ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರದ ಗ್ರಾಹಕರ ವಿದ್ಯುತ್ ಸಲಹಾ ಸಮಿತಿಯ ಸಭೆಯು ಶಾಸಕರಾದ ಶ್ರೀ ಪ್ರಮೋದ್ ಮಧ್ವರಾಜ್‍ರವರ ಅಧ್ಯಕತೆಯಲ್ಲಿ ಮೇ 6ರಂದು ಉಡುಪಿ ಮೆಸ್ಕಾಂ ಕಛೇರಿ ಆವರಣದಲ್ಲಿ ಜರುಗಿತು.
ಮಳೆಗಾಲದ ಅವಧಿಯಲ್ಲಿ ಸಂಜೆ ಮತ್ತು ರಾತ್ರಿ ವೇಳೆಯಲ್ಲಿ ಸಂಭವಿಸಬಹುದಾದ ವಿದ್ಯುತ್ ಅಡಚಣೆಗಳನ್ನು ತುರ್ತಾಗಿ ನಿರ್ವಹಿಸಲು ಸೂಕ್ತ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಶಾಸಕರು ಸೂಚಿಸಿದರು. ವ್ಯವಸ್ಥೆ ಸುಧಾರಣೆಯಡಿಯಲ್ಲಿ ಹೆಚ್ಚುವರಿ ಪರಿವರ್ತಕ ,ವಾಹಕ ಬದಲಾವಣೆ ಹಾಗೂ ಕುಡಿಯುವ ನೀರಿನ ಕಾಮಗಾರಿಗಳನ್ನು ಹೆಚ್ಚಿನ ಪ್ರಾಮುಖ್ಯತೆ ವಹಿಸಿ ನಿರ್ವಹಿಸಲು ತಿಳಿಸಿದರು. ವಿದ್ಯುತ್ ಸಂಪರ್ಕಕ್ಕಾಗಿ ಗ್ರಾಹಕರು ಸಲ್ಲಿಸಿದ ಅರ್ಜಿಗಳಿಗೆ ಆಕ್ಷೇಪಣೆ ಬಂದಲ್ಲಿ ಅಂತಹವುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ ಗ್ರಾಹಕರಿಗೆ ವಿದ್ಯುತ್ ಸಂಪರ್ಕ ನೀಡುವ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರ ಸಮಸ್ಯೆಗಳ ದೂರವಾಣಿ ಕರೆಗೆ ಎಲ್ಲಾ ಅಧಿಕಾರಿಗಳು ಹಾಗೂ ನೌಕರರು ಕೂಡಲೇ ಸ್ಪಂದಿಸಬೇಕಾಗಿ ಸೂಚಿಸಿದರು.
ಮಲ್ಪೆ 33 ಕೆ.ವಿ ಉಪಸ್ಥಾವರದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಉಡುಪಿ ವಿಭಾಗದ ಅಧಿಕಾರಿಯವರಿಗೆ ಉಡುಪಿ ಕೇಂದ್ರೀಯ ಸೇವಾ ಕೇಂದ್ರದ ದೂರು ಸ್ವೀಕರಣಾ ಕೊಠಡಿಗೆ ಸಿ.ಸಿ. ಟಿವಿ ಅಳವಡಿಸುವಂತೆ ಸೂಚಿಸಿದರು.
ಸಲಹಾ ಸಮಿತಿ ಸದಸ್ಯರಾದ ಶ್ರೀ ಸುಧಾಕರ ಹೆಗ್ಡೆ, ಶ್ರೀ ಸುರೇಂದ್ರ ನಿಟ್ಟೂರು , ಶ್ರೀಮತಿ ಚಂದ್ರಿಕಾ ಶೆಟ್ಟಿ, ಶ್ರೀ ಸಾಯಿರಾಜ್ , ಮೆಸ್ಕಾಂ ಅಧಿಕಾರಿಗಳಾದ ಇಇ ಶ್ರೀ ಗುರುರಾಜ್ ಸುವರ್ಣ, ಎಇಇ ಗಳಾದ ಶ್ರೀ ಗಣರಾಜ್ ಭಟ್, ಪ್ರಾಣೇಶ್ , ಸಂತೋಷ್ ನಾಯಕ್ , ಪ್ರಶಾಂತ್ ಪುತ್ರನ್, ಶ್ರೀನಿವಾಸ , ಸಿಬ್ಬಂದಿಗಳಾದ ನಾಗ ಶ್ರೀ ಆರ್. ವೀಣಾ, ಅಕ್ಷತಾ ಟಿ. ಮೃತ್ಯುಂಜಯ , ರಾಜೇಶ್, ಲಕ್ಷ್ಮೀ, ದಿವಾಕರ್, ಶ್ರೀಧರ ಪಿ.ಎಸ್, ನವೀನ್ ಎಚ್ , ಪ್ರಕಾಶ್ ನಾಯ್ಕ್, ಅಸೇಲಿಯನ್ ಡಿಸೋಜ ಇವರುಗಳು ಉಪಸ್ಥಿತರಿದ್ದರು.