Home Mangalorean News Kannada News ಉತ್ತಮ ಆರೋಗ್ಯಕ್ಕೆ ಸಮತೋಲಿತ ಆಹಾರ ಮುಖ್ಯ

ಉತ್ತಮ ಆರೋಗ್ಯಕ್ಕೆ ಸಮತೋಲಿತ ಆಹಾರ ಮುಖ್ಯ

Spread the love

ಉತ್ತಮ ಆರೋಗ್ಯಕ್ಕೆ ಸಮತೋಲಿತ ಆಹಾರ ಮುಖ್ಯ

ವಿದ್ಯಾಗಿರಿ: ಆರೋಗ್ಯಕರ ಜೀವನ ನಡೆಸುವಲ್ಲಿ ಸಮತೋಲಿತ ಆಹಾರದ ಪಾತ್ರ ತುಂಬಾ ಮಹತ್ವದ್ದು ಎಂದು ಇರಾನಿನ ಇಸ್ಲಾಮಿಕ್ ಅಜಾದೇ ಯೂನಿವರ್ಸಿಟಿಯ ಸಹಪ್ರಾಧ್ಯಪಕಿ ಸರಾ ಸರಾಫಿ ಝದೇಶ್ ಹೇಳಿದರು.

ಆಳ್ವಾಸ್ ಕಾಲೇಜಿನ ಪುಟ್ಟಣ್ಣ ಕಣಗಾಲ್ ವೇದಿಕೆಯಲ್ಲಿ ಫುಡ್ ಸೈನ್ಸ್ ಮತ್ತು ನ್ಯೂಟ್ರಿಷಿಯನ್ ಸ್ನಾತಕೋತ್ತರ ವಿಭಾಗದ ವತಿಯಿಂದ ಆಯೋಜಿಸಲಾದ ‘’ಕಂಪ್ಯೂಟರ್ ಅಪ್ಲಿಕೇಶನ್ ಇನ್ ಮೆಡಿಕಲ್ ನ್ಯೂಟ್ರಿಷಿಯನ್ ಥೆರಪಿ ಮತ್ತು ಲೈಫ್ ಸ್ಟೈಲ್ ಮ್ಯಾನೇಜ್‍ಮೆಂಟ್’’ ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಬದಲಾದ ಜೀವನ ಶೈಲಿಯಿಂದ ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ದಿನನಿತ್ಯ ದೈಹಿಕ ಚಟುವಟಿಕೆ, ಗುಣಮಟ್ಟದ ಆಹಾರ ಹಾಗೂ ಉತ್ತಮ ಜೀವನ ಶೈಲಿ ರೂಢಿಸಿಕೊಂಡಾಗ ಮಾತ್ರ ಒಬ್ಬ ಮನುಷ್ಯ ಆರೋಗ್ಯವಾಗಿರಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ನಮ್ಮ ಹಿರಿಯರ ಜೀವನ ಶೈಲಿ ಉತ್ತಮವಾಗಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ನಮ್ಮ ಯುವಜನತೆ ಪಾಸ್ಟಫುಡ್‍ಗಳ ಮೊರೆ ಹೋಗಿ ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಆರೋಗ್ಯಕರ ಆಹಾರ ಪದ್ಧತಿಗಳ ಬಗ್ಗೆ ತಿಳಿದುಕೊಂಡು ಅದನ್ನು ರೂಢಿಗೊಳಿಸುವುದು ಉತ್ತಮ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥೆ ಡಾ ಅರ್ಚನಾ ಪ್ರಭಾತ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಧೃತಿ ನಿರೂಪಿಸಿ, ವಂದನಾ ವಂದಿಸಿದರು.


Spread the love

Exit mobile version