ಉಡುಪಿ ಸೇರಿದಂತೆ ರಾಜ್ಯದ 13 ಜಿಲ್ಲೆಗಳಲ್ಲಿ ರಿಲೀಫ್, ಆದರೆ ಮದ್ಯಕ್ಕೆ ಬ್ರೇಕ್, ಏನಿರುತ್ತೆ?, ಏನಿರಲ್ಲ?!
ಬೆಂಗಳೂರು: ರಾಜ್ಯದ 13 ಜಿಲ್ಲೆಗಳಲ್ಲಿ ಕೊರೋನಾ ಕೊರೋನಾ ಸೋಂಕು ಇಲ್ಲದಿರುವುದರಿಂದ ಅವುಗಳನ್ನು ಗ್ರೀನ್ ಜೋನ್ ಎಂದು ಗುರುತಿಸಲಾಗಿದ್ದು ಇದೀಗ ಕೆಲ ಷರತ್ತುಗಳ ಮೇಲೆ ಸಹಜ ಜೀವನಕ್ಕೆ ಅವಕಾಶ ಮಾಡಿಕೊಡಲಾಗಿದೆ.
13 ಜಿಲ್ಲೆಗಳಿಗೆ ಅನ್ವಯವಾಗುವಂತೆ ಹೊಸ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಅದರ ಪ್ರಕಾರ, ಚಾಮರಾಜನಗರ, ಕೊಪ್ಪಳ, ಕೋಲಾರ, ಉಡುಪಿ, ರಾಯಚೂರು, ಹಾವೇರಿ, ಯಾದಗಿರಿ, ದಾವಣಗೆರೆ, ಶಿವಮೊಗ್ಗ, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಅನ್ವಯವಾಗಲಿದೆ. ಇನ್ನು ಕೊಡಗು ಜಿಲ್ಲೆಗೂ ವಿನಾಯಿತಿ ಸಿಕ್ಕಿದ್ದು ರಾಮನಗರದಲ್ಲಿ ಕೈಗಾರಿಕೆ ಹೊರತು ಪಡಿಸಿ ಉಳಿದ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ಸಿಕ್ಕಿದೆ.
* ಎಸ್ಇಜೆಡ್ ವಿಶೇಷ ಆರ್ಥಿಕ ವಲಯ, ರಫ್ತು, ಕೈಗಾರಿಕಾ ವಲಯ, ಕೈಗಾರಿಕಾ ಟೌನ್ ಶಿಪ್ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಅಲ್ಲಿ ಕೆಲಸ ಮಾಡುವವರು ಅಲ್ಲಿಯೇ ಉಳಿದುಕೊಂಡು ಕಾರ್ಯ ನಿರ್ವಹಿಸಬೇಕು.
* ಮಾರುಕಟ್ಟೆಗಳ ಕಾಂಪ್ಲೆಕ್ಸ್ ಗಳಲ್ಲಿ ಕೆಲಸಕ್ಕೆ ಅವಕಾಶ.
* ಶೇ. 50ರಷ್ಟು ಕಾರ್ಮಿಕರು ಕೆಲಸ ಮಾಡಲು ಅವಕಾಶ.
* ಸಣ್ಣ ಅಂಗಡಿಗಳು, ಪಾಲಿಕೆ ವ್ಯಾಪ್ತಿಯ ಅಂಗಡಿ ತೆರೆಯಲು ಅವಕಾಶ.
* ಈ ಜಿಲ್ಲೆಗಳಲ್ಲಿ ಮಾಲ್ ಗಳು ತೆರೆಯುವಂತಿಲ್ಲ.
* ಮುಖ್ಯವಾಗಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ಷರತ್ತು ಹಾಕಲಾಗಿದೆ.
* ಹೊಸ ಮಾರ್ಗ ಸೂಚಿ ಮೇ 3ರವರೆಗೂ ಮಾತ್ರ ಅನ್ವಯವಾಗಲಿದೆ.
* ಸದ್ಯಕ್ಕೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿಲ್ಲ.
ಇನ್ನು ಮಂಡ್ಯ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಧಾರವಾಡದಲ್ಲಿ ಅಂಗಡಿ ಮತ್ತು ಕೈಗಾರಿಕೆಗೆ ಅನುಮತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರ ನಿರ್ಧಾರಕ್ಕೆ ಬಿಡಲಾಗಿದೆ.
8 ಜಿಲ್ಲೆಗಳಿಗಿಲ್ಲ ಹೊಸ ಮಾರ್ಗಸೂಚಿ ಅನ್ವಯವಿಲ್ಲ
ಬೆಂಗಳೂರು ನಗರ, ಬೆಳಗಾವಿ, ಮೈಸೂರು, ವಿಜಯಪುರ, ಕಲಬುರಗಿ, ಬಾಗಲಕೋಟೆ, ದಕ್ಷಿಣ ಕನ್ನಡ, ಬೀದರ್ ಗಳಲ್ಲಿ ಈಗ ಇರುವಂತೆ ಲಾಕ್ ಡೌನ್ ಮುಂದುವರೆಯಲಿದೆ