Home Mangalorean News Kannada News ಉಡುಪಿ: ಶಾಸಕ ಪ್ರಮೋದ್ ಮಧ್ವರಾಜ್ 48 ನೇ ಹುಟ್ಟು ಹಬ್ಬ; ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಡುಪಿ: ಶಾಸಕ ಪ್ರಮೋದ್ ಮಧ್ವರಾಜ್ 48 ನೇ ಹುಟ್ಟು ಹಬ್ಬ; ಉಚಿತ ಆರೋಗ್ಯ ತಪಾಸಣಾ ಶಿಬಿರ

Spread the love

ಉಡುಪಿ: ಉಡುಪಿಯಲ್ಲಿ ಭೃಷ್ಟಾಚಾರ ಮುಕ್ತವಾದ ಆಡಳಿತಕ್ಕೆ ಹೊಸ ಆರಂಭ ನೀಡಿದ ವ್ಯಕ್ತಿ ಉಡುಪಿಯ ಶಾಸಕ ಪ್ರಮೋದ್ ಮಧ್ವರಾಜ್ ಎಂದು ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ಹೇಳಿದರು.

ಅವರು ಶನಿವಾರ ನಗರದ ಕಾಂಗ್ರೆಸ್ ಭವನದಲ್ಲಿ ಶಾಸಕ ಪ್ರಮೋದ್ ಮಧ್ವಾರಾಜ್ ಅವರ 48 ನೇ ಹುಟ್ಟು ಹಬ್ಬದ ಪ್ರಯುಕ್ತ ಆಯೋಜಿಸಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

pramod_madhwaraj_birthday 17-10-2015 10-40-40

ಪ್ರಮೋದ್ ಮಧ್ವರಾಜ್ ತನ್ನ ಶಾಸಕತ್ವದ ಅವಧಿಯಲ್ಲಿ ಹಲವಾರು ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದು, ಕೇವಲ ರಾಜಕಾರಣಿಯಾಗಿ ತಮ್ಮ ಸೇವೆಯನ್ನು ನೀಡದೆ, ನೊಂದವರಿಗೆ, ಆರೋಗ್ಯದ ಸಮಸ್ಯೆಯಿಂದ ಬಳುಲುವರಿರಗೆ ಸದಾ ತಮ್ಮ ಟ್ರಸ್ಟ್ ಮೂಲಕ ಸೇವೆಯನ್ನು ನೀಡುತ್ತಾ ಬಂದಿದ್ದು ಪ್ರತಿಯೊಬ್ಬರಿಗೂ ಅನುಕರಣಿಯವಾಗಿದೆ. ಬಡವರ ಬಗ್ಗೆ ಇಂತಹ ವಿಶೇಷ ಕಾಳಜಿಯನ್ನು ಹೊಂದಿರುವ ಇವರು ಕೇವಲ ಶಾಸಕರಾಗಿರದೆ ಮಂತ್ರಿಯಾಗಿ ಪದನ್ನೋತಿ ಹೊಂದಲಿ ಎಂದು ಶುಭ ಹಾರೈಸಿದರು.

ಅಂಬಾಗಿಲು ಜುಮ್ಮಾ ಮಸೀದಿಯ ಮಹಮ್ಮದ್ ಹನೀಪ್ ಮಾತನಾಡಿ ದಾನ ಧರ್ಮದ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪುವ ಮೇರು ವ್ಯಕ್ತಿತ್ವದ ವ್ಯಕ್ತಿ ಪ್ರಮೋದ್ ಮಧ್ವರಾಜ್ ಅವರು. ಅವರ ಬಳಿ ಹೋದ ಯಾವುದೇ ವ್ಯಕ್ತಿ ಬರಿಗೈಯಲ್ಲಿ ವಾಪಾಸು ಬರುವುದಿಲ್ಲ ಬದಲಾಗಿ ತಮ್ಮಿಂದ ಸಾಧ್ಯವಾದ ನೆರವು ನೀಡಿ ಕಳುಹಿಸುವ ವಿಶೇಷ ಗುಣ ಅವರದ್ದಾಗಿದೆ ಅವರ ಈ ಸೇವೆ ಇತರರಿಗೂ ಮಾದರಿಯಾಗುವುದರೊಂದಿಗೆ ಮುಂದಿನ ದಿನಗಳಲ್ಲಿ ಅವರ ಸೇವೆ ಇನ್ನೂ ಹೆಚ್ಚು ಜನರಿಗೆ ಲಭ್ಯವಾಗಲಿ ಎಂದು ಶುಭ ಹಾರೈಸಿದರು.

ಉಡುಪಿ ಧರ್ಮಪ್ರಾಂತ್ಯದ ಅಂತರ್ ಧರ್ಮೀಯ ಸಂವಾದದ ನಿರ್ದೇಶಕ ವಂ ವಿಲಿಯಂ ಮಾರ್ಟಿಸ್ ಮಾತನಾಡಿ ಸೇವೆಗೆ ಮಧ್ವರಾಜ್ ಕುಟುಂಬ ಒಂದು ಮಾದರಿಯಾಗಿದ್ದು ಮಲ್ಪೆಯ ಅಭಿವೃದ್ಧಿಯಲ್ಲಿ ಪ್ರಮೋದ್ ಅವರ ತಂದೆ ಮಧ್ವರಾಜ್ ಹಾಗೂ ತಾಯಿ ಮನೋರಮಾ ಮಧ್ವರಾಜ್ ಅವರ ಕಾಣಿಕೆ ಕೂಡ ಹೆಚ್ಚಿದೆ. ಮಂತ್ರಿಯಾಗಿದ್ದ ವೇಳೆ ಅನಗತ್ಯ ವೆಚ್ಚಗಳಿಗೆ ಸರಕಾರ ಹಣವನ್ನು ಬಳಸದೆ ಸ್ವಂತ ಹಣವನ್ನು ಬಳುಸುತ್ತಿದ್ದ ಮೇರು ವ್ಯಕ್ತಿತ್ವವನ್ನು ಹೊಂದಿದ್ದವರು ಮನೋರಮ ಮಧ್ವರಾಜ್ ಅವರ ಗುಣವೇ ಇಂದು ಪ್ರಮೋದ್ ಅವರಿಗೆ ಬಂದಿದ್ದು, ಇವರ ಸೇವೆ ಇನ್ನೂ ಕೂಡ ಮುಂದುವರೆಯಲಿ ಎಂದು ಶುಭ ಹಾರೈಸಿದರು.

ಪ್ರಮೋದ್ ಮಧ್ವರಾಜ್ ಮಾತನಾಡಿ ಹುಟ್ಟು ಹಬ್ಬಗಳ ಆಚರಣೆಯಲ್ಲಿ ತನಗೆ ಯಾವುದೇ ನಂಬಿಕೆ ಇಲ್ಲ ಆದರೂ ತನ್ನ ಗೆಳಯರು ಹಾಗೂ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ತನಗೆ ಅತಿ ಪ್ರೀತಿಯ ವಿಷಯವಾದ ಆರೋಗ್ಯಕ್ಕೆ ಸಂಬಂಧಿಸಿ ಬಡವರ ಆರೋಗ್ಯ ತಪಾಸಣ ಶಿಬಿರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಯಾವುದೇ ವ್ಯಕ್ತಿ ಎಷ್ಟೇ ಒಳ್ಳೆಯದಾಗಿದ್ದರೂ ಕೂಡ ಯಾವ ಸಂದರ್ಭದಲ್ಲಿ ಆರೋಗ್ಯ ಕೆಡುತ್ತದೆ ಎನ್ನುವುದು ಹೇಳಲು ಅಸಾಧ್ಯ. ನಾನು ನನ್ನ ಕೈಲಾದ ಸಹಾಯವನ್ನು ಇದುವರೆಗೆ ಮಾಡಿಕೊಂಡು ಬಂದಿದ್ದು ದೇವರು ಕೂಡ ತನಗೆ ಆಶಿರ್ವಾದವನ್ನು ಕರುಣಿಸಿದ್ದು, ಆರೋಗ್ಯದ ಕುರಿತಾಗಿ ಸಹಾಯ ಮಾಡಿದ್ದಕ್ಕೆ ನನಗೆ ದೇವರು ನನ್ನ ವ್ಯವಹಾರದಲ್ಲಿ ದುಪ್ಪಟ್ಟು ಲಾಭವಾಗುವಂತೆ ಆಶೀರ್ವದಿಸಿದ್ದಾರೆ ಆದ್ದರಿಂದ ನೋವಿನಲ್ಲಿರುವವರ ಕಣ್ಣಿರನ್ನು ಒರೆಸಿದ ತೃಪ್ತಿ ತನಗಿದೆ ಮುಂದೆಯೂ ಕೂಡ ತನ್ನ ಸೇವೆಯನ್ನು ಸಮಾಜದ ಕಷ್ಟಗಳಿಗೆ ಸ್ಪಂದಿಸುವುದರ ಮೂಲಕ ಮಾಡಲಿದ್ದೇನೆ ಎಂದರು.

ಕೆಎಮ್ ಸಿ ಮಣಿಪಾಲ ಇದರ ಯೂರೋಲಾಜಿ ವಿಭಾಗದ ಮುಖ್ಯಸ್ಥ ಡಾ ಪದ್ಮರಾಜ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕೆಎಸ್ ಡಿಎಲ್ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೋ, ಊಡಾ ಅಧ್ಯಕ್ಷ ಜನಾರ್ದನ್ ತೋನ್ಸೆ, ನಗರಸಭೆಯ ಅಧ್ಯಕ್ಷ ಯುವರಾಜ್ ಇನ್ನಿತರರು ಉಪಸ್ಥಿತರಿದ್ದರು.


Spread the love

Exit mobile version