Home Mangalorean News Kannada News ಉದ್ಯಾವರದಲ್ಲಿ ಫಿಶ್ ಮಿಲ್ ಆರಂಭಕ್ಕೆ ನನ್ನ ವಿರೋಧವಿದೆ ; ಜಿಪಂ ಅಧ್ಯಕ್ಷ ದಿನಕರ ಬಾಬು ಸ್ಪಷ್ಟನೆ

ಉದ್ಯಾವರದಲ್ಲಿ ಫಿಶ್ ಮಿಲ್ ಆರಂಭಕ್ಕೆ ನನ್ನ ವಿರೋಧವಿದೆ ; ಜಿಪಂ ಅಧ್ಯಕ್ಷ ದಿನಕರ ಬಾಬು ಸ್ಪಷ್ಟನೆ

Spread the love

ಉದ್ಯಾವರದಲ್ಲಿ ಫಿಶ್ ಮಿಲ್ ಆರಂಭಕ್ಕೆ ನನ್ನ ವಿರೋಧವಿದೆ ; ಜಿಪಂ ಅಧ್ಯಕ್ಷ ದಿನಕರ ಬಾಬು ಸ್ಪಷ್ಟನೆ

ಉಡುಪಿ: ಉದ್ಯಾವರದಲ್ಲಿ ಫಿಶ್ ಮಿಲ್ ಸ್ಥಾಪನೆ ಉದ್ದೇಶದಿಂದ ಕೈಗಾರಿಕಾ ವಲಯ ಭೂಪರಿವರ್ತನೆಗೆ ನಿರಾಪೇಕ್ಷಣಾ ಪತ್ರ ನೀಡಿದ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ವಿರುದ್ದ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಶ್ರಯದಲ್ಲಿ ನಡೆದ ಪ್ರತಿಭಟನೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು ಸ್ಪಷ್ಟನೆ ನೀಡಿದ್ದಾರೆ.

ಈ ಹಿಂದೆ ಫಿಶ್ ಮಿಲ್ ಹೋರಾಟದಲ್ಲಿ ನಾನೂ ಕೂಡ ಭಾಗಿಯಾಗಿದ್ದೆ. ಪ್ರಸ್ತುತ ಫಿಶ್ ಮಿಲ್ ಗೆ ಪರವಾನಗಿ ನೀಡಿಲ್ಲ, ಕೆಲವೊಂದು ವರ್ಗದವರ ಬೇಡಿಕೆಗೆ ಸ್ಪಂದಿಸಿ ಫಿಶ್ ಮಿಲ್ ಹೊರತುಪಡಿಸಿ ಕೈಗಾರಿಕಾ ವಲಯಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಈ ಭಾಗದಲ್ಲಿ ಫಿಶ್ ಮಿಲ್ ಆರಂಭಕ್ಕೆ ನನ್ನ ವಿರೋಧವಿದೆ. ನಾನು ಇರುವವರೆಗೂ ಫಿಶ್ ಮಿಲ್ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅವರು ಮಾಧ್ಯಮ ಪ