ಉಡುಪಿ: ಕನ್ನಡ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವುದು ಕೀಳರೀಮೆ ಅಲ್ಲಾ ಪ್ರತಿಯೊಬ್ಬ ತಂದೆ ತಾಯಿಯು ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸುವ ಸಂಕಲ್ಪ ತೊಡಬೇಕು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು. ಕರ್ನಾಟಕ ಕಾರ್ಮಿಕರ ವೇದಿಕೆ ವತಿಯಿಂದ ಎಂಜಿಎಂ ಕಾಲೇಜು ಮೈದಾನದಲ್ಲಿ ಸಂಜೆ ನಡೆದ ಕರ್ನಾಟಕ ರಾಜ್ಯೋತ್ಸವ ಹಾಗೂ ರಾಜ್ಯ ಮಟ್ಟದ ಬೃಹತ್ ಕಾರ್ಮಿಕರ ಜನಜಾಗೃತಿ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂಜಿನಿಯಂರಿಗ್, ವೈದ್ಯಕೀಯ ಸೇರಿದಂತೆ ಉನ್ನತ ಶಿಕ್ಷಣ ವಿಭಾಗದಲ್ಲಿ ಕನ್ನಡ ಕಡ್ಡಾಯ ಮಾಡುವ ಕೆಲಸ ಸರ್ಕಾರ ಮಾಡಬೇಕೆಂದು ಆಗ್ರಹಿಸಿದರು. ಕನ್ನಡ ಭಾಷೆ ಬೆಳವಣಿಗೆಗ ಪ್ರತಿಯೊಬ್ಬ ಕನ್ನಡಿಗನು ಪೂರಕವಾಗಿ ಕೆಲಸ ಮಾಡಬೇಕಿದ್ದು ಈ ನಿಟ್ಟಿನಲ್ಲಿ ಕಾರ್ಮಿಕರ ಮತ್ತು ನಾಡಿನ ಏಳಿಗೆಗಾಗಿ ಕಾರ್ಯಚರಿಸುತ್ತಿರುವ ಕರ್ನಾಟಕ ಕಾರ್ಮಿಕ ವೇದಿಕೆ ಸೇವೆ ಮಾದರಿಯಾದುದು ಎಂದು ಅವರು ಅಭಿಪ್ರಾಯ ಪಟ್ಟರು.
ಸಮಾರೋಪ ಸಮಾರಂಭ ಮೊದಲು ಮದ್ಯಾಹ್ನ ಜೋಡುಕಟ್ಟೆಯಿಂದ ಎಂ.ಜಿ.ಎಂ ಮೈದಾನದ ವರೆಗೆ ಬೈಕ್ ಮತ್ತು ಟ್ಯಾಬ್ಲೊಗಳನ್ನು ಒಳಗೊಂಡ ಬೃಹತ್ ಮೆರವಣಿಗೆ ನಡೆಯಿತು.
ಕರ್ನಾಟಕ ಕಾರ್ಮಿಕ ವೇದಿಕೆಯು ಈ ಸಂದÀರ್ಭದಲ್ಲಿ ವಿವಿದ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ನಾಡಿನ ಸಾಧಕರಾದ ಶಿವಣ್ಣ ಅಂಬಳೆ, ಮೈಸೂರು ( ಕಲೆ- ವೀರಗಾಸೆ), ಸದಾಶಿವ ಶೆಟ್ಟಿ ಕೊಳವಳ್ಳಿ, ಶಿವಮೊಗ್ಗ (ರೈತ), ವೀರಣ್ಣಕುರುವತ್ತಿ ಗೌಡರ್, ಹಾವೇರಿ (ಆಸುಕವಿ), ಗುರುರಾಜ್ ಸನಿಲ್,ಉಡುಪಿ (ಉರಗತಜ್ನ) ಶ್ರೀಪತಿ ಹೆಗಡೆ ಹಕ್ಲಾಡಿ (ಹಿರಿಯ ಪತ್ರಕರ್ತ), ರಾಧ ಕೊಡವೂರು (ನಿವೃತ್ತ ಶಿಕ್ಷಕಿ). , ಉದಯ್ ಕುಮಾರ್ ಶೆಟ್ಟಿ (ಸಮಾಜಸೇವಕರು) ಅವರನ್ನು ರಾಜ್ಯೊತ್ಸವ ಪ್ರಶಸ್ತಿ ನೀಡಿ ಗೌರವಿಸಿತು ಹಾಗು ಕಾರ್ಮಿಕ, ಸಾಮಾಜ ಸೇವಕ ರವಿ ಕಟಪಾಡಿ, ಕಿದಿಯೂರು ಉದಯ ಕುಮಾರ್ ಫ್ಯಾಮಿಲಿ ಟ್ರಸ್ಟ್ ನ ಉದಯ ಕುಮಾರ್ ಶೆಟ್ಟಿ, ಅಜ್ಜರಕಾಡು ಜಿಲ್ಲಾಸ್ಪತ್ರೆ ಶುಶ್ರೂಷಕಿ ವಿಮಲ, ಜನಪರ ಹೊರಾಟಗಾರ ಮಹಮದ್ ರಫೀಕ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಗರ ಸಭೆ ಅಧ್ಯಕ್ಷ ಪಿ ಯುವರಾಜ್ ಕಾರ್ಮಿಕರಿಗಾಗಿ ಉಚಿತ ಆಂಬುಲೆನ್ಸ್ ಬಿಡುಗಡೆ ಮಾಡಿದರು.
ಕರ್ನಾಟಕ ಕಾರ್ಮಿಕರ ವೇದಿಕೆಯ ಸಂಸ್ಥಾಪಕ ರಾಜ್ಯಧ್ಯಕ್ಷ ಎಚ್.ಬಿ ನಾಗೇಶ್, ಗೌರವಾಧ್ಯಕ್ಷ ಪದ್ಮನಾಭ , ಜಿಲ್ಲಾದ್ಯಕ್ಷ ರವಿ ಶೆಟ್ಟಿ, ಉಪಾಧ್ಯಕ್ಷ ಸುರೇಶ್ ಸೇರಿಗಾರ್, ಪ್ರಧಾನ ಕಾರ್ಯದರ್ಶಿ ರವಿ ಶಾಸ್ತ್ರಿ ಬನ್ನಂಜೆ, ಮಹಿಳ ಅದ್ಯಕ್ಷೆ ಚಂದ್ರಿಕ ಎಸ್ ಶೆಟ್ಟಿ, ಹಿರಿಯ ನ್ಯಾಯವಾದಿ ಮಟ್ಟಾರು ರತ್ನಾಕರ್ ಹೆಗ್ಡೆ, ನಗರ ಸಭೆ ಉಪಾದ್ಯಕ್ಷೆ ಅಮೃತ ಕೃಷ್ಣ ಮೂರ್ತಿ, ನಗರ ಸಭೆ ಸದಸ್ಯೆ ಗೀತ ಶೇಟ್, ಸಮಾಜ ಸೇವಕ ನಿತ್ಯಾನಂದ ಒಳಕಾಡು, ರಾಷ್ಟ್ರಿಯ ಮಾನವ ಹಕ್ಕು ಹೊರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಇನ್ನಾ ಉದಯ ಕುಮಾರ್ ಶೆಟ್ಟಿ, ಪತ್ರಕರ್ತ ಜನಾರ್ಧನ್ ಕೊಡವೂರು ಉಪಸ್ಥಿತರಿದ್ದರು. ಕಾರ್ಮಿಕ ವೇದಿಕೆಯ ರಮಾಂಜಿ ನಮ್ಮ ಭೂಮಿ ಸ್ವಾಗತಿಸಿದರು,ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು