ಉಡುಪಿ: ಬೈಕ್ ಕಳವು ಪ್ರಕರಣ – ಇಬ್ಬರ ಬಂಧನ
ಉಡುಪಿ: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಲ್ಪೆ ಪೊಲೀಸರು ಉಡುಪಿಯ ಕರಾವಳಿ ಬೈಪಾಸ್ ಬಳಿ ಬಂಧಿಸಿದ್ದಾರೆ.
ಬಂಧಿತರನ್ನು ಬಂಟ್ವಾಳ ತಾಲೂಕಿನ ಪುದು ಗ್ರಾಮದ ವಳಚ್ಚಿಲ್ ನಿವಾಸಿ ಮಹಮ್ಮದ್ ಅಲ್ತಾಫ್ (23) ಮತ್ತು ವಳಚ್ಚಿಲ್ ಜಂಕ್ಷನ್ ನಿವಾಸಿ ಮಹಮ್ಮದ್ ಸಮೀರ್ (21) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಜು 2 ರಂದು ಕಿನ್ನಿಮುಲ್ಕಿಯಲ್ಲಿ ಮತ್ತು ಕೆಲವು ಸಮಯಗಳ ಹಿಂದೆ ಉಡುಪಿ ಪರಿಸರದಲ್ಲಿ ಕಳವುಗೈಯ್ಯಲಾದ ಎರಡು ಪಲ್ಸರ್ ಬೈಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಬೈಕ್ ಗಳ ಒಟ್ಟು ಮೌಲ್ಯ 80 ಸಾವಿರ ಎಂದು ಅಂದಾಜಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ಕುಮಾರಚಂದ್ರ, ಡಿವೈಎಸ್ಪಿ ಜೈಶಂಕರ್ ಮತ್ತು ಉಡುಪಿ ಸಿಪಿಐ ಮಂಜುನಾಥ್ ಇವರುಗಳ ಮಾರ್ಗದರ್ಶನದಲ್ಲಿ ಮಲ್ಪೆ ಠಾಣೆಯ ಪಿಎಸ್ಐ ಮಧು ಬಿ ಈ ರವರ ನೇತೃತ್ವದಲ್ಲಿ ಆರೊಪಿಗಳನ್ನು ಬಂಧಿಸಿದ್ದಾರೆ.
ಸದ್ರಿ ಕಾರ್ಯಾಚರಣೆಯಲ್ಲಿ ಮಲ್ಪೆ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಾದ ಪಿಎಸ್ಐ ಮಧು ಬಿ ಈ, ಎಎಸ್ಐ ಸುದಾಕರ ಬಿ, ಎಎಸ್ಐ ರತ್ನಾಕರ ಕೆ, ಹೆಡ್ ಕಾನ್ ಸ್ಟೇಬಲ್ ಗಳಾದ ರತ್ನಾಕರ, ಪ್ರವೀಣ್, ಸಂತೋಷ್, ವಿಕ್ರಮ್ ಬೆರೆಟ್ಟೊ, ಕಾನ್ ಸ್ಟೇಬಲ್ ಗಳಾದ ಚೇತನ್ ಪಿತ್ರೋಡಿ,ರವಿರಾಜ್,ಸದ್ದಾಂ ಹುಸೇನ್,ರಘು ಮತ್ತು ಸಿಡಿಆರ್ ವಿಭಾಗದ ಶಿವಾನಂದ ರವರು ಕಾರ್ಯಚರಣೆಯಲ್ಲಿ ಭಾಗವಹಿಸಿರುತ್ತಾರೆ.