Home Mangalorean News Kannada News ಉಡುಪಿ: ಸರಕಾರಿ ವಸತಿ ಯೋಜನೆಯ ಫಲಾನುಭವಿಗಳಿಗೆ ಮರಳು ಲಭ್ಯ

ಉಡುಪಿ: ಸರಕಾರಿ ವಸತಿ ಯೋಜನೆಯ ಫಲಾನುಭವಿಗಳಿಗೆ ಮರಳು ಲಭ್ಯ

Spread the love

ಉಡುಪಿ: ಸರಕಾರಿ ವಸತಿ ಯೋಜನೆಯ ಫಲಾನುಭವಿಗಳಿಗೆ ಮರಳು ಲಭ್ಯ

ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ಮತ್ತು ಉಡುಪಿ ತಾಲ್ಲೂಕಿನ ಸಿ.ಆರ್.ಝಡ್ ವ್ಯಾಪ್ತಿಯಲ್ಲಿನ ನದಿ ಪಾತ್ರಗಳಲ್ಲಿ ಗುರುತಿಸಿರುವ 05 ಮರಳು ದಿಬ್ಬಗಳಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ಈಗಾಗಲೇ 36 ಜನರು ಪರವಾನಿಗೆಯನ್ನು ಹಾಗೂ ಸಾಗಾಟ ಪರವಾನಿಗೆಯನ್ನು ಪಡೆದುಕೊಂಡಿರುತ್ತಾರೆ. ಈಗಾಗಲೇ ನಿಗಧಿಪಡಿಸಿರುವ ಮರಳಿನ ಪ್ರಮಾಣದಲ್ಲಿ ಶೇ.10 ರಷ್ಟು ಮರಳನ್ನು ನಿರ್ಮಿತಿ ಕೇಂದ್ರದವರು ನೇಜಾರು ಪ್ರದೇಶದಲ್ಲಿ ನಿರ್ಮಿಸಿರುವ ಸ್ಟಾಕ್ಯಾರ್ಡ್ಗೆ ಮರಳನ್ನು ಹಾಕಲು ಮರಳು ಪರವಾನಿಗೆದಾರರಿಗೆ ಸೂಚಿಸಲಾಗಿರುತ್ತದೆ.

ಕಡಿಮೆ ವರಮಾನದ ಸರಕಾರಿ ವಸತಿ ಯೋಜನೆಯ ಫಲಾನುಭವಿಗಳು ಆಯಾ ಗ್ರಾಮ ಪಂಚಾಯತ್/ನಗರಸಭೆ/ಪುರಸಭೆ ಅಧಿಕಾರಿಯವರಿಂದ ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಮರಳಿನ ಬಗ್ಗೆ ಮನೆ ಮಂಜೂರಾತಿ ಪತ್ರ, ಮನೆ ನಿರ್ಮಾಣದ ನೀಲಿ ನಕಾಶೆ, ಅಧಾರ್ ಕಾರ್ಡ್ನೊಂದಿಗೆ ಧೃಡೀಕರಣ ಪತ್ರದೊಂದಿಗೆ 10 ಮೆ.ಟನ್ ಮರಳಿಗೆ ರೂ. 6000 ದಂತೆ ಹಾಗೂ ಮರಳು ಲೋಡಿಂಗ್ ಚಾರ್ಜ್, ಜಿ.ಎಸ್.ಟಿ ಶುಲ್ಕ, ಸಾಗಾಟ ಪರವಾನಿಗೆ ಹಾಳೆಯ ಶುಲ್ಕದೊಂದಿಗೆ ನಿರ್ಮಿತಿ ಕೇಂದ್ರದ ಅಧಿಕಾರಿಯವರಿಗೆ ಸಲ್ಲಿಸಿ, ಸದರಿ 10 ಮೆ.ಟನ್ ಮರಳನ್ನು ಸ್ಟಾಕ್ಯಾರ್ಡ್ನಿಂದ ಖನಿಜ ಸಾಗಾಟ ಪರವಾನಿಗೆಯೊಂದಿಗೆ ಮರಳನ್ನು ಪಡೆಯಬಹುದಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version