Home Mangalorean News Kannada News ಉಡುಪಿ: ವೈಸಿಎಸ್-ವೈಎಸ್ಎಮ್ ರಾಜ್ಯ ಮಟ್ಟದ ವಿದ್ಯಾರ್ಥಿ ಜಾಥಾಕ್ಕೆ ಅಣ್ಣಾಮಲೈ ಚಾಲನೆ

ಉಡುಪಿ: ವೈಸಿಎಸ್-ವೈಎಸ್ಎಮ್ ರಾಜ್ಯ ಮಟ್ಟದ ವಿದ್ಯಾರ್ಥಿ ಜಾಥಾಕ್ಕೆ ಅಣ್ಣಾಮಲೈ ಚಾಲನೆ

Spread the love

ಉಡುಪಿ: ಶಿಕ್ಷಣದೊಂದಿಗೆ ಸಮಾಜ ಪರಿವರ್ತನೆಯ ಮೂಲಕ ಇತರರಿಗೆ ಮಾದರಿಯಾಗುವಂತೆ ಯುವಜನರಿಗೆ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ಅಣ್ಣಾಮಲೈ ಕರೆ ನೀಡಿದರು.

SP_YCS_YSM_Rally_Udupi 20-10-2015 09-56-45

ಅವರು ಮಂಗಳವಾರ  ಚರ್ಚಿನ ಆವರಣದಲ್ಲಿ ಯುವ ವಿದ್ಯಾರ್ಥಿ ಸಂಚಾಲನ ಭಾರತದಲ್ಲಿ ಕಾರ್ಯಾರಂಭಗೊಳಿಸಿ 50 ವರುಷಗಳನ್ನು ಪೊರೈಸಿದ ಸಂಧರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸಹಯೋಗದೊಂದಿಗೆ ಆಯೋಜಿಸಿದ ಕರ್ನಾಟಕ ಪ್ರಾಂತಿಯ ಮಟ್ಟದ ವೈಸಿಎಸ್ ವೈಎಸ್‍ಎಮ್ ರಾಜ್ಯ ಸಮಾವೇಶದ ವಿದ್ಯಾರ್ಥಿ ಹಕ್ಕುಗಳು ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.

ಭಾರತದ ಜನಸಂಖ್ಯೆಯಲ್ಲಿ 60% ದಷ್ಟು ಯುವಜನರಿದ್ದು, ಸಮಾಜ ಪರಿವರ್ತನೆಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಕಳೆದ ಎರಡು ದಿನಗಳಿಂದ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಯುವಜನರು ಶಿಕ್ಷಣ ವ್ಯವಸ್ಥೆಯ ಬದಲಾವಣೆಯ ಕುರಿತು ಹಲವಾರು ರೀತಿಯ ಚಿಂತನೆಗಳನ್ನು ಪಡೆದುಕೊಂಡಿದ್ದಿರಿ ಸಮ್ಮೇಳನದಿಂದ ಮತ್ತೆ ತಮ್ಮ ಊರು ಜಿಲ್ಲೆಗಳಿಗೆ ತಲುಪುವಾಗ ನೀವು ಇಲ್ಲಿ ಪಡೆದ ಮಾಹಿತಿಯನ್ನು ಜೀವನದಲ್ಲಿ ಅಳವಡಿಸಲು ಸಹಕರಿಸುವಂತೆ ಕರೆ ನೀಡಿದರು.

ರ್ಯಾಲಿಯ ಉಡುಪಿ ಶೋಕ ಮಾತಾ ಇಗರ್ಜಿಯ ವಠಾರದಿಂದ ಆರಂಭವಾಗಿ ಡಯಾನಾ ಸರ್ಕಲ್, ಬಿಗ್ ಬಜಾರ್, ಕಿನ್ನಿಮೂಲ್ಕಿ ಸ್ವಾಗತ ಗೋಪುರ ಮಾರ್ಗವಾಗಿ ಕನ್ನರ್‍ಪಾಡಿಯ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯನ್ನು ತಲುಪಿತು. ರ್ಯಾಲಿಯಲ್ಲಿ ಕರ್ನಾಟಕದ ಸುಮಾರು 1500 ಯುವಜನರು ಭಾಗವಹಿಸಿದ್ದರು


Spread the love

Exit mobile version