ಉಡುಪಿ : ಶ್ರೀಲಂಕಾ ಆತ್ಮಾಹುತಿ ದಾಳಿಗೆ ಬಲಿಯಾದವರ ಆತ್ಮಗಳಿಗೆ ಶಾಂತಿ ಕೋರಿ ನಾಯರ್ ಕೆರೆ ಮಸೀದಿಯಲ್ಲಿ ಪ್ರಾರ್ಥನೆ
ಉಡುಪಿ: ಶ್ರೀಲಂಕಾದ ಕೊಲಂಬೊ ನಗರದಲ್ಲಿ ಈಸ್ಟರ್ ಹಬ್ಬದ ದಿನದಂದು ಚರ್ಚುಗಳು ಹಾಗೂ ಹೋಟೇಲ್ ಗಳ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತರಾದ ನಾಗರಿಕರ ಆತ್ಮಗಳಿಗೆ ಶಾಂತಿ ಕೋರಿ ಉಡುಪಿ ನಾಯರ್ ಕೆರೆ ಬಳಿಯ ಹಾಶಿಮಿ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಶುಕ್ರವಾರದ ನಮಾಜ್ ಪ್ರಾರ್ಥನೆಯ ವೇಳೆ ಹೆಸರಾಂತ ಚಿಂತಕರಾದ ಡಾ|ಮೊಯಿದ್ದೀನ್ ಗಾಝಿ ಅವರು ಕುತ್ಭಾ ಪ್ರಾರ್ಥನೆಯ ಪ್ರವಚನದಲ್ಲಿ ಹೀನಾಯ ದಾಳಿಯನ್ನು ಕಟು ಶಬ್ದಗಳಿಂದ ಖಂಡಿಸಿದರಲ್ಲದೆ ಮೃತ ಆತ್ಮಗಳಿಗೆ ಸದ್ಗತಿ ಕೋರಲಾಯಿತು.