ಉಡುಪಿ:  ಸ್ಥಳೀಯ ಗ್ಯಾಂಗ್‍ಮನ್‍ನ್ನು ನೇಮಕಕ್ಕೆ ಆಗ್ರಹ : ಜಯಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ

Spread the love

ಉಡುಪಿ: ಮೆಸ್ಕಾಂ ಉಡುಪಿ ವಿಭಾಗದಲ್ಲಿ ಸ್ಥಳೀಯ ಗ್ಯಾಂಗ್‍ಮನ್‍ಗಳನ್ನು ಜೆಎಲ್‍ಎಂ (ಟ್ರೈನಿ) ಹುದ್ದೆಗೆ ನೇಮಕ ಮಾಡುವಂತೆ ಆಗ್ರಹಿಸಿ ಉಡುಪಿ ಮೆಸ್ಕಾಂ ಎದುರು ಜಯಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.

mescomprotest_jayakarnataka 03-09-2015 10-33-053 mescomprotest_jayakarnataka 03-09-2015 10-37-34

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಮೆಸ್ಕಾಂ ಉಡುಪಿ ವಿಭಾಗದಲ್ಲಿ ಗುತ್ತಿಗೆದಾರರ ಮೂಲಕ ಕೆಲಸ ನಿರ್ವಹಿಸುತ್ತಿರುವ ಸ್ಥಳೀಯ ಗ್ಯಾಂಗ್‍ಮನ್‍ಗಳನ್ನು, ಜೆಎಲ್‍ಎಂ (ಟ್ರೈನಿ) ಹುದ್ದೆಗೆ ಪರಿಗಣಿಸಿಲ್ಲ. 2,030 ಹುದ್ದೆಗಳಿಗೆ 9,400 ಜನರಿಗೆ ಸಂದರ್ಶನಕ್ಕೆ ಕಳುಹಿಸಲಾಗಿದ್ದು, ಇದರಲ್ಲಿ ಉಡುಪಿ ಮತ್ತು ದ.ಕ. ಜಿಲ್ಲೆಯವರು ಕೇವಲ 200 ಮಂದಿ ಮಾತ್ರ. ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಆಧಾರದಲ್ಲಿ ಸಂದರ್ಶನಕ್ಕೆ ಕಳುಹಿಸಲಾಗಿದ್ದು, ಅಂಕಪಟ್ಟಿಯಲ್ಲಿ ದೋಷವಿರುವ ಉತ್ತರ ಕರ್ನಾಟಕ ದವರನ್ನು ಸಂದರ್ಶನಕ್ಕೆ ಕರೆಯಲಾಗಿದೆ. ಇದರಿಂದ ಸ್ಥಳೀಯವಾಗಿ ಹಲವಾರು ವರ್ಷಗಳಿಂದ ಉಡುಪಿ ಮಂಗಳೂರಿನಲ್ಲಿ ಮೆಸ್ಕಾಂನಲ್ಲಿ ಕೆಲಸ ಮಾಡುತ್ತಿರುವವರಿಗೆ ಅನ್ಯಾಯವಾಗಿದೆ. ಆದ್ದರಿಂದ ಸ್ಥಳೀಯ ಗ್ಯಾಂಗ್‍ಮನ್‍ಗಳಿಗೆ ಅನುಕೂಲವಾಗುವಂತೆ ವಿದ್ಯಾರ್ಹತೆಯನ್ನು 7ನೇ ತರಗತಿ ಉತ್ತೀರ್ಣ 2 ವರ್ಷ ಗ್ಯಾಂಗ್‍ಮನ್ ಆಗಿ ಕೆಲಸನಿರ್ವಹಿಸಿರಬೇಕೆಂದು ಅರ್ಹತೆ  ಬದಲಾಯಿಸಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಜನನಿ ದಿವಾಕರ ಶೆಟ್ಟಿ, ಪದಾಧಿಕಾರಿಗಳಾದ ಬಿ. ಸುಧಾಕರ ರಾವ್, ಅಣ್ಣಪ್ಪ ಕುಲಾಲ್, ನಿತ್ಯಾನಂದ ಅಮೀನ್, ಕರುಣಾಕರ ಪೂಜಾರಿ, ಕರುಣಾಕರ ಮಾರ್ಪಳ್ಳಿ, ಎಸ್‍ಎಸ್ ತೋನ್ಸೆ, ಸತೀಶ್ ಶೆಟ್ಟಿ ಉಚ್ಜಿಲ, ಪರೀಕ್ಷಿತ್ ಶೆಟ್ಟಿ, ನಿರಂಜನ್ ಹೆಗ್ಡೆ ಉಡುಪಿ, ದಿನಕರ ಬಸ್ರೂರು, ನಂದಕುಮಾರ್, ರತ್ನಾಕರ ಹಾವಂಜೆ, ಸುರೇಂದ್ರ ಶೆಟ್ಟಿ, ಸುರೇಶ್ ಶೆಟ್ಟಿ, ಪ್ರದೀಪ್ ಶೆಟ್ಟಿ ಹೆಬ್ರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


Spread the love