Home Mangalorean News Kannada News ಉಡುಪಿ: ಬ್ಯಾನರ್, ಕಟೌಟ್‌ಗಳಿಗೆ ಅನುಮತಿ ಕಡ್ಡಾಯ

ಉಡುಪಿ: ಬ್ಯಾನರ್, ಕಟೌಟ್‌ಗಳಿಗೆ ಅನುಮತಿ ಕಡ್ಡಾಯ

Spread the love

ಉಡುಪಿ: ಬ್ಯಾನರ್, ಕಟೌಟ್‌ಗಳಿಗೆ ಅನುಮತಿ ಕಡ್ಡಾಯ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅಳವಡಿಸಲಾದ ಬ್ಯಾನರ್, ಬಂಟಿAಗ್ಸ್, ಕಟೌಟ್‌ಗಳು ಅವಧಿ ಮೀರಿರುವುದು ಕಂಡು ಬಂದಿದ್ದು, ಅಂತಹ ಬ್ಯಾನರ್‌ಗಳನ್ನು ಸಂಬAಧಪಟ್ಟವರು ಕೂಡಲೇ ತೆರವುಗೊಳಿಸಬೇಕು. ಬ್ಯಾನರ್ ಮತ್ತು ಕಟೌಟ್ ಇತರೆ ಅಳವಡಿಸುವ ಪೂರ್ವದಲ್ಲಿ ಕರ್ನಾಟಕ ಮುನಿಸಿಪಲ್ ಆಕ್ಟ್ನಂತೆ ನಗರಸಭೆ ಕಛೇರಿಯಿಂದ ಅನುಮತಿ ಪಡೆದುಕೊಂಡು ಪ್ರಾರಂಭ ದಿನಾಂಕ, ಮುಕ್ತಾಯ ದಿನಾಂಕ ಹಾಗೂ ಅನುಮತಿ ಪತ್ರ ಸಂಖ್ಯೆಯನ್ನು ನಮೂದಿಸಿ ಅಳವಡಿಸಬೇಕು ಹಾಗೂ ಗೋಡೆಗಳ ಮೇಲೆ ಸಾರ್ವಜನಿಕ ಭಿತ್ತಿಪತ್ರಗಳನ್ನು ಅಂಟಿಸಬಾರದು. ಅಂತಹ ಭಿತ್ತಿಪತ್ರಗಳನ್ನು ಅಂಟಿಸುವ ಮೊದಲು ಸೂಕ್ತ ಸ್ಥಳ ಗುರುತಿಸಿ ಅನುಮತಿ ಪಡೆದಕೊಂಡು ಅಂಟಿಸಬೇಕು.

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಗೋಡೆಗಳ ಮೇಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಭಿತ್ತಿಪತ್ರಗಳನ್ನು ಅಂಟಿಸಿದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೇ ತೆರವುಗೊಳಿಸಲಾಗುವುದು. ನಗರದ ಸೌಂದರ್ಯದ ಹಿತದೃಷ್ಟಿಯಿಂದ ವಿವಿಧೆಡೆ ಭಿತ್ತಿಪತ್ರ ಅಳವಡಿಸುವುದನ್ನು ಕಡಿಮೆ ಮಾಡಬೇಕು. ವಿದ್ಯುತ್ ಕಂಬಗಳ ಮೇಲೆ ಚಿಕ್ಕಚಿಕ್ಕ ಜಾಹೀರಾತು ಫಲಕಗಳನ್ನು ಅಳವಡಿಸಿರುವುದು ಕಂಡು ಬಂದಿದ್ದು, ಇಂತಹ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗುವುದು.

ಬ್ಯಾನರ್ಸ್/ಕಟೌಟ್‌ಗಳನ್ನು ಮುದ್ರಿಸುವ ಮಾಲೀಕರು ಈ ಬಗ್ಗೆ ನಗರಸಭೆಯಿಂದ ಅನುಮತಿಯನ್ನು ಪಡೆದುಕೊಂಡು ನಿಗದಿತ ಸ್ಥಳದಲ್ಲಿ ಅಳವಡಿಸಬೇಕು ಹಾಗೂ ಅವಧಿ ಪೂರ್ಣಗೊಂಡ ಕೂಡಲೇ ತೆರವುಗೊಳಿಸುವಂತೆ ಉಡುಪಿ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version