ಉತ್ತರ ಕರ್ನಾಟಕದ ಕಾರ್ಮಿಕರಿಗೆ ಊರಿಗೆ ತೆರಳಲು ವ್ಯವಸ್ಥೆ  

Spread the love

ಉತ್ತರ ಕರ್ನಾಟಕದ ಕಾರ್ಮಿಕರಿಗೆ ಊರಿಗೆ ತೆರಳಲು ವ್ಯವಸ್ಥೆ  

ಮಂಗಳೂರು: ತಮ್ಮ ಹೊಟ್ಟೆಪಾಡಿಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಾರ್ಮಿಕ ವರ್ಗದ ಅನೇಕ ಜನರು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದ ಬಳಿ ತಂಗಿದ್ದರು. ಸದ್ಯ ರಾಜ್ಯ ಸರಕಾರ ಕೊಟ್ಟ ಅನುಮತಿ ಪ್ರಕಾರ ಜಿಲ್ಲಾ ಮತ್ತು ತಾಲೂಕು ಮಟ್ಟದ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಕಾರದಿಂದ ಇಂದು ಅವರೆಲ್ಲರನ್ನೂ ತಮ್ಮ ತಮ್ಮ ಊರಿಗೆ ವಾಪಸ್ಸು ಕಳಿಸುವ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ನಮ್ಮ ಜಿಲ್ಲೆಯ ಆರೋಗ್ಯ ಇಲಾಖೆಯಿಂದ ಅಲ್ಲಿನ ಎಲ್ಲರಿಗೂ ಮಲೇರಿಯಾ,ಡೆಂಗ್ಯೂ ಹಾಗೂ ಜ್ವರದ ಲಕ್ಷಣಗಳನ್ನು ಪರೀಕ್ಷೆ ಮಾಡಲಾಗಿದೆ. ಹೊರಡುವ ಸಂಧರ್ಭದಲ್ಲಿ ಸುಮಾರು 850 ಜನರಿಗೆ ನಮ್ಮ ಆತ್ಮೀಯರಾದ ವಿಠಲ್ ಕುಡ್ವ, ಮುರಳೀಧರ್ ನಾಯಕ್, ಗಿರೀಶ್,ಸುಭಾವ್ ಭಟ್ ಹಾಗೂ ಸಂಘ ಸಂಸ್ಥೆಗಳ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿದೆ.

ಶಾಸಕರ ಮನವಿಯ ಮೇರೆಗೆ ಕೇಳಿದ ಅರ್ಧ ಗಂಟೆಯ ಒಳಗಾಗಿ  ಕಲಾಂ ಭಾಯ್, ಶಿವ ಪ್ರಸಾದ್ ಪ್ರಭು, ಚೇತನ್ ಶೆಟ್ಟಿ ಇವರು ಬಸ್ ಪ್ರಯಾಣಿಕರಿಗೆ ಹಣ್ಣು, ಬಿಸ್ಕೇಟ್,ನೀರಿನ ಬಾಟಲಿ,ಸೋಪ್ ಮುಂತಾದವುಗಳನ್ನು ಒದಗಿಸಿದ್ದಾರೆ.


Spread the love