ಉಡುಪಿ: 14 ಭಿಕ್ಷಾಟನೆ ನಿರತ ಮಕ್ಕಳ ರಕ್ಷಣೆ
ಉಡುಪಿ: ಜಿಲ್ಲಾಡಳಿತ ಉಡುಪಿ ಜಿಲ್ಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಮಕ್ಕಳ ಸಹಾಯವಾಣಿ, ಜಿಲ್ಲಾ ನಾಗರಿಕ ಸೇವಾ ಸಮಿತಿ ಮತ್ತು ಸ್ಫೂರ್ತಿ ವಿಶ್ವಾಸದ ಮನೆ ಶಂಕರಪುರ ಇವರ ಜಂಟಿ ಕಾರ್ಯಚರಣೆಯಲ್ಲಿ ಮಣಿಪಾಲದ ಬಸ್ಸ್ಟಾಂಡ್, ಆದಿಉಡುಪಿ ಸಂತೆ ಮಾರ್ಕೆಟ್, ಸಿಟಿ ಬಸ್ಸ್ಟಾಂಡ್, ಸರ್ವಿಸ್ ಬಸ್ಸ್ಯಾಂಡ್, ಉದ್ಯಾವರದ ಚರ್ಚ್ ಆಸುಪಾಸು ಹಾಗೂ ಇನ್ನಿತರ ಪ್ರದೇಶಗಳಲ್ಲಿ ದಿಢೀರ್ ಕಾರ್ಯಚರಣೆ ನಡೆಸಿ ಒಟ್ಟು 14 ಭಿಕ್ಷಾಟನೆ ನಿರತ ಮಕ್ಕಳನ್ನು (ಹೆಣ್ಣು-10, ಗಂಡು-4) ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು. ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ 4 ಬಾಲಕಿಯರನ್ನು ಬಾಲಕಿಯರ ಬಾಲಮಂದಿರಕ್ಕೆ, 6 ಬಾಲಕಿಯರು ಮತ್ತು 4 ಬಾಲಕರನ್ನು ಸ್ಫೂರ್ತಿ ವಿಶ್ವಾಸದ ಮನೆ ಶಂಕರಪುರ ಸಂಸ್ಥೆಯಲ್ಲಿ ಪುರ್ನವಸತಿ ಕಲ್ಪಿಸಲಾಯಿತು.
ಕಾರ್ಯಚರಣೆಯಲ್ಲಿ ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀಕ್ಷಕ ದಯಾನಂದ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಸಾಮಾಜಿಕ ಕಾರ್ಯಕರ್ತರಾದ ಗ್ಲೀಷಾ ಮೊಂತೇರೊ, ಯೋಗೀಶ್, ಸಮಾಲೋಚಕಿ ಅಂಬಿಕ, ಔಟ್ರೀಚ್ ವರ್ಕರ್ ಸುನಂದ, ಸಂದೇಶ್, ಬಾಲ ಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ಪೂರ್ಣಿಮ, ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ನಾಗರಾಜ್, ನಗರ ಸಭೆಯ ಶ್ರೀಕಾಂತ್, ನಗರ ಠಾಣಾ ಪೊಲೀಸ್ ಸುಷ್ಮಾ, ಮಹಿಳಾ ಪೊಲೀಸ್ ಶಾಲಿನಿ, ಜಿಲ್ಲಾ ನಾಗರಿಕ ಸೇವಾ ಸಮಿತಿಯ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಮಕ್ಕಳ ಸಹಾಯವಾಣಿಯ ಕೇಂದ್ರ ಸಂಯೋಜಕಿ ಕಸ್ತೂರಿ, ಸದಸ್ಯರಾದ ತ್ರಿವೇಣಿ, ನೇತ್ರ, ಪ್ರಮೋದ್, ಜ್ಯೋತಿ ಭಾಗವಹಿಸಿದ್ದರು.