Home Mangalorean News Kannada News ಉದ್ಯಾವರದಲ್ಲಿ ನ. 19 ರಂದು ಏಳನೇ ವರ್ಷದ ಯು.ಎಫ್.ಸಿ ಮಕ್ಕಳ ಹಬ್ಬ -2016

ಉದ್ಯಾವರದಲ್ಲಿ ನ. 19 ರಂದು ಏಳನೇ ವರ್ಷದ ಯು.ಎಫ್.ಸಿ ಮಕ್ಕಳ ಹಬ್ಬ -2016

Spread the love

ಉದ್ಯಾವರದಲ್ಲಿ ನ. 19 ರಂದು ಏಳನೇ ವರ್ಷದ ಯು.ಎಫ್.ಸಿ ಮಕ್ಕಳ ಹಬ್ಬ -2016

ಉಡುಪಿ: ಸೇವಾ ಮತ್ತು ಸಾಂಸ್ಕತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಪಂಡಿತ್ ಜವಾಹರ್ ಲಾಲ್ ನೆಹ್ರೂರವರ ಜನ್ಮ ದಿನ ಅಂಗವಾಗಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಏಳನೇ ವರ್ಷದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ ಸ್ಪರ್ಧೆ “ ಯು. ಎಫ್.ಸಿ ಮಕ್ಕಳ ಹಬ್ಬ – 2016” ತಾ.19.11.2016 ಶನಿವಾರ ಬೆಳಿಗ್ಗೆ ಗಂಟೆ 9.30- ಮಧ್ಯಾಹ್ನ 4.30 ತನಕ ಉದ್ಯಾವರ ಬಿಲ್ಲವ ಮಹಾಜನ ಸಂಘದ ಶ್ರೀ ವಿಠೋಬ ರುಕುಮಾಯಿ ನಾರಾಯಣಗುರು ಮಂದಿರದಲ್ಲಿ ಜರಗಲಿದೆ.

ಬೆಳಿಗ್ಗೆ ಗಂಟೆ 9.30 ಕ್ಕೆ ಮಕ್ಕಳ ಹಬ್ಬವನ್ನು ಝೀಟಿವಿ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಮತ್ತು ಕಲರ್ಸ್ ಕನ್ನಡ ಡ್ಯಾನ್ಸಿಂಗ್ ಸ್ಟಾರ್ ಪ್ರತಿಭೆ, ತುಳುವ ಸಿರಿ ಪ್ರಶಸ್ತಿ ಪುರಸ್ಕøತೆ ಕು| ಅದ್ವಿಕಾ ಶೆಟ್ಟಿ ಸುರತ್ಕಲ್ ಇವರು ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವರೂ, ಶಾಸಕರೂ ಆದ ವಿನಯ ಕುಮಾರ್ ಸೊರಕೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿಗಳಾದ ಶ್ರೀಮತಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಡುಪಿ ತುಳು ಕೂಟದ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಗಂಧಿ ಶೇಖರ್ ಭಾಗವಹಿಸಲಿದ್ದಾರೆ.

ಸಂಜೆ ಗಂಟೆ 4.00 ಕ್ಕೆ ಜರಗುವ ಮಕ್ಕಳ ಹಬ್ಬದ ಸಮಾರೋಪ ಸಮಾರಂಭದ ಆದ್ಯಕ್ಷತೆಯನ್ನು ವಿದ್ಯಾಂಗ ಉಪ ನಿರ್ದೇಶಕರಾದ ದಿವಾಕರ ಶೆಟ್ಟಿ ಎಚ್, ವಹಿಸಲಿದ್ದಾರೆ, ಸಮಾರೋಪ ಭಾಷಣವನ್ನು ಖ್ಯಾತ ಭರತ ನಾಟ್ಯ ತಜ್ಞ, ರಂಗಕರ್ಮಿ ಮಂಜುಳಾ ಸುಬ್ರಮಹ್ಮಣ್ಯ ಮಾಡಲಿರುವರು, ಮುಖ್ಯ ಅತಿಥಿಗಳಾಗಿ ಉಡುಪಿ ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷರಾದ ಬಿ ನರಸಿಂಹಮೂರ್ತಿ, ಉದ್ಯಾವರ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಮಾನಂದ ಪುರಾಣಿಕ್, ಉಡುಪಿ- ಇಂದ್ರಾಳಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಮಹಮ್ಮದ್ ಮೌಲ, ಉದ್ಯಾವರ ಗ್ರಾಮ ಪಂಚಾಯತ್ ಉಪಾದ್ಯಕ್ಷರಾದ ರಿಯಾಝ್ ಪಳ್ಳಿ ಭಾಗವಹಿಸಲಿರುವರು. ಉದ್ಘಾಟನಾ ಸಮಾರಂಭದ ಮುನ್ನ ಮೇಲ್ಪೇಟೆ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಿಂದ ಸಮಾರಂಭದ ಸ್ಥಳಕ್ಕೆ ಮಕ್ಕಳ ವರ್ಣರಂಜಿತ ಮೆರವಣಿಗೆ ಜರಗಲಿದೆ. ಜಿಲ್ಲೆಯ ಮಕ್ಕಳ ನೃತ್ಯ ಪ್ರತಿಭಾನವರಣಕ್ಕಾಗಿ ಹಮ್ಮಿ ಕೊಂಡ ಈ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಆಸಕ್ತರು ಹೆಚ್ಚಿನ ಸಂಖ್ಯಯಲ್ಲಿ ಭಾಗವಹಿಸ ಬೇಕೆಂದು ಉದ್ಯಾವರ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾದ ಯು. ಆರ್. ಚಂದ್ರ ಶೇಖರ್ ಮತ್ತು ಪ್ರಧಾನ ಕಾರ್ಯದರ್ಶಿ ತಿಲಕ್ ರಾಜ್ ಸಾಲ್ಯಾನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love

Exit mobile version