Home Mangalorean News Kannada News ಉಡುಪಿ ಪವರ್ ಕಾರ್ಪೋರೇಷನ್ ಹೆಸರಿನಲ್ಲಿ ನಕಲಿ ವೆಬ್ ಸೈಟ್ ಸೃಷ್ಟಿ – ಸೆನ್  ಠಾಣೆಯಲ್ಲಿ ದೂರು...

ಉಡುಪಿ ಪವರ್ ಕಾರ್ಪೋರೇಷನ್ ಹೆಸರಿನಲ್ಲಿ ನಕಲಿ ವೆಬ್ ಸೈಟ್ ಸೃಷ್ಟಿ – ಸೆನ್  ಠಾಣೆಯಲ್ಲಿ ದೂರು ದಾಖಲು

Spread the love

ಉಡುಪಿ ಪವರ್ ಕಾರ್ಪೋರೇಷನ್ ಹೆಸರಿನಲ್ಲಿ ನಕಲಿ ವೆಬ್ ಸೈಟ್ ಸೃಷ್ಟಿ – ಸೆನ್  ಠಾಣೆಯಲ್ಲಿ ದೂರು ದಾಖಲು

ಉಡುಪಿ: ಉಡುಪಿ ಪವರ್ ಕಾರ್ಪೋರೇಷನ್ ಲೀ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಗಳು ನಕಲಿ ವೆಬ್ ಸೈಟ್ ಸೃಷ್ಟಿಸಿ ಕೆಲಸ ಇರುವುದಾಗಿ ಸುಳ್ಳು ಮಾಹಿತಿ ಹಾಕಿರುವ ಕುರಿತು ಕಂಪೆನಿಯ ಅಸೋಶಿಯೆಟ್ ಜನರಲ್ ಮ್ಯಾನೇಜರ್ ಕೆ . ಶಶಿಧರ್ ಅವರು ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಉಡುಪಿ ಪವರ್ ಕಾರ್ಪೋರೇಷನ್ ಲಿ. ಕಂಪೆನಿಗೆ www.adanipower.com ಎಂಬುದು ಅಧೀಕೃತ ವೆಬ್ಸೈಟ್ ಆಗಿರುತ್ತದೆ. ಆದರೆ, ಯಾರೋ ಅಪರಿಚಿತ ವ್ಯಕ್ತಿಗಳು ಸದ್ರಿ ಕಂಪೆನಿಯ ನಕಲಿ ವೆಬ್ಸೈಟ್ www.udupipowerproject.com www.upclindia.com, www.udupiproject.com, https://www.udupiproject.in , ಎಂಬ ಹೆಸರಿನಲ್ಲಿ ಸದ್ರಿ ಕಂಪೆನಿಯ ನಕಲಿ ನೇಮಕಾತಿ ವೆಬ್ಸೈಟ್ ಸೃಷ್ಟಿಸಿ, ಸದ್ರಿ ನಕಲಿ ವೆಬ್ಸೈಟ್ ನಲ್ಲಿ Jobs at Udupi Power corporation ltd. ಎಂದು ನಮೂದಿಸಿ, ತಿಂಗಳಿಗೆ 80,000/- ಸಂಬಳ ಇರುವ 1800 ಇಂಜಿನಿಯರ್ ಖಾಲಿ ಹುದ್ದೆಗಳು ಇರುವ ಬಗ್ಗೆ ನಮೂದಿಸಿ, ಈ ಬಗ್ಗೆ ಆನ್ಲೈನ್ ಪೇಮೆಂಟ್ ರೂ. 5೦೦/- ಪಾವತಿಸಬೇಕು ಮತ್ತು ಈ ಬಗ್ಗೆ ಸಂಪರ್ಕಿಸಲು ಮೇಲ್- ಐ.ಡಿ. career@udupiproject.in support@udupipowerproject.com support@upclindia.com and support@udupiproject.com ಗಳನ್ನು ಹಾಗೂ ಹೆಲ್ಪ್ಲೈನ್ ನಂಬ್ರ +918046800985, +911149409800, +911149409807 ನಂಬ್ರವನ್ನು ನಮೂದಿಸಿರುತ್ತಾರೆ.

ಅಲ್ಲದೇ ಇತರೆ ವೆಬ್ಸೈಟ್ಗಳಲ್ಲಿ ಎಂಬ ಮೇಲ್ ಐ.ಡಿ.ಯನ್ನು ನಮೂದಿಸಿರುತ್ತಾರೆ. ಈ ಯಾವುದೇ ನೇಮಕಾತಿ ವೆಬ್ಸೈಟ್ ಗಳು ಉಡುಪಿ ಪವರ್ ಕಾರ್ಪೋರೇಷನ್ ಲೀ. ( UPCL ) ಪಡುಬಿದ್ರೆ ಇವರು ಸೃಷ್ಟಿಸಿರುವುದಿಲ್ಲ. ಯಾರೋ ಅಪರಿಚಿತ ವ್ಯಕ್ತಿಗಳು ಕಂಪೆನಿಯ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಮೇಲಿನ ನಕಲಿ ವೆಬ್ಸೈಟ್ ಹಾಗೂ ನಕಲಿ ಮೇಲ್ ಐ.ಡಿ.ಯನ್ನು ಸೃಷ್ಟಿಸಿರುತ್ತಾರೆ. ಆದುದರಿಂದ ಸದ್ರಿ ನಕಲಿ ವೆಬ್ಸೈಟ್ ಹಾಗೂ ನಕಲಿ ಮೇಲ್ ಸೃಷ್ಟಿಸಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ಶಶಿಧರ್ ಅವರು ನೀಡಿರುವ ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 47/2020 ಕಲಂ 66(c), 66(d) ಐ.ಟಿ. ಆ್ಯಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.


Spread the love

Exit mobile version