ಉಡುಪಿ: ಯುಬಿಎಮ್ ಚರ್ಚಿನಲ್ಲಿ ಮೂರು ದಿನಗಳ’ ರಿವೈವಿಂಗ್ ದ ಫ್ಲೇಮ್’ ಧ್ಯಾನಕೂಟ ಆರಂಭ

Spread the love

ಉಡುಪಿ: ಯುನಾಯ್ಟೆಡ್ ಬಾಸೆಲ್ ಮಿಶನ್ ಚರ್ಚ್ ಬೋರ್ಡ್ ಮತ್ತು ಟ್ರಸ್ಟ್ ಅಸೋಶಿಯೇಶನ್ ಉಡುಪಿ, ದಕ, ಮತ್ತು ಕೊಡಗು ಜಿಲ್ಲೆಯ ಯುಬಿಎಮ್ ಜುಬಿಲಿ ಚರ್ಚಿನ ಸಭಾಪಾಲಕರಾದ ರೆವೆ. ಪ್ರಮೋದ್ ಗೋಣಿ ಇವರ ನೇತೃತ್ವದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಸುವಾರ್ತಿಕರಾದ ಎಸ್ ಡೇನಿಯಲ್ ಡೇವಿಡ್ ಇವರಿಂದ ರಿವೈವಿಂಗ್ ದ ಫ್ಲೇಮ್ ಎಂಬ ಧ್ಯೇಯ ವಾಕ್ಯದ ಮೇಲೆ ಮೂರು ದಿನಗಳ ಧ್ಯಾನಕೂಟವು ಶುಕ್ರವಾರ ಸಂಜೆ ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಆರಂಭಗೊಂಡಿತು.

reviving the_flame_udupi 01-05-2014 18-45-55 reviving the_flame_udupi 01-05-2014 18-46-23 reviving the_flame_udupi 01-05-2014 18-46-49 reviving the_flame_udupi 01-05-2014 18-47-10 reviving the_flame_udupi 01-05-2014 18-47-32 reviving the_flame_udupi 01-05-2014 18-55-58 reviving the_flame_udupi 01-05-2014 18-56-06 reviving the_flame_udupi 01-05-2014 19-03-06 reviving the_flame_udupi 01-05-2014 19-11-43 reviving the_flame_udupi 01-05-2014 19-12-39 reviving the_flame_udupi 01-05-2014 19-20-22 reviving the_flame_udupi 01-05-2014 19-20-24 reviving the_flame_udupi 01-05-2014 19-27-46 reviving the_flame_udupi 01-05-2014 19-35-42 reviving the_flame_udupi 01-05-2014 19-35-51 reviving the_flame_udupi 01-05-2014 19-51-13 reviving the_flame_udupi 01-05-2014 19-51-21 reviving the_flame_udupi 01-05-2014 19-52-50 reviving the_flame_udupi 01-05-2014 19-54-01 reviving the_flame_udupi 01-05-2014 19-55-05 reviving the_flame_udupi 01-05-2014 19-55-12 reviving the_flame_udupi 01-05-2014 19-55-19

ಧ್ಯಾನಕೂಟದ ಆರಂಭದಲ್ಲಿ ಮಾತನಾಡಿದ ಅಂತರಾಷ್ಟ್ರೀಯ ಖ್ಯಾತಿಯ ಸುವಾರ್ತಿಕರಾದ ಎಸ್ ಡೇನಿಯಲ್ ಡೇವಿಡ್ ಈ ಧ್ಯಾನಕೂಟವು ದೇವರ ಕೃಪಾವರಗಳನ್ನು ಪಡೆಯಲು ಒಂದು ಪರಿಣಾಮಕಾರಿಯಾದ ಮಾರ್ಗವಾಗಲಿದೆ. ದೇವರ ವಾಕ್ಯವನ್ನು ವಾಚಿಸುವುದರೊಂದಿಗೆ ದೇವರಲ್ಲಿ ಹೆಚ್ಚಿನ ಭಕ್ತಿ ವಿಶ್ವಾಸವನ್ನು ಗಳಿಸಲು ಒಂದು ಅವಕಾಶ ಎಂದರು.

ಮೂರು ದಿನದ ಕಾರ್ಯಕ್ರಮದಲ್ಲಿ ಪ್ರತಿ ದಿನ ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 4.30 ರವರೆಗೆ ಧ್ಯಾನಕೂಟಗಳು ಯುಬಿಎಮ್ ಜುಬಿಲಿ ಚರ್ಚಿನಲ್ಲಿ ನಡೆಯಲಿದ್ದು, ಸಂಜೆ 6 ರಿಂದ ಕ್ರಿಶ್ಚಿಯನ್ ಹೈಸ್ಕೂಲ್ ಗ್ರೌಂಡ್ನಲ್ಲಿ ಭಕ್ತಿ ಸಂಜೀವನ ಕೂಟಗಳು ನಡೆಯಲಿದ್ದು, ಧ್ಯಾನಕೂಟ ಮತ್ತು ಭಕ್ತಿ ಉಜ್ಜೀವನ ಕೂಟಗಳಲ್ಲಿ ವಿಶೇಷ ಸಂದೇಶಕರುಗಳಾಗಿ ಸುವಾರ್ತಿಕರಾದ ಎಸ್ ಡೇನಿಯಲ್ ಡೇವಿಡ್ ಮತ್ತು ರೆವೆ| ಜೆ. ಪ್ರಭಾಕರ್ , ವಾಲ್ಟರ್ ಮಾಬೆನ್ ಮತ್ತು ಡಾ| ಜಯ್ಸನ್ ಜೆ.ವಿ ಇವರುಗಳು ಭಾಗವಹಿಸಲಿದ್ದಾರೆ. ಅಲ್ಲದೆ ಭಕ್ತಿ ಸಂಜೀವನ ಕೂಟದಲ್ಲಿ ಆಶೀರ್ವಚನ ನೀಡಲು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧಮರ್ಾಧ್ಯಕ್ಷರಾದ ಅತಿ ವಂ ಡಾ. ಜೆರಾಲ್ಡ್ ಐಸಾಕ್ ಲೋಬೊ ಮುಖ್ಯ ಅತಿಥಿಗಳಾಗಿ, ಸೈಮನ್ ಪ್ರಕಾಶ್ ಅಧ್ಯಕ್ಷರು, ಯು.ಬಿ.ಎಂ.ಡಿ.ಸಿ.ವಿ ಪ್ರೊ. ಡಾ| ರಾಜ್ ರೋಡ್ರಿಗಸ್ ಸ್ಯಾಮ್ಸನ್ ಫ್ರ್ಯಾಂಕ್ ಯು.ಬಿ.ಎಮ್ ಮುಂಬೈ, ಮಂಗಳೂರು ಶಾಸಕರಾದ ಜೆ.ಆರ್.ಲೋಬೊ, ಮುಂಬೈಯ ಅಮೃತ್ ಕುಂದರ್ ಕ್ರಮವಾಗಿ ಭಾಗವಹಿಸಲಿದ್ದಾರೆ.
ಯುಬಿಎಮ್ ಜುಬಿಲಿ ಚರ್ಚಿನ ಸಭಾಪಾಲಕರಾದ ವಂ ಪ್ರಮೋದ್ ಗೋಣಿ ಇವರೊಂದಿಗೆ ಆರ್.ಎಸ್. ಮಾಬೆನ್, ಜಯಪ್ರಕಾಶ್ ಸೈಮನ್ಸ್, ಸುಧಾಕರ್ ಗೋಜರ್, ಸದಾನಂದ ಕಾಂಚನ್, ಗ್ಲಾಡ್ಸನ್ ಸಾಲಿನ್ಸ್, ಗೊಡ್ವಿನ್ ಬೆರ್ನಾಡ್, ಕ್ರಿಶ್ಚಿಯನ್ ಕರ್ಕಡ, ಅನಿತಾ ಸೈಮನ್ಸ್, ಜೆ.ಆರ್ ಜತ್ತನ್ನ, ಕೆರೊಲನ್ ಕಾಂಚನ್, ಸೆಲಿನಾ ಕರ್ಕಡ, ಜಿ.ಎಸ್. ಪಲ್ಲಟ, ಮಧುಕರ ಆನಂದ, ಸದಾನಂದ ಕೋಟ್ಯಾನ್, ಸಿ.ಎಸ್. ಫ್ರಾಂಚಿಸ್ ಮತ್ತು ವಿನೋದ್ ಜತ್ತನ್ನ ಇತರರು ಉಪಸ್ಥಿತರಿದ್ದರು.


Spread the love
1 Comment
Inline Feedbacks
View all comments
Naveen Oliver
9 years ago

Hope that God Almighty has done a marvelous thing in your life in the meeting.
You will never be the same again.
Praise Jesus.