ಉಡುಪಿ: ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಇಲ್ಲಿನ ಬಿಬಿಎಂ ವಿಭಾಗವು ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆ(PMKVY), ನ್ಯಾಶನಲ್ ಸ್ಕಿಲ್ ಡೆವಲಪ್‍ಮೆಂಟ್ ಕಾರ್ಪೋರೇಶನ್(NSDC) ಮತ್ತು ನ್ಯಾಶನಲ್ ಸ್ಟಾಕ್ ಎಕ್ಸೇಂಜ್(NSE)ನ ಸಹಯೋಗದೊಂದಿಗೆ ಜನವರಿ 01 ರಿಂದ ಜನವರಿ 8 2016 ರ ವರೆಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು.
ಉದ್ಘಾಟನೆಯನ್ನು ಫಿನ್‍ಮಾರ್ಕ ಸಂಸ್ಥೆಯ ಸ್ಥಾಪಕ ನಿರ್ದೇಶಕರಾದ ಶ್ರೀ ಪ್ರದೀಪ್ ಚಂದ್ರಶೇಖರನ್ ಇವರು ನೆರವೇರಿಸಿದರು. ತರಬೇತುದಾರರಾದ ಶ್ರೀ ಶಿವರಾಮ್ ರವೀಂದ್ರನ್ ಬ್ಯುಸಿನೆಸ್ ಡೆವಲಪ್‍ಮೆಂಟ್ ಮ್ಯಾನೇಜರ್ ಫಿನ್‍ಮಾರ್ಕ ಇವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ನೇರಿ ಕರ್ನೇಲಿಯೋ ರವರು ಕಾರ್ಯಕ್ರವiದ ಅಧ್ಯಕ್ಷತೆಯನ್ನು ವಹಿಸಿದ್ದರು. ಬಿಬಿಎಂ ವಿಭಾಗದ ಮುಖ್ಯಸ್ಥರಾದ ಶ್ರೀ ಮರ್ವಿನ್ ಡಿಸೋಜ ಮತ್ತು ಮ್ಯಾನೇಜಮೆಂಟ್ ಅಸೋಸಿಯೇಶನ್ ಇದರ ಸಂಯೋಜಕರಾದ ಶ್ರೀಮತಿ ರಾಧಿಕಾ ಪಾಟ್ಕರ್ ಇವರು ಉಪಸ್ಥಿತರಿದ್ದರು. ಕುಮಾರಿ ಹೆಲ್ಮಾ ಪಿಕಾರ್ಡೊ ಕಾರ್ಯಕ್ರಮ ನಿರೂಪಿಸಿದರು. ಬಿಬಿಎಂ ವಿಭಾಗದ ಉಪನ್ಯಾಸಕರಾದ ಶ್ರೀ ರವಿನಂದನ್ ಭಟ್ ವಂದಿಸಿದರು.
ಉಡುಪಿ – ಚಿಕ್ಕಮಗಳೂರು ಕ್ಚೇತ್ರದ ಲೋಕಸಭಾ ಸದಸ್ಯರಾದ ಶೋಭಾ ಕರಂದ್ಲಾಜೆ ಯವರ ವಿಶೇಷ ಶಿಫಾರಸ್ಸಿನ ಮೇರೆಗೆ ಕ್ಷೇತ್ರದ ಗ್ರಾಮೀಣ ಯುವಜನತೆಯ ಕೌಶಲ್ಯಾಭಿವೃದ್ಧಿಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಯೋಜನೆಯನ್ನು ಕಲ್ಯಾಣಪುರದ ಸುತ್ತಮುತ್ತಲಿನ ಯುವಜನತೆಗೆ ತಲುಪಿಸುವಲ್ಲಿ ಕಾರ್ಯಕ್ರಮವನ್ನು ಯೋಜಿಸಲಾಗಿದೆ. ಇದರಡಿಯಲ್ಲಿ 90 ವಿದ್ಯಾರ್ಥಿಗಳು ನೋಂದಾವಣಿ ಮಾಡಿದ್ದು ಯಶಸ್ವಿಯಗಿ ಮುಗಿಸಿದ್ದಲ್ಲಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಸಂಸ್ಥೆಯ ಪ್ರಮಾಣಪತ್ರವನ್ನು ಸ್ವೀಕರಿಸಲಿದ್ದಾರೆ. ನ್ಯಾಶನಲ್ ಸ್ಟಾಕ್ ಎಕ್ಸೇಂಜ್ ನ (NSE) ಈ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯಲ್ಲಿ ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಮಾತ್ರ ಈವರೆಗೆ ಅನುಷ್ಠಾನಕ್ಕೆ ತಂದಿರುವುದು ವಿಶೇಷ.