ಉಡುಪಿ: ಪ್ರಧಾನ ಮಂತ್ರಿಯವರ ಸ್ವಚ್ಛಭಾರತ ಅಭಿಯಾನಕ್ಕೆ ಪೂರಕವಾಗಿ ಅ.2ರಂದು ರೋಟರಿ ಜಿಲ್ಲೆ 3180ರ ವತಿಯಿಂದ ರೋಟರಿ ಜಿಲ್ಲಾ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಹಾಗೂ ಸುರಕ್ಷಿತ ಪರಿಸರ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಪ್ರಮುಖವಾಗಿ ಮಕ್ಕಳಿಗೆ ಮತ್ತು ಗೃಹಣಿಯರಿಗೆ ಈ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ರೋಟರಿ ಜಿಲ್ಲೆ 3180ರ ಜಿಲ್ಲಾ ಗವರ್ನರ್ ಡಾ. ಭರತೇಶ್ ಆದಿರಾಜ್ ತಿಳಿಸಿದರು.
ಈ ವರ್ಷ ರೋಟರಿಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿದ್ದು, ಅವುಗಳಲ್ಲಿ ಮುಖ್ಯವಾಗಿ `ಜ್ಞಾನ ವಿಕಾಸ’ ಕಾರ್ಯಕ್ರಮ ಅಂದರೆ ರೋಟರಿ ಕ್ಲಬ್‍ಗಳ ಪರಿಸರದ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ನೀತಿ ಬೋಧಕ ಪುಸ್ತಕಳನ್ನು ನೀಡಿ ಅವುಗಳ ಕಥೆಗಳನ್ನು ಮಕ್ಕಳಿಗೆ ಹೇಳುವ ಮೂಲಕ ಜ್ಞಾನ ವಿಕಾಸಕ್ಕೆ ಸಹಕಾರ ಮಾಡುವುದು. ಮಕ್ಕಳ ಸುರಕ್ಷತಾ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಲು ಸೇಫ್ ಚೈಲ್ಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅವರು ಬುಧವಾರ ಉಡುಪಿ ರೋಟರಿಗೆ ಭೇಟಿ ನೀಡಿದ ವೇಳೆ ನಡೆದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ರೋಟರಿಯ ವಿದ್ಯಾಜ್ಯೋತಿ ಯೋಜನೆಯಡಿಯಲ್ಲಿ ವಿದ್ಯುತ್ ಇಲ್ಲದ ಮಳೆಗಳಿಗೆ 10 ಸಾವಿರ ರೂ. ಮೌಲ್ಯದ ಸೋಲಾರ್ ಯುನಿಟ್ ನೀಡಲಾಗುತ್ತದೆ. ಈಗಾಗಲೇ 3 ಸಾವಿರ ಮನೆಗಳಿಗೆ ಈ ಬೇಡಿಕೆ ಬಂದಿದೆ. ಉಡುಪಿ ಜಿಲ್ಲಾಧಿಕಾರಿಯವರು ಕಾರ್ಕಳದ ನಕ್ಸಲ್ ಪೀಡಿತ ಪ್ರದೇಶದ 500 ಮನೆಗಳಿಗೆ ಸೋಲಾರ್ ಅಳವಡಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ರೋಟರಿ ಜಿಲ್ಲೆ3180ರಲ್ಲಿ ಬರುವ ಚಾಮರಾಜನಗರ ಜಿಲ್ಲೆಯ ಸೋಲಿಗರ ಮನೆಗಳಿಗೂ ಸೋಲಾರ್ ವಿದ್ಯುತ್ ಅಳವಡಿಸಲಾಗುತ್ತದೆ ಎಂದರು.
ನಿರುದ್ಯೋಗಿ ಯುವಕರಿಗೆ ಸ್ಕಿಲ್‍ಡೆವಲಪ್‍ಮೆಂಟ್ ಕಾರ್ಯಕ್ರಮದಡಿಯಲ್ಲಿ ವೊಕೇಶನಲ್ ಟ್ರೈನಿಂಟ್ ಸೆಂಟರ್ ಮಾಡಿ ಉಚಿತ ತರಬೇತಿ ನೀಡಲಾಗುತ್ತದೆ. ಮಣಿಪಾಲ, ಶಿವಮೊಗ್ಗ, ಮೈಸೂರು, ಚಿಕ್ಕಮಗಳೂರಿನಲ್ಲಿ ತರಬೇತಿ ಕೇಂದ್ರಗಳಿದ್ದು, 3 ತಿಂಗಳ ತರಬೇತಿ ನೀಡಲಾಗುತ್ತದೆ.ಅಂತಾರಾಷ್ಟ್ರೀಯ ರೋಟರಿಯಿಂದ ರೋಟರಿ ಜಿಲ್ಲೆ 3180ಗೆ 84 ಸಾವಿರ ಡಾಲರ್ ಮೊತ್ತ ಬಂದಿದ್ದು, ಅದನ್ನು ವಿವಿಧ ಕ್ಲಬ್‍ಗಳಿಗೆ ಹಂಚಿಕೆ ಮಾಡಿ ವಿವಿಧ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತದೆ ಎಂದರು.
ಉಡುಪಿ ರೋಟರಿಯ ಬಗ್ಗೆ ಮಾತನಾಡಿದ ಅಧ್ಯಕ್ಷ ಡಾ. ಪ್ರಭಾಕರ ಮಯ್ಯ, ಎಸ್‍ಪಿ ಅಣ್ಣಾ ಮಲೈ ಅವರು ಪೆÇಲೀಸ್ ಇಲಾಖೆಗೆ ರೋಟರಿಯಿಂದ ಆಂಬುಲೆನ್ಸ್‍ನ ಬೇಡಿಕೆ ಇಟ್ಟಿದು, ವಿವಿಧ ಕ್ಲಬ್‍ಗಳ ಸಹಕಾರದಿಂದ ಪೂರೈಸಲಾಗುತ್ತದೆ. ಉಡುಪಿಯ ಆಯ್ದ ಸ್ಥಳಗಳಲ್ಲಿ ಔಷಧೀಯ ಸಸ್ಯಗಳನ್ನು ನೆಡುವ ಯೋಜನೆ, ಸರ್ಕಾರದ ಸಹಕಾರದಿಂದ ರೋಟರಿ ಕ್ಲಿನಿಕ್ ಹಾಗೂ ಮಲ್ಪೆ-ಮಣಿಪಾಲ ರಸ್ತೆಯ ಡಿವೈಡರ್‍ಗಳಲ್ಲಿ ಹಸಿರು ಬೆಳೆಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ವಲಯ 2ರ ಅಸಿಸ್ಟೆಂಟ್ ಗವರ್ನರ್ ಅಲೆನ ಲೂಯಿಸ್, ಕಾರ್ಯದರ್ಶಿಬಾಲಕೃಷ್ಣ ಮುದ್ದೋಡಿ, ವಲಯ ಸೇನಾನಿ ಬಿ.ವಿ. ಲಕ್ಷ್ಮೀ ನಾರಾಯಣ, ಕಾರ್ಯದರ್ಶಿರಾಮಚಂದ್ರ ಉಪಾಧ್ಯಾಯ ಉಪಸ್ಥಿತರಿದ್ದರು.