ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಐದನೇ ಪರ್ಯಾಯ ಮಹೋತ್ಸವದ ಆಚರಣೆಯ ಪ್ರಯುಕ್ತ ಸಾಗರ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಕುಕ್ಕಿಕಟ್ಟೆ ಉಡುಪಿ ಇದರ ವತಿಯಿಂದ ಸಾಂಸ್ಕ್ರತಿಕ ವೈಭವ ಹಾಗೂ ಸಾಧಕರಿಗೆ ಸನ್ಮಾನದ ‘ಕಲಾ ಸಂಗಮ – 2016’ ನ್ನು ಜನವರಿ 17 ರಾತ್ರಿ ಮಿತ್ರ ಆಸ್ಪತ್ರೆಯ ಬಳಿಯಲ್ಲಿ ಆಯೋಜಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಕಾರ್ಯಕ್ರಮದ ಸಂಚಾಲಕ ಅಮೃತ್ ಶೆಣೈ ಅವರು ಸಂಜೆ 6.45 ಕ್ಕೆ ಕಾರ್ಯಕ್ರಮವನ್ನು ವಿಶ್ವನಾಥ ಶೆಣೈ ಹಾಗೂ ಪ್ರಭಾ ವಿ ಶೆಣೈ ಅವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಲಿದ್ದಾರೆ. ಈ ವೇಳೆ ಭಾಸ್ಕರ್ ರಾವ್ ಕಿದಿಯೂರು, ಸತೀಶ್ ಶೇಟ್, ಜ್ಯೋತಿ ಹೆಬ್ಬಾರ್, ಡಾ ಶ್ರೀಧರ್ ಹೊಳ್ಳ, ಗೀತಾ ಶೆಟ್ ಕಡಿಯಾಳಿ, ಲಕ್ಷ್ಮಣ್ ಶೆಣೈ, ಗೋಪಾಲ, ಚಂದ್ರಮೋಹನ್, ಪ್ರಶಾಂತ್ ಶೆಟ್ಟಿ ಉಪಸ್ಥಿತರಿರುವರು. ಬಳಿಕ ಸುವರ್ಣ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ವಿಜೇತ ರವೀಂದ್ರ ಪ್ರಭು ಮತ್ತು ಬಳಗದವರಿಂದ ರಾಗ್ ರಂಗ್ ಸಂಗೀತ ರಸಮಂಜರಿ ಹಾಗೂ ಡ್ಯಾನ್ಸ್ ವೈವಿಧ್ಯ ನಡೆಯಲಿದೆ. ಅಲ್ಲದೆ ಆಟಿಟ್ಯೂಡ್ ಡ್ಯಾನ್ಸ್ ಕ್ರ್ಯೂವ್ ಬ್ರಹ್ಮಗಿರಿ ಉಡುಪಿ ಇವರ ವತಿಯಿಂದ ಕೂಟ ನ್ರತ್ಯ ಪ್ರದರ್ಶನ ನಡೆಯಲಿದೆ ಎಂದರು.
ರಾತ್ರಿ 9.45 ಕ್ಕೆ ಜರುಗಿಲಿರುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಸಚಿವ ವಿನಯ್ ಕುಮಾರ್ ಸೊರಕೆ, ಶಾಸಕ ಪ್ರಮೋದ್ ಮಧ್ವರಾಜ್, ಉಡುಪಿ ಚರ್ಚಿನ ಧರ್ಮಗುರು ವಂ ಫ್ರೆಡ್ ಮಸ್ಕರೇನ್ಹಸ್, ನಗರಸಭೆಯ ಅಧ್ಯಕ್ಷ ಯುವರಾಜ್, ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಉದ್ಯಮಿ ರಂಜನ್ ಕಲ್ಕೂರ, ನಗರಸಭಾ ಸದಸ್ಯ ಶಶಿರಾಜ್ ಕುಂದರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಬಡಗಬೆಟ್ಟು ಕೋ ಅಪರೇಟಿವ್ ಸೋಸೈಟಿ ಇದರ ಜಯಕರ ಶೆಟ್ಟಿ ಇಂದ್ರಾಳಿ, ರಾಘವೇಂದ್ರ ಕಿಣಿ, ಜನಾರ್ದನ ಭಂಡಾರ್ ಕರ್, ಕೀರ್ತಿ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ಅಬ್ದುಲ್ ರೆಹಮಾನ್ ಉಪಸ್ಥಿತರಿರುವರು.
ಈ ವೇಳೆ ಸಮಾಜ ಸೇವಕರಾದ ರವಿ ಕೆ ಕಟಪಾಡಿ, ದೀನೇಶ್ ಪೈ, ಜನಾರ್ದನ್ ಶೆಣೈ, ನಿರುಪಮಾ ಶೆಟ್ಟಿ, ಅತೀ ಹೆಚ್ಚು ರಕ್ತದಾನ ಮಾಡಿದ ಸತೀಶ್ ಸಾಲ್ಯಾನ್, ಶಿಲ್ಪಕಲೆಯಲ್ಲಿ ಸಾಧನೆ ಮಾಡಿದ ಮಕ್ ಬುಲ್ಲಾ, ನತ್ಯ ಪ್ರವೀಣೆ ಕುಮಾರಿ ತನುಶ್ರೀ, ಜಾನಪದ ಕಲೆಯಲ್ಲಿ ಸಾಧನೆ ಮಾಡಿದ ಕೀಶೋರ್ ರಾಜ್, ಉದ್ಯಮಿ ಶಿವಪ್ರಸಾದ್ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ವಿಜಯ್ ಡಿ’ಸೋಜಾ, ಅಧ್ಯಕ್ಷ ಹೇಮಂತ್ ಕುಮಾರ್, ಉಪಾಧ್ಯಕ್ಷ ಆಕಾಶ್ ರಾವ್, ಪ್ರಧಾನ ಕಾರ್ಯದರ್ಶಿ ಯಜ್ಯೇಶ್ ಆಚಾರ್ಯ, ಕಾರ್ಯದರ್ಶಿ ಚೇತನ್ ಆಚಾರ್ಯ ಉಪಸ್ಥಿತಿರಿದ್ದರು.