ಉಡುಪಿ: ಶಸ್ತ್ರಾಸ್ತ್ರ ನವೀಕರಣಕ್ಕೆ ತಿಂಗಳ ಅವಕಾಶ; ಜಿಲ್ಲಾಧಿಕಾರಿ ಆರ್ ವಿಶಾಲ್

Spread the love

ಉಡುಪಿ,:- ಶಸ್ತ್ರಾಸ್ತ್ರ ಕಾಯ್ದೆ 1959 ಹಾಗೂ ಶಸ್ತ್ರಾಸ್ತ್ರ ನಿಯಮಗಳು 1962 ರಂತೆ ಶಸ್ತ್ರ ಪರವಾನಿಗೆ ಹೊಂದಿರುವವರು ಪರವಾನಿಗೆ ವಾಯ್ದೆ (VALIDITY) ಮುಕ್ತಾಯಗೊಂಡಿದ್ದರೂ ಸಹಾ ಇದುವರೆಗೆ ನವೀಕರಿಸದೇ ಇರುವವರಿಗೆ ಪರವಾನಿಗೆ ನವೀಕರಿಸಲು ಜೂನ್ ತಿಂಗಳು ಪೂರ್ತಿ ಅವಕಾಶ ನೀಡಲಾಗಿದೆ.

ಸರ್ಕಾರದ ಆದೇಶದಂತೆ ಉಡುಪಿ ಜಿಲ್ಲೆಯಲ್ಲಿ ಶಸ್ತ್ರ ಪರವಾನಿಗೆ ಹೊಂದಿದವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಈ ಪ್ರಕಟಣೆ ಹೊರಡಿಸಲಾಗಿದೆ. ಅದರಂತೆ ಪರವಾನಿಗೆದಾರರು, ವಾಯ್ದೆ ಮುಗಿದಿರುವ ಪರವಾನಿಗೆಯನ್ನು ಮುಂದಿನ ಅವಧಿಗೆ ನವೀಕರಿಸಿಕೊಳ್ಳವರೇ ಸ್ವ ವಿಳಾಸ ವ್ಯಾಪ್ತಿಯ ಪೊಲೀಸ್ ನಿರೀಕ್ಷಕರು/ವೃತ್ತ ನಿರೀಕ್ಷಕರು ಇವರಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದುಕೊಂಡು ಮೂಲ ಪರವಾನಿಗೆಯೊಂದಿಗೆ ಜೂನ್ 30 ರೊಳಗೆ ಪರವಾನಿಗೆ ಮಂಜೂರಾತಿಯ ಸಕ್ಷಮ ಪ್ರಾಧಿಕಾರ ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆ ಮತ್ತು ತಹಶೀಲ್ದಾರರು ಕುಂದಾಪುರ. ಕಾರ್ಕಳ/ಉಡುಪಿ ಇವರ ಕಚೇರಿಗೆ ಹಾಜರಾಗಿ ನಿಗದಿತ ದಂಡನೆ ಶುಲ್ಕ ಪಾವತಿಸಿ ನವೀಕರಣಕ್ಕಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು, ಮತ್ತು ಇದನ್ನು ಅಂತಿಮ ನೋಟೀಸು ಎಂದು ತಿಳಿಯತಕ್ಕದ್ದು.

ಕೇಂದ್ರ ಗೃಹ ಮಂತ್ರಾಲಯ ನವದೆಹಲಿ ಇವರು ಸಿದ್ದಪಡಿಸಿರುವ N.D.A.L(National Database Of Arms Licences)  ವೆಬ್ ಸೈಟ್ ನಲ್ಲಿ ಯುನಿಕ್ ಐಡೆಂಟಿಟಿ ನಂಬರ್ (U.I.N) ನ್ನು ಎಲ್ಲಾ ಶಸ್ತ್ರ ಪರವಾನಗಳಿಗೂ ಕಡ್ಡಾಯವಾಗಿ ನೀಡಬೇಕಾಗಿರುತ್ತದೆ. ಯುನಿಕ್ ಐಡೆಂಟಿಟಿ ನಂಬರ್ ನ್ನು ಜನರೇಟ್ ಮಾಡದಿದ್ದಲ್ಲಿ ಪರವಾನಿಗೆಗಳು ವ್ಯಾಲಿಡ್ ಇರುವುದಿಲ್ಲವೆಂದು ಸ್ಪಷ್ಟವಾಗಿ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಆದುದರಿಂದ ಜಿಲ್ಲೆಯಲ್ಲಿನ ಎಲ್ಲಾ ಶಸ್ತ್ರ ಪರವಾನಗಿದಾರರು ತಮ್ಮಲ್ಲಿರುವ ಪರವಾನಗಿ ಪುಸ್ತಕದಲ್ಲಿ ವೆಬ್ ಸೈಟ್ ನಲ್ಲಿ ಜನರೇಟ್ ಆಗಿರುವ ಯುನಿಕ್ ಐಡೆಂಟಿಟಿ ನಂಬರ್ ನ್ನು ಜೂನ್ 30 ರೊಳಗೆ ಸಕ್ಷಮ ಪ್ರಾಧಿಕಾರ ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆ ಮತ್ತು ತಹಶೀಲ್ದಾರರು ಕುಂದಾಪುರ/ಕಾರ್ಕಳ/ಉಡುಪಿ ಇವರ ಕಚೇರಿಗೆ ಹಾಜರಾಗಿ ಕಡ್ಡಾಯವಾಗಿ ದಾಖಲಿಸಿಕೊಳ್ಳುವುದು ಎಂದು ಉಡುಪಿ ಜಿಲ್ಲಾಧಿಕಾರಿ ಡಾ| ವಿಶಾಲ್ ಆರ್ ತಿಳಿಸಿದ್ದಾರೆ.

 


Spread the love