾಟೀಲ್, ಸಾರ್ವಜನಿಕ ಸೇವಾ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ರಾಜ್ಯ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತಕುಮಾರ್, ರಾಜ್ಯ ಉಚ್ಛ ನ್ಯಾಯಾಯಲದ ನ್ಯಾಯಮೂರ್ತಿಗಳಾದ ಎಂ.ಜಿ.ಉಮಾ, ರಾಮಚಂದ್ರ ಡಿ.ಹುದ್ದಾರ್, ಟಿ.ವೆಂಕಟೇಶ್ ನಾಯ್ಕ್ ಹಾಗೂ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣನವರ್ ಪಾಲ್ಗೊಳ್ಳುವರು.

ಉದ್ಘಾಟನಾ ಸಮಾರಂಭದ ಬಳಿಕ ಕಾನೂನಿನ ವಿವಿಧ ವಿಷಯಗಳು, ಹೊಸದಾಗಿ ಅಳವಡಿಸಲಾಗಿರುವ ಕಾನೂನಿನ ಕುರಿತು ಹಿರಿಯ ನ್ಯಾಯ ಮೂರ್ತಿಗಳು, ಅನುಭವಿ ಹಿರಿಯ ವಕೀಲರು ವಿಷಯ ಮಂಡನೆ ಮಾಡಲಿದ್ದಾರೆ. ಮಧುಕರ್ ದೇಶಪಾಂಡೆ, ಜ. ರಾಮಚಂದ್ರ ಡಿ.ಹುದ್ದಾರ್, ಜ.ಸಿ.ಎಂ.ಜೋಷಿ ಹಾಗೂ ಬೆಂಗಳೂರಿನ ಎಸ್.ಶಂಕರಪ್ಪ ಯುವ ವಕೀಲರಿಗಾಗಿ ಹಾಗೂ ಕಾನೂನು ಆಸಕ್ತರಿಗಾಗಿ ವಿಚಾರ ಮಂಡನೆ ಮಾಡಲಿದ್ದಾರೆ.

ಶತಮಾನೋತ್ತರ ರಜತ ಮಹೋತ್ಸವದ ಸಮಾರೋಪ ಸಮಾರಂಭ ನ.18ರ ಸಂಜೆ 4:30ಕ್ಕೆ ನಡೆಯಲಿದೆ. ಕರ್ನಾಟಕ ಹೈಕೋರ್ಟ್ನ ನ್ಯಾಯಧೀಶರು ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಸಮಾರೋಪ ಭಾಷಣ ಮಾಡಲಿದ್ದಾರೆ. ಹೈಕೋರ್ಟ್ನ ನ್ಯಾಯಾಧೀಶರಾದ ಜ. ಎಸ್.ವಿಶ್ವಜಿತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ..

ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಜ.ಶಿವಶಂಕರ್ ಬಿ. ಶ್ರೀಅಮರಣ್ಣವರ್, ಜ.ಸಿ.ಎಂ.ಜೋಷಿ, ಜ.ಟಿ.ಜಿ. ಶಿವಶಂಕರೇಗೌಡ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಿರಣ್ ಎಸ್. ಗಂಗಣ್ಣನವರ್ ಉಪಸ್ಥಿತರಿರುವರು.

ಎರಡೂ ದಿನಗಳಲ್ಲಿ 17ರ ಸಂಜೆ ಉಡುಪಿಯ ವೈಕುಂಠ ಬಾಳಿಕಾ ಕಾನೂನು ಕಾಲೇಜಿನ ವಿದ್ಯಾರ್ಥಿಗಳು, ಉಡುಪಿ, ಕಾರ್ಕಳ, ಕುಂದಾಪುರಗಳ ವಕೀಲರ ಸಂಘದ ಸದಸ್ಯರಿಗೆ ವಿವಿಧ ಮನೋರಂಜನಾ ಕಾರ್ಯಕ್ರಮ, 18ರಂದು ಪ್ರಾಣೇಶ ಗಂಗಾವತಿ ತಂಡದಿಂದ ನಗೆಹಬ್ಬ, ಖ್ಯಾತ ಹಿನ್ನೆಲೆ ಗಾಯಕ ಜಸ್ಕರನ್ ಸಿಂಗ್ ಮತ್ತು ಅನನ್ಯ ಪ್ರಕಾಶ್ ಸಹಿತ ಕರ್ನಾಟಕ, ಕೇರಳ ಕಲಾವಿದರಿಂದ ಸಂಗೀತ ರಸಮಂಜರಿ ನಡೆಯಲಿದೆ.


Spread the love
Subscribe
Notify of

0 Comments
Inline Feedbacks
View all comments