ಉಡುಪಿ: ಪರ್ಯಾಯ ಪ್ರಯುಕ್ತ ಸಾಗರ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ವತಿಯಿಂದ ಕಲಾ ಸಂಗಮದಲ್ಲಿ ಸಾಧಕರಿಗೆ ಸನ್ಮಾನ

Spread the love

ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಐದನೇ ಪರ್ಯಾಯ ಮಹೋತ್ಸವದ ಆಚರಣೆಯ ಪ್ರಯುಕ್ತ ಸಾಗರ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಕುಕ್ಕಿಕಟ್ಟೆ ಉಡುಪಿ ಇದರ ವತಿಯಿಂದ ಸಾಂಸ್ಕ್ರತಿಕ ವೈಭವ ಹಾಗೂ ಸಾಧಕರಿಗೆ ಸನ್ಮಾನದ ‘ ಕಲಾಸಂಗಮ – 2016’ ಜನವರಿ 17 ರಾತ್ರಿ ಮಿತ್ರ ಆಸ್ಪತ್ರೆಯ ಬಳಿಯಲ್ಲಿ ನಡೆಯಿತು.

kalasangama_sagarsports 17-01-2016 22-06-06 kalasangama_sagarsports 17-01-2016 22-15-11 kalasangama_sagarsports 17-01-2016 22-23-08 kalasangama_sagarsports 17-01-2016 22-27-28 kalasangama_sagarsports 17-01-2016 22-28-58 kalasangama_sagarsports 17-01-2016 22-29-09 kalasangama_sagarsports 17-01-2016 22-40-55 kalasangama_sagarsports 17-01-2016 22-43-35 kalasangama_sagarsports 17-01-2016 22-59-32

ಕಾರ್ಯಕ್ರಮವನ್ನು ವಿಶ್ವನಾಥ ಶೆಣೈ ಹಾಗೂ ಪ್ರಭಾ ವಿ ಶೆಣೈ ಅವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಬಳಿಕ ಸುವರ್ಣ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ವಿಜೇತ ರವೀಂದ್ರ ಪ್ರಭು ಮತ್ತು ಬಳಗದವರಿಂದ ರಾಗ್ ರಂಗ್ ಸಂಗೀತ ರಸಮಂಜರಿ ಹಾಗೂ ಡ್ಯಾನ್ಸ್ ವೈವಿಧ್ಯ ನಡೆಯಲಿದೆ. ಅಲ್ಲದೆ ಆಟಿಟ್ಯೂಡ್ ಡ್ಯಾನ್ಸ್ ಕ್ರ್ಯೂವ್ ಬ್ರಹ್ಮಗಿರಿ ಉಡುಪಿ ಇವರ ವತಿಯಿಂದ ಕೂಟ ನ್ರತ್ಯ ಪ್ರದರ್ಶನ ನಡೆಯಿತು.
ರಾತ್ರಿ 9.45 ಕ್ಕೆ ಜರುಗಿಲಿರುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಕೆಪಿಸಿಸಿ ಕಾರ್ಯದರ್ಶಿ ಎಂ ಎ ಗಫೂರ್, ಜಿಲ್ಲಾ ಪಂಚಾಯತ್ ಸದಸ್ಯ ದಿವಾಕರ ಕುಂದರ್, ನಾಗೇಶ್ ಉದ್ಯಾವರ, ಜನಾರ್ಧನ್ ತೋನ್ಸೆ, ಜನಾರ್ದನ ಭಂಡಾರ್ ಕರ್, ಕೀರ್ತಿ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ಅಬ್ದುಲ್ ರೆಹಮಾನ್ ಇತರರು ಉಪಸ್ಥಿತರಿದ್ದರು.
ಈ ವೇಳೆ ಸಮಾಜ ಸೇವಕರಾದ ರವಿ ಕೆ ಕಟಪಾಡಿ, ದೀನೇಶ್ ಪೈ, ಜನಾರ್ದನ್ ಶೆಣೈ, ನಿರುಪಮಾ ಶೆಟ್ಟಿ, ಅತೀ ಹೆಚ್ಚು ರಕ್ತದಾನ ಮಾಡಿದ ಸತೀಶ್ ಸಾಲ್ಯಾನ್, ಶಿಲ್ಪಕಲೆಯಲ್ಲಿ ಸಾಧನೆ ಮಾಡಿದ ಮಕ್ ಬುಲ್ಲಾ, ನತ್ಯ ಪ್ರವೀಣೆ ಕುಮಾರಿ ತನುಶ್ರೀ, ಜಾನಪದ ಕಲೆಯಲ್ಲಿ ಸಾಧನೆ ಮಾಡಿದ ಕೀಶೋರ್ ರಾಜ್, ಉದ್ಯಮಿ ಶಿವಪ್ರಸಾದ್ ಶೆಟ್ಟಿ ಇವರುಗಳನ್ನು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಸನ್ಮಾನಿಸಿದರು.
ಕಾರ್ಯಕ್ರಮದ ಸಂಚಾಲಕ ಅಮೃತ್ ಶೆಣೈ, ಸಮಿತಿಯ ಗೌರವಾಧ್ಯಕ್ಷ ವಿಜಯ್ ಡಿ’ಸೋಜಾ, ಅಧ್ಯಕ್ಷ ಹೇಮಂತ್ ಕುಮಾರ್, ಉಪಾಧ್ಯಕ್ಷ ಆಕಾಶ್ ರಾವ್, ಪ್ರಧಾನ ಕಾರ್ಯದರ್ಶಿ ಯಜ್ಯೇಶ್ ಆಚಾರ್ಯ, ಕಾರ್ಯದರ್ಶಿ ಚೇತನ್ ಆಚಾರ್ಯ ಇನ್ನಿತರರು ಉಪಸ್ಥಿತಿರಿದ್ದರು.


Spread the love