ಉಡುಪಿ: ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲು
ಉಡುಪಿ: ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಕಾರ್ಕಳಕ್ಕೆ ತೆರಳಿದ ವ್ಯಕ್ತಿಯ ಮೇಲೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಂಕೂರು ನಿವಾಸಿ ವಿನಯ್ ಕುಮಾರ್ ಎಂಬವರು ಉತ್ತರ ಪ್ರದೇಶದಿಂದ ಉಡುಪಿಗೆ ಬಂದಿದ್ದು, ಜುಲೈ 1 ರಿಂದ 14 ರವರೆಗೆ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಅಲ್ಲಿ ಇರಬೇಕಾಗಿತ್ತು. ನಗರಸಭೆಯ ನೌಕರ ಸುದೀಪ್ ಶೆಟ್ಟಿ ಅವರು ವಿನಯ್ ಕುಮಾರ್ ಅವರ ಹೋಮ್ ಕ್ವಾರಂಟೈನ್ ಇರುವ ಕುರಿತು ಪರಿಶೀಲನೆ ಪ್ರಯುಕ್ತ ದೂರವಾಣಿ ಕರೆ ಮಾಡಿದಾಗ ಅವರು ಕಾರ್ಕಳದಲ್ಲಿ ಇದ್ದು ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿರುವುದ ಸಾಬಿತಾಗಿದೆ.
ವಿನಯ್ ರಾಜ್ ಅವರು ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿರುವ ಕುರಿತು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ಉಡುಪಿ ನಗರಸಭಾ ಕೋವಿಡ್ ಫ್ಲೈಯಿಂಗ್ ಸ್ಕ್ವ್ಯಾಡ್ ಅಧಿಕಾರಿ ಮೋಹನ್ ರಾಜು ಕೆ ಎಮ್ ಅವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದು ಅವರ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.