Home Mangalorean News Kannada News ಉತ್ತರ ಮುಂಬಯಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಉಡುಪಿ ಮೂಲದ ಎರ್ಮಾಳ್ ಹರೀಶ್ ಶೆಟ್ಟಿ ನೇಮಕ

ಉತ್ತರ ಮುಂಬಯಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಉಡುಪಿ ಮೂಲದ ಎರ್ಮಾಳ್ ಹರೀಶ್ ಶೆಟ್ಟಿ ನೇಮಕ

Spread the love

ಉತ್ತರ ಮುಂಬಯಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಉಡುಪಿ ಮೂಲದ ಎರ್ಮಾಳ್ ಹರೀಶ್ ಶೆಟ್ಟಿ ನೇಮಕ

ಮುಂಬಯಿ: ಮಹಾನಗರದ ನಾಮಾಂಕಿತ ಸಮಾಜ ಸೇವಕ, ಅಪ್ರತಿಮ ಸಂಘಟಕ ಎರ್ಮಾಳ್ ಹರೀಶ್ ಶೆಟ್ಟಿ ಇವರು ಉತ್ತರ ಮುಂಬಯಿ (ಬೋರಿವಿಲಿ) ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕ ಗೊಂಡಿದ್ದಾರೆ.

ಮಹಾನಗರದಾದ್ಯಂತ ಎರ್ಮಾಳ್ ಹರೀಶ್ ಎಂದೇ ಪರಿಚಿತರಾದ, ಬಂಟರ ಸಂಘ ಮುಂಬಯಿ ಇದರ ಶೈಕ್ಷಣಿಕ ನೂತನ ಯೋಜನಾ ಸಮಿತಿ ಉಪಾಧ್ಯಕ್ಷರಾಗಿದ್ದು ಈ ಹಿಂದೆ ಇಂಡಿಯಾನ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಅಸೋಸಿಯೇಶನ್ (ಆಹಾರ್) ಇದರ ಉಪಾಧ್ಯಕ್ಷರಾಗಿದ್ದು, ತಮ್ಮ ಹಲವಾರು ದಶಕಗಳ ಅನುಭವ, ಅವಿರತ ಶ್ರಮದ ಮೂಲಕ ಹೋಟೇಲು ಉದ್ಯಮದಲ್ಲಿ  ಪಳಗಿರುವರು. ಲಿಂಕ್ ವೀವ್ ಫೈನ್ ಡೈನ್ ಕಿಚನ್ ಬೋರಿವಿಲಿ ಹೆಸರಾಂತ ಹೋಟೇಲು ಸಂಸ್ಥೆಗಳ ಕ್ರೀಷ್ವಿ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷರಾಗಿ  ಮಲಾಡ್ ಇಲ್ಲಿನ ಮಡಾೈಲ್ಯಾಂಡ್‍ನಲ್ಲೂ ಮಂತ್ರ ರೆಸಿಡೆನ್ಸಿ ಹೊಟೇಲು ಹೊಂದಿರುವರು. ಸಮಾಜ ಸೇವೆಯಲ್ಲಿ ಸದಾ ಮುಂಚೂಣಿ ಯ ದಕ್ಷ ಸಮಾಜ ಸೇವಕರೆಣಿಸಿದ್ದಾರೆ. ಸೇವೆ ಮತ್ತು ಉದ್ಯಮಗಳಲ್ಲಿ ಸದಾ ಕಾರ್ಯಶೀಲರಾಗಿರುವ ಇವರು ತೆರೆಯ ಮರೆಯಲ್ಲೇ ಸೇವಾ ನಿರತರಾಗಿದ್ದಾರೆ.

ಮುಂಬಯಿನಲ್ಲಿ ಉದ್ಯಮದ ಜೊತೆಜೊತೆಗೆ ವಾರ್ಷಿಕವಾಗಿ ತನ್ನ ಹುಟ್ಟೂರು ಉಡುಪಿ ಜಿಲ್ಲೆಯ ಎರ್ಮಾಳ್ ಇಲ್ಲಿನ ಅಂಬೋಡಿ ಕಲಾ ನಿವಾಸಿ ಆಗಿದ್ದು ತನ್ನ ಇಲ್ಲಿನ 5 ಎಕರೆಗೂ ಮಿಕ್ಕಿದ ಕೃಷಿ ಜಮೀನಿನಲ್ಲಿ ವಾರ್ಷಿಕವಾಗಿ ಭತ್ತ ಬೆಳೆಸಿಯೂ ಮಣ್ಣಿನಮಗ ಎಣಿಸಿಕೊಂಡಿದ್ದಾರೆ.

ಕೊರೋನಾ ನಿಮಿತ್ತ ಕಳೆದ ಸುಮಾರು 50 ದಿನಗಳಿಂದ ಸಂಪೂರ್ಣವಾಗಿ ನಿಷೇಧಿಸಲ್ಪಟ್ಟ ಮುಂಬಯಿನಲ್ಲಿ ಹಗಲುರಾತ್ರಿ ಒಂದಾಗಿಸಿ ಶ್ರಮಿಸುತ್ತಾ ದಿನಾ ಸಾವಿರಾರು ಜನರಿಗೆ ಊಟೋಪಚಾರ, ಹಣ್ಣುಹಂಪಲು, ನೀರು, ವಾಹಗಳ ವ್ಯವಸ್ಥೆ, ಇದೀಗ ತಮ್ಮ ಅವಿರತ ಶ್ರಮದಿಂದ ಸಾರ್ವಜನಿಕವಾಗಿ ಮಂಗಳೂರು ಬಸ್ ಪ್ರಯಾಣಕ್ಕೆ ಕಾರಣಕರ್ತರಾಗಿ ಭಾರೀ ಪ್ರಶಂಸೆಗೆ ಪಾತ್ರರಾದ ಕೊರೋನಾ ವಾರಿಯರ್ಸ್ ಎಂದೆಣಿಸಿದ್ದಾರೆ.


Spread the love

Exit mobile version