ಉಡುಪಿ:   60ರ  ಸಂಭ್ರಮಕ್ಕೆ 1000ಕ್ಕೂ ಮಿಕ್ಕಿ ರೋಗಿಗಳಿಗೆ ಹಾಗೂ 100 ಕ್ಕೂ ಅಧಿಕ ಸಂಸ್ಥೆಗಳಿಗೆ ನೆರವು ನೀಡಲು ಪಣ ತೊಟ್ಟ ಡಾ. ಜಿ ಶಂಕರ್

Spread the love

ಅವಿಭಜಿತ ದ.ಕ. ಜಿಲ್ಲೆಯ 1000ಕ್ಕೂ ಮಿಕ್ಕಿ ಕ್ಯಾನ್ಸರ್ ಮತ್ತು ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವ ಅಶಕ್ತ ಬಡ ರೋಗಿಗಳಿಗೆ ಮತ್ತು 100ಕ್ಕೂ ಮಿಕ್ಕಿ ಅನಾಥಾಶ್ರಮ, ವೃದ್ಧಾಶ್ರಮ ಮತ್ತು ವಿಶೇಷ ಮಕ್ಕಳ ಶಾಲೆಗಳಿಗೆ ಧನಸಹಾಯ.

ಉಡುಪಿ ಅಂಬಲಪಾಡಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‍ನ ಪ್ರವರ್ತಕರಾದ ಡಾ| ಜಿ. ಶಂಕರ್ ಅವರಿಗೆ ಇದೇ ಅಕ್ಟೋಬರ್ 5ರಂದು ‘60’ ತುಂಬಲಿದೆ.  ಈ ಶುಭ ಸಂದರ್ಭದಲ್ಲಿ ಅವರು ಹುಟ್ಟುಹಬ್ಬವನ್ನು ವಿಶಿಷ್ಠ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಬಯಸಿದ್ದಾರೆ.  ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ತೀವ್ರ ಸ್ವರೂಪದ ಕ್ಯಾನ್ಸರ್ ಮತ್ತು ಕಿಡ್ನಿ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವ ಕರ್ನಾಟಕದ ವಿವಿಧ ಜಿಲ್ಲೆಗಳ ಅಶಕ್ತ ಬಡರೋಗಿಗಳಿಗೆ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವೃದ್ಧಾಶ್ರಮ, ಅನಾಥಾಶ್ರಮ ಹಾಗೂ ವಿಶೇಷ ಮಕ್ಕಳ ಶಾಲೆಗಳಿಗೆ ಸಹಾಯಧನ ವಿತರಣಾ ಸಮಾರಂಭ ಅಕ್ಟೋಬರ್ 5 ರಂದು ಉಡುಪಿ ಅಂಬಲ್ಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ಪೂರ್ವಾಹ್ನ ಘಂಟೆ 10.30ಕ್ಕೆ ನಡೆಯಲಿದೆ.

