Home Mangalorean News Kannada News ಉಡುಪಿ: ವಾಹನಗಳಲ್ಲಿ ರಾಜಕೀಯ ಸ್ಟಿಕ್ಕರ್ ತೆರವುಗೊಳಿಸಿದ ಚುನಾವಣಾಧಿಕಾರಿಗಳು

ಉಡುಪಿ: ವಾಹನಗಳಲ್ಲಿ ರಾಜಕೀಯ ಸ್ಟಿಕ್ಕರ್ ತೆರವುಗೊಳಿಸಿದ ಚುನಾವಣಾಧಿಕಾರಿಗಳು

Spread the love

ಉಡುಪಿ: ವಾಹನಗಳಲ್ಲಿ ರಾಜಕೀಯ ಸ್ಟಿಕ್ಕರ್ ತೆರವುಗೊಳಿಸಿದ ಚುನಾವಣಾಧಿಕಾರಿಗಳು

ಉಡುಪಿ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ವಾಹನಗಳಲ್ಲಿ ರಾಜಕೀಯ ಪ್ರೇರಿತ ಸ್ಟಿಕ್ಕರ್ ಅಂಟಿಸಿದ ಸುಮಾರು 10 ಕ್ಕೂ ಅಧಿಕ ವಾಹನಗಳಲ್ಲಿದ್ದ ಸ್ಟಿಕ್ಕರನ್ನು ಮಂಗಳವಾರ ಅಧಿಕಾರಿಗಳು ತೆಗೆಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿ ವಠಾರದಲ್ಲಿದ್ದ 3 ವಾಹನಗಳಲ್ಲಿ ಅಂಟಿಸಿದ ಬರಹಗಳನ್ನು ಅಧಿಕಾರಿಗಳು ವಾಹನ ಚಾಲಕರಿಂದಲೇ ತೆಗೆಸಿದ್ದಾರೆ. ಅದೇ ರೀತಿ ಉಡುಪಿ ವಿಧಾನಸಭಾ ಕ್ಷೇತ್ರದ ಇತರೆಡೆಗಳಲ್ಲಿ ತಪಾಸಣಾ ತಂಡಕ್ಕೆ ಸಿಕ್ಕಿಬಿದ್ದ ಸುಮಾರು 8 ವಾಹನಗಳಲ್ಲಿದ್ದ ಸ್ಟಿಕ್ಕರ್ ಮತ್ತು ಬರಹಗಳನ್ನು ತೆಗೆಸಲಾಯಿತು.

ಕಾರ್ಯಾಚರಣೆ ಇನ್ನೂ ಮುಂದುವರಿಯಲಿದ್ದು, ವಾಹನಗಳಲ್ಲಿ ಯಾವುದೇ ರೀತಿಯ ಸ್ಟಿಕ್ಕರ್ ಅಥವಾ ಬರಹ ಕಂಡು ಬಂದರೆ ಅಂತಹ ವಾಹನಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ಜಪ್ತಿ ಮಾಡಿ, ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಮಾದರಿ ನೀತಿ ಸಂಹಿತೆ ಜಿಲ್ಲಾ ನೋಡಲ್ ಅಧಿಕಾರಿ ಭಾಸ್ಕರ್ ಎಚ್ಚರಿಸಿದ್ದಾರೆ.


Spread the love

Exit mobile version