ಉಡುಪಿ: ಮಂಗಳೂರಿನಲ್ಲಿ ಕದ್ದ ಮೊಬೈಲನ್ನು ಉಡುಪಿಯಲ್ಲಿ ಮಾರಾಟ ಮಾಡಲು ಪ್ರಯತ್ನಿಸಿ ಪೋಲಿಸರಿಗೆ ಸಿಕ್ಕಿಬಿದ್ದ ಘಟನೆ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಭಾನುವಾರ ನಡೆದಿದೆ.
ಬಂಧಿತ ಆರೋಪಿಯನ್ನು ಬೆಳಗಾಂ ಜಿಲ್ಲೆ ರಾಮದುರ್ಗ, ತಾಂಡ್ಯ ನಿವಾಸಿ ಯುವರಾಜ್ ಪಮ್ಮರ್ ಯಾನೆ ಯುವರಾಜ್ ಸಿಂಗ್ (22) ಎಂದು ಗುರುತಿಸಲಾಗಿದೆ.
ಭಾನುವಾರ ಸಂಜೆ ಸುಮಾರ 5 ಗಂಟೆಯ ಸುಮಾರಿಗೆ ಟಿ. ಆರ್ ಜೈಶಂಕರ ಪೊಲೀಸ್ ನಿರೀಕ್ಷಕರು ಡಿಸಿಐಬಿ ಉಡುಪಿ ಇವರಿಗೆ ಉಡುಪಿ ಸಿಟಿ ಬಸ್ಸ್ ನಿಲ್ದಾಣದ ಬಳಿ ಕನೆಕ್ಟಿಂಗ್ ಪಾಯಿಂಟ್ ಮೊಬೈಲ್ ಅಂಗಡಿ ಬಳಿ ಓರ್ವ ವ್ಯಕ್ತಿಯು ಹೆಚ್‌ಟಿಸಿ ಕಂಪೆನಿಯ ಮೊಬೈಲ್ ಸೆಟ್ಟನ್ನು ಅಡ್ಡಾದಿಡ್ಡಿ ಹಣಕ್ಕೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಬಂದ ಮಾಹಿತಿ ಬಂದಿದ್ದು ಅದರ ಮೇರೆಗೆ ಸಿಬಂದಿಯವರೊಂದಿಗೆ ತೆರಳಿದ ವೇಳೆ ಉಡುಪಿ ಸಿಟ್ ಬಸ್ಸ್ ನಿಲ್ದಾಣದ ಕೆನಕ್ಟಿಂಗ್ ಮೊಬೈಲ್‌ನ ಅಂಗಡಿ ಬಳಿ ಬಂದು ಅಲ್ಲಿ ಮೊಬೈಲನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಯುವರಾಜನ್ನು ಬಂಧಿಸಿ ವಿಚಾರಿಸಿದಾಗ ಆತನು ಬೆಳಗಾಂ ನಿಂದ ಕೆಲಸ ಹುಡುಕಿ ಮಂಗಳೂರಿಗೆ ಬಂದಿದ್ದು ಎಲ್ಲಿಯೂ ಕೆಲಸ ಸಿಗದ ಕಾರಣ ಕುಡಿತಕ್ಕೆ ಹಣ ಇಲ್ಲದೆ ಇದ್ದುದರಿಂದ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯ ಡಾನ್ ಬಾಸ್ಕೋ ಹಾಸ್ಟೆಲ್‌ನ ರೂಂ ನಂಬ್ರ 408 ನೇದರ ಒಳಗೆ ಟೇಬಲ್ ಮೇಲಿದ್ದ ಹೆಚ್.ಟಿ.ಸಿ ಮೊಬೈಲ್ ಪೋನ್ ಹಾಗೂ ಪರ್ಸ್‌ನ್ನು ಕಳವು ಮಾಡಿ ಪರ್ಸ್ ನಲ್ಲಿದ್ದು 400 ರೂಪಾಯಿಯನ್ನು ತೆಗೆದುಕೊಂಡು ಪರ್ಸ್ ನಲ್ಲಿದ್ದ ಇತರ ವಸ್ತುಗಳನ್ನು ಹಾಗೂ ಮೊಬೈಲ್ ಸಿಮ್‌ನ್ನು ಅಲ್ಲೆ ಹಾಸ್ಟೇಲ್ ಬಳಿ ಎಸೆದು ಬಂದಿರುವುದಾಗಿಯೂ ಅಲ್ಲಿ ಮಾರಾಟ ಮಾಡಿದರೆ ಸಿಕ್ಕಿ ಬಿಳುವೆನೆಂದು ಉಡುಪಿಗೆ ಬಂದು ಮಾರಾಟ ಮಾಡಲು ಪ್ರಯತ್ನಿಸುವುದಾಗಿಯೂ ಈ ಮೊಬೈಲ್‌ನ ಯಾವುದೇ ದಾಖಲೆಗಳು ತನ್ನ ಬಳಿ ಇಲ್ಲವೆಂದು ತಿಳಿಸಿರುತ್ತಾನೆ.
ಉಡುಪಿ ನಗರ ಪೋಲಿಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಕಲಂ: 41(1)(ಡಿ) 102 ಸಿ.ಆರ್.ಪಿ.ಸಿ ಮತ್ತು 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.