194-001

ಸಮಾರಂಭವನ್ನು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಮಾನ್ಯ ಉಪಕುಲಪತಿಗಳಾದ ಡಾ| ಕೆ. ಎಸ್. ರವೀಂದ್ರನಾಥ್ ಉದ್ಘಾಟಿಸಲಿದ್ದಾರೆ.  ರಾಜ್ಯ ಕಾನೂನು ಆಯೋಗದ ಮಾನ್ಯ ಅಧ್ಯಕ್ಷರಾದ ಜಸ್ಟೀಸ್ ಶ್ರೀ ಎಸ್. ಆರ್. ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ.  ಎ.ವಿ. ಬಾಳಿಗಾ ಆಸ್ಪತ್ರೆ, ಉಡುಪಿ ಇದರ ನಿರ್ದೇಶಕರಾದ ಡಾ| ಪಿ. ವಿ. ಭಂಡಾರಿ ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.  ಫಾದರ್ ಮುಲ್ಲರ್ ಆಸ್ಪತ್ರೆ, ಮಂಗಳೂರು ಇದರ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಅಂಕೋಲಜಿ ವಿಭಾಗದ ಮುಖ್ಯಸ್ಥರಾದ ಡಾ| ರೋಹನ್‍ಚಂದ್ರ ಗಟ್ಟಿ, ಕೆ.ಎಂ.ಸಿ. ಮಣಿಪಾಲ ಆಸ್ಪತ್ರೆಯ ನೆಪ್ರಾಲಜಿ ವಿಭಾಗದ ಮುಖ್ಯಸ್ಥರಾದ ಡಾ| ರವೀಂದ್ರ ಪ್ರಭು, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ ಸದಾನಂದ ಬಳ್ಕೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಕೆ.ಎಂ.ಸಿ. ಮಣಿಪಾಲ ಆಸ್ಪತ್ರೆಯ 87 ಕ್ಯಾನ್ಸರ್, 41 ಕಿಡ್ನಿ, ವೆನ್‍ಲಾಕ್ ಆಸ್ಪತ್ರೆ, ಮಂಗಳೂರಿನ 83 ಕ್ಯಾನ್ಸರ್, 54 ಕಿಡ್ನಿ, ಫಾದರ್ ಮುಲ್ಲರ್ ಆಸ್ಪತ್ರೆ, ಮಂಗಳೂರು ಇವರ 65 ಕ್ಯಾನ್ಸರ್, 29 ಕಿಡ್ನಿ, ಕೆ.ಎಂ.ಸಿ. ಆಸ್ಪತ್ರೆ ಮಂಗಳೂರಿನ 248 ಕ್ಯಾನ್ಸರ್, 120 ಕಿಡ್ನಿ, ಎಸ್.ಸಿ.ಎಸ್. ಆಸ್ಪತ್ರೆ ಮಂಗಳೂರಿನ 3 ಕಿಡ್ನಿ, ಮಂಗಳಾ ಆಸ್ಪತ್ರೆ, ಮಂಗಳೂರಿನ 15 ಕಿಡ್ನಿ, ಸರಕಾರಿ ಆಸ್ಪತ್ರೆ ಉಡುಪಿ ಇಲ್ಲಿನ 20 ಕಿಡ್ನಿ, ಆದರ್ಶ ಆಸ್ಪತ್ರೆ ಉಡುಪಿ ಇಲ್ಲಿನ 7 ಕಿಡ್ನಿ, ಗಾಂಧಿ ಆಸ್ಪತ್ರೆ ಉಡುಪಿ ಇಲ್ಲಿನ 11 ಕಿಡ್ನಿ, ವಿನಯ ಆಸ್ಪತ್ರೆ ಕುಂದಾಪುರ ಇಲ್ಲಿನ 11 ಕಿಡ್ನಿ ಚಿನ್ಮಯಿ ಆಸ್ಪತ್ರೆ ಕುಂದಾಪುರ ಇಲ್ಲಿಯ 3 ಕಿಡ್ನಿ ರೋಗಿಗಳು ಹೀಗೆ ಒಟ್ಟು 1000 ಕ್ಕೂ ಮಿಕ್ಕಿ ಸಹಾಯಧನ ಸ್ವೀಕರಿಸಲಿದ್ದಾರೆ.

ಭಗಿನ ಸಮಾಜ, ಮಂಗಳೂರು, ಅಭಯ ಆಶ್ರಯ, ಮಂಗಳೂರು, ವಿಶ್ರಾಂತಿ ಧಾಮ ಮಣಿಪಾಲ, ಚೈತನ್ಯ ಕುಂದಾಪುರ, ಕರುಣಾಲಯ ಬ್ರಹ್ಮಾವರ, ಒಜೋನಮ್ ಸಂತೆಕಟ್ಟೆ, ಕಟಪಾಡಿಯ ವಿಶ್ವಾಸದ ಮನೆ, ನಮ್ಮ ಭೂಮಿ, ಕುಂದಾಪುರ, ಸೈಂಟ್ ಆ್ಯನ್ಸ್ ಹೋಮ್ ಫಾರ್ ಏಜ್ಡ್, ಆಶಾಜ್ಯೋತಿ ಮಂಗಳೂರು, ಚೇತನ ಸೇವಾ ಭಾರತಿ ಮಂಗಳೂರು, ಉಡುಪಿ ಸಾಸ್ತಾನದ ದ ಫ್ಯೂಚರ್ ಹೆಲ್ತ್ ಹೋಮ್ ಫಾರ್ ಏಜ್ಡ್ ಇವರೆಲ್ಲರೂ ಸಹಾಯಧನ ಸ್ವೀಕರಿಸಲಿದ್ದಾರೆ.

ವಿಶೇಷ ಮಕ್ಕಳ ಶಾಲೆಗಳಾದ ಲಯನ್ಸ್ ಸ್ಪಷಲ್ ಸ್ಕೂಲ್, ಸುರತ್ಕಲ್, ಸಾನಿಧ್ಯ ಮಂಗಳೂರು, ಎಂ.ವಿ.ಶೆಟ್ಟಿ ವಿಶೇಷ ಶಾಲೆ, ಮೂಡಬಿದ್ರಿಯ ಶ್ರೀಮತಿ ಮೋಹಿನಿ ಅಪ್ಪಾಜಿ ನಾಯಕ್ ಮೆಮೋರಿಯಲ್, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಬೆತೆನಿ ಶಾಲೆ, ಸೈಂಟ್ ಆ್ಯಗ್ನೇಸ್ ವಿಶೇಷ ಶಾಲೆ, ಮಂಗಳೂರು, ಸೈಂಟ್ ಮೇರೀಸ್ ವಿಶೇಷ ಶಾಲೆ, ಕಿನ್ನಿಗೋಳಿ, ಕ್ರಿಸ್ತರಾಜ, ವೇಣೂರು, ಚೇತನ, ಮಂಗಳೂರು, ಸುಳ್ಯದ ಸಂದೀಪ ವಿಶೇಷ ಶಾಲೆ, ಚೈತನ್ಯ ವಿಶೇಷ ಶಾಲೆ, ಕುಂದಾಪುರ, ಮಾನಸಜ್ಯೋತಿ ಕುಂದಾಪುರ, ನಾರಾಯಣ ವಿಶೇಷ ಶಾಲೆ, ಕುಂದಾಪುರ, ದೀನಾ ವಿಶೇಷ ಶಾಲೆ ಕುಂದಾಪುರ, ಮಾನಸ ಉಡುಪಿ, ಸ್ಪಂದನ ಉಡುಪಿ, ಆಶಾನಿಲಯ ಉಡುಪಿ, ಸಮೃದ್ಧಿ ಉಡುಪಿ, ವಾಗ್ಜೋತಿ ಅಂಪಾರು ಕುಂದಾಪುರ, ಪ್ರಜ್ಞಾ ಹೆಬ್ರಿ ಉಡುಪಿ, ಆಸರೆ ಮಣಿಪಾಲ ಹಾಗೂ ಸ್ನೇಹ ವಿಶೇಷ ಶಾಲೆ, ಭಟ್ಕಳ, ಉತ್ತರ ಕನ್ನಡ ಹೀಗೆ 100ಕ್ಕೂ ಮಿಕ್ಕಿ ಸಂಸ್ಥೆಗಳು ಸಹಾಯಧನ ಸ್ವೀಕರಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಜಿ. ಶಂಕರ್ ಸಂಸ್ಥೆಯಲ್ಲಿ ಅವಿರತವಾಗಿ ದುಡಿಯುತ್ತಿರುವ ಸಿಬ್ಬಂದಿಗಳಿಗೆ ಟ್ರಸ್ಟ್ ಪ್ರವರ್ತಕ ಜಿ. ಶಂಕರ್ ಗೌರವಿಸಲಿದ್ದಾರೆ.  ಟ್ರಸ್ಟ್ ವತಿಯಿಂದ ಕೂಪನ್ ಪಡೆದಿರುವ ಅಶಕ್ತ ರೋಗಿಗಳು ಅಥವಾ ಅವರ ಸಮೀಪದ ಬಂಧುಗಳು ಕೂಪನ್‍ನೊಂದಿಗೆ ಅಕ್ಟೋಬರ್ 5ರ ಬೆಳಿಗ್ಗೆ 9.30ಕ್ಕೆ ಶ್ಯಾಮಿಲಿ ಸಭಾಂಗಣದಲ್ಲಿ ಹಾಜರಿರಬೇಕೆಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.


Spread the love