Home Mangalorean News Kannada News ಉಡುಪಿ: ಭಾರತೀಯ ಓರ್ಥೊಡೊಕ್ಸ್ ಸಿರಿಯನ್ ಸಭೆಯ ಪರಮಾಧ್ಯಕ್ಷ ಬಸೆಲಿಯೋಸ್ ಮಾರ್ಥೊಮಾ...

ಉಡುಪಿ: ಭಾರತೀಯ ಓರ್ಥೊಡೊಕ್ಸ್ ಸಿರಿಯನ್ ಸಭೆಯ ಪರಮಾಧ್ಯಕ್ಷ ಬಸೆಲಿಯೋಸ್ ಮಾರ್ಥೊಮಾ ಪೌಲೊಸ್ ರವರ ಬ್ರಹ್ಮಾವರಕ್ಕೆ ಭೇಟಿ

Spread the love

ಉಡುಪಿ: ಭಾರತೀಯ (ಮಲಂಕರ) ಓರ್ಥೊಡೊಕ್ಸ್ ಸಿರಿಯನ್ ಸಭೆಯ ಪರಮಾಧ್ಯಕ್ಷ ಗುರುಗಳಾದ ಪರಮಪವಿತ್ರ ಬಸೆಲಿಯೋಸ್ ಮಾರ್ಥೊಮಾ ಪೌಲೊಸ್ || , ಇವರು ಸೈಂಟ್ ಮೇರಿಸ್ ಓರ್ಥೊಡೊಕ್ಸ್ ಸಿರಿಯನ್ ಕೆಥೆಡ್ರೆಲ್ ಹಾಗೂ ಇದರ ಸಹ-ಇಗರ್ಜಿಗಳನ್ನು, ಡಿಸೆಂಬರ್ 4 ರಿಂದ 6 ರ ವರಗೆ ಪ್ರಥಮ ಬಾರಿಗೆ ಸಂದರ್ಶಿಸಲಿರುವರು ಎಂದು ಎಸ್‍ಎಮ್‍ಎಸ್ ಸೀರಿಯನ್ ಕ್ಯಾಥೆಡ್ರಲ್ ಇದರ ವಿಕಾರ್ ಜನರಲ್ ವಂ ಐಸಾಕ್ ಸಿ ಎ ಹೇಳಿದರು.

 ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಪಂಚದಲ್ಲಿ ಹಾಗೂ ಭಾರತೀಯ (ಮಲಂಕರ) ಓರ್ಥೊಡೊಕ್ಸ್ ಸಿರಿಯನ್ ಸಭೆಯ ಪರಿಧಿಯೊಳಗೆ ಸೈಂಟ್ ಮೇರಿಸ್ ಓರ್ಥೊಡೊಕ್ಸ್ ಸಿರಿಯನ್ ಕೆಥೆಡ್ರೆಲ್ ಹಾಗೂ ಇದರ 7 ಸಹ-ಇಗರ್ಜಿಗಳು ಮಾತ್ರ ಕೊಂಕಣಿ ಓರ್ಥೊಡೊಕ್ಸ್ ಸಮುದಾಯವಾಗಿದೆ. ಆದ್ದರಿಂದ, ಪರಮಾಧ್ಯಕ್ಷ ಗುರುಗಳಾದ ಪರಮಪವಿತ್ರ ಬಸೆಲಿಯೋಸ್ ಮಾರ್ಥೊಮಾ ಪೌಲೊಸ್ || ರವರ ಈ ಭೇಟಿ, ಈ ಸಮುದಾಯಕ್ಕೆ ಅತೀ ಹೆಮ್ಮೆಯ  ಹಾಗೂ ಮಹತ್ವದ ವಿಷಯವಾಗಿದೆ.

catholicos_SMS_Brahmavar 09-11-2015 12-08-59

ಕೊಂಕಣಿ ಓರ್ಥೊಡೊಕ್ಸ್ ಸಮುದಾಯ ಮತ್ತು ಭಾರತೀಯ (ಮಲಂಕರ) ಓರ್ಥೊಡೊಕ್ಸ್ ಸಿರಿಯನ್ ಸಭೆಯು ಹಲವಾರು ವಿಷಯಗಳಲ್ಲಿ ಸಮಾನತೆಯನ್ನು ಹೊಂದಿದೆ, ವಿಶೇಷವಾಗಿ ಅವುಗಳ ಇತಿಹಾಸ.  ಇವೆರಡು ಭಾರತೀಯ ಇಗರ್ಜಿಯ ಮೇಲಿನ ವಿದೇಶಿ ಅಥವಾ ಪಾಸ್ಛಾತ್ಯಾ ಪ್ರಭುತ್ವದ ವಿರುದ್ಧ ಹೊರಾಡಿವೆ

ಹಾಗೆಯೆ ಅವುಗಳು ದೇಶೀಯ ಅಥವಾ ಭಾರತೀಯ ನೇತ್ರತ್ವವನ್ನು  ಪೋಷಿಸಿದ್ದಾರೆ. ಈ ರೀತಿಯಲ್ಲಿ ಕ್ರೈಸ್ತ ಸಭೆಯೊಳಗೆ ‘ಸ್ವದೇಶಿ ತತ್ವವನ್ನು’ ಹರಡಿದರು. ಇದೇ ಕಾರಣದಿಂದ ಬ್ರಹ್ಮಾವರದ ಕೊಂಕಣಿ ಓರ್ಥೊಡೊಕ್ಸ್ ಸಮುದಾಯದ ಸ್ಥಾಪಕರಾದ ದಿ. ಆರ್ಚಬಿಶಪ್ ಅಲ್ವಾರಿಸ್ ಮಾರ್ ಜೂಲಿಯಸ್ ಈ ಸಮುದಾಯವನ್ನು 1889 ಇಸವಿಯಲ್ಲಿ ಭಾರತೀಯ (ಮಲಂಕರ) ಓರ್ಥೊಡೊಕ್ಸ್ ಸಿರಿಯನ್ ಸಭೆಯ ಅಧೀನದಲ್ಲಿ ತಂದರು.

ಪರಮಪವಿತ್ರ ಬಸೆಲಿಯೋಸ್ ಮಾರ್ಥೊಮಾ ಪೌಲೊಸ್ ||, ಇವರು ಭಾರತದ ಸೈಂಟ್ ಥೋಮಸ್ ಆಪೊಸ್ತಲಿಕ ಸಿಂಹಾಸನದ 91ನೇ ಉತ್ತರಾಧಿಕಾರಿ ಆಗಿರುತ್ತಾರೆ. ಪರಮ ಪವಿತ್ರ ಗುರುಗಳು ನವೆಂಬರ್ 1, 2010 ರಂದು ಸಿಂಹಾಸನ ಏರಿದರು. ಇವರ ಸಮಯವು ಹಲವಾರು ಆಪೊಸ್ತಲಿಕ ಸಂಬಂಧ ಬೆಳಸಲÀು ಸಾಕ್ಷಿ ಆಯಿತು. ಅವರು ಹಲವಾರು ಓರ್ಥೊಡೋಕ್ಸ್ ಸಭೆಯ ಪರಮಾಧ್ಯಕ್ಷರುಗಳನ್ನು ಸಂದರ್ಶಿಸಿದ್ದಾರೆ. ಸೆಪ್ಟೆಂಬರ್ 2013 ರಲ್ಲಿ ಪೋಪ್ ಫ್ರಾಂಸಿಸರನ್ನು ಸಹ ಭೇಟಿಯಾದರು.

ಪರಮಪವಿತ್ರ ಬಸೆಲಿಯೋಸ್ ಮಾರ್ಥೊಮಾ ಪೌಲೊಸ್‍ರವರು ಬ್ರಹ್ಮಾವರ ಕೊಂಕಣಿ ಓರ್ಥೊಡೊಕ್ಸ್ ಸಮುದಾಯದ ಕಾರ್ಯಗಳಲ್ಲಿ ಯಾವಾಗಲು ಹೆಚ್ಚಿನ ಆಸಕ್ತಿಯನ್ನು ವಹಿಸಿರುತ್ತಾರೆ. ಅದೇ ರೀತಿಯಲ್ಲಿ ಕೊಂಕಣಿ ಓರ್ಥೊಡೊಕ್ಸ್ ಸಮುದಾಯಕ್ಕೆ ಭೇಟಿ ನೀಡಲು ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

ಪರಮಪವಿತ್ರ ಬಸೆಲಿಯೋಸ್ ಮಾರ್ಥೊಮಾ ಪೌಲೊಸ್‍ರವರು ಡಿಸೆಂಬರ 4, 2015ರ ಬೆಳಿಗ್ಗೆ ಉಡುಪಿಗೆ ಅಗಮಿಸುವರು.

ಪರಮಪವಿತ್ರ ಕ್ಯಾಥೊಲಿಕೋಸ್ ಪೌಲೊಸ್‍ರವರನ್ನು ಉಡುಪಿ ಕರಾವಳಿ ಜಂಕ್ಷನ್‍ನಿಂದ ಸೈಂಟ್ ಮೇರಿಸ್ ಓರ್ಥೊಡೋಕ್ಸ್ ಸಿರಿಯನ್ ಕೆಥೆಡ್ರಲ್, ಬ್ರಹ್ಮಾವರದವರಗೆ, ಸರಿಯಾಗಿ 9.00 ಗಂಟೆಗೆ ಮೆರವಣಿಗೆಯೊಂದಿಗೆ ವಿಜ್ರಂಭಣೆಯಿಂದ ಸ್ವಾಗತಿಸಲಾಗುವುದು.

ಪರಮಪವಿತ್ರ ಕ್ಯಾಥೊಲಿಕೋಸ್ ಪೌಲೊಸ್‍ರವರ ಮೊದಲ ಭೇಟಿಯ ಗೌರವಾರ್ಥವಾಗಿ ಸಂಜೆ 4.00 ಗಂಟೆಗೆ ಚರ್ಚಿನ ವಠಾರದಲ್ಲಿ ಸಾರ್ವತ್ರಿಕ ಸಭೆಯನ್ನು ಆಯೋಜಿಸಲಾಗಿದೆ. ಇದರೊಂದಿಗೆ ಇಗರ್ಜಿಯ ಕೊಸ್ಮೊಪೊಲಿಟನ್ ಹಿರಿಯ ಪ್ರಾಥಮಿಕ ಶಾಲೆ, ಬ್ತಹ್ಮಾವರ, ಇದರ ಶತಮಾನೊತ್ಸವದ ಉದ್ಘಾಟನಾ ಸಮಾರಂಭವನ್ನು ಕೂಡ ಆಯೋಜಿಸಲಾಗಿದೆ. (ಕರೆಯೊಲೆ ಲಗತ್ತೀಕರಿಸಲಾಗಿದೆ)

ಡಿಸೆಂಬರ 5 ರಂದು ಪರಮಪವಿತ್ರ ಕ್ಯಾಥೊಲಿಕೋಸ್ ಪೌಲೊಸ್‍ರವರು ಶಿವಮೊಗ್ಗ ಜಿಲ್ಲೆಯ ಹುಲಿಕಲ್‍ನಲ್ಲಿ ಹೊಸದಾಗಿ ನಿರ್ಮಿಸಿದ ಸೈಂಟ್ ಗ್ರೆಗೊರಿಯೊಸ್ ಓರ್ಥೋಡೊಕ್ಸ್ ಸಿರಿಯನ್ ಇಗರ್ಜಿಯನ್ನು ಉದ್ಘಾಟಿಸಲಿರುವರು. ತದಾನಂತರ ಪರಮಪವಿತ್ರ ಕ್ಯಾಥೊಲಿಕೋಸ್ ಪೌಲೊಸ್‍ರವರು, ಬ್ರಹ್ಮಾವರದ ಸೈಂಟ್ ಮೇರಿಸ್ ಕೆಥೆಡ್ರಲ್‍ನ ಎಲ್ಲಾ ಸಹ-ಇಗರ್ಜಿಗಳನ್ನು ಅಂದರೆ ಹೊಸಂಗಡಿ ಸೈಂಟ್ ಜಾರ್ಜ್ ಚರ್ಚ್, ಕಂಡ್ಲುರ್ ಸೈಂಟ್ ಮೇರಿಸ್ ಚರ್ಚ್, ಸಾಸ್ತಾನ ಸೈಂಟ್ ಥೋಮಸ್ ಚರ್ಚ್, ಕುರಾಡಿ ಸೈಂಟ್ ಪೀಟರ್ಸ್- ಪೌಲ್ಸ್ ಚರ್ಚ್ ಮತ್ತು ಕೊಳಲಗಿರಿ ಸೈಂಟ್ ಅಂತೋನಿ ಚರ್ಚನ್ನು ಸಂದರ್ಶಿಸವರು.

ಡಿಸೆಂಬರ್ 6 ರಂದು, ಪರಮಪವಿತ್ರ ಕ್ಯಾಥೊಲಿಕೋಸ್ ಪೌಲೊಸ್‍ರವರು ಬೆಳಿಗ್ಗೆ 8.30ಕ್ಕೆ ಪವಿತ್ರ ಬಲಿ ಪೂಜೆಯನ್ನು ಅರ್ಪಿಸುವರು. ಪವಿತ್ರ ಪೂಜೆಯ ವೇಳೆಯಲ್ಲಿ, ಬ್ರಹ್ಮಾವರ ಓರ್ಥೋಡೊಕ್ಸ್ ಸಿರಿಯನ್ ಸಮುದಾಯದ ಸ್ಥಾಪಕರಾದ ದಿ. ಆರ್ಚಬಿಶಪ್ ಅಲ್ವಾರಿಸ್ ಮಾರ್ ಜೂಲಿಯಸ್, ಹಾಗೂ ಬ್ರಹ್ಮಾವರ ಸೈಂಟ್ ಮೇರಿಸ್ ಕೆಥೆಡ್ರಲಿನ ಮೊದಲ ವಿಗಾರ್ ಜನರಲ್‍ರಾದಂತಹ ದಿ. ಪೂಜ್ಯ ಗುರುಗಳಾದ ಆರ್. ಝಡ್. ನೊರೊನ್ಹಾರವರುಗಳನ್ನು ‘ಆಶೀರ್ವದಿಸಲ್ಪಟ್ಟವರೆಂದು’ ಘೊಷಿಸಲಾಗುವುದು. ತದಾನಂತರ ಪರಮಪವಿತ್ರ ಕ್ಯಾಥೊಲಿಕೋಸ್ ಪೌಲೊಸ್‍ರವರು ವಿವಿಧ ಆತ್ಮೀಕಾ ಸಂಘಟಣೆಗಳು ಮತ್ತು ಆಡಳಿತ ಮಂಡಳಿಗಳೊಂದಿಗೆ ಮಾತಿನಲ್ಲಿ ತೊಡುಗುವರು.

ಡಿಸೆಂಬರ್ 7 ಕ್ಕೆ ಪರಮಪವಿತ್ರ ಕ್ಯಾಥೊಲಿಕೋಸ್ ಪೌಲೊಸ್‍ರವರು ಬ್ರಹ್ಮಾವರಕ್ಕೆ ವಿದಾಯವನ್ನು ಹೇಳುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಂ ಆಬ್ರಾಹಾಂ ಕುರಿಯಾಕೋಸ್, ವಂ. ನೋಯೆಲ್ ಲೂವಿಸ್, ವಂ. ಡೇವಿಡ್ ಕ್ರಾಸ್ತಾ, ಅನಿಲ್ ರೊಡ್ರಿಗಸ್ ಮತ್ತು ಜೋಸ್ಲಿನ್ ಡಿ’ಆಲ್ಮೇಡಾ ಉಪಸ್ಥಿತರಿದ್ದರು.


Spread the love

Exit mobile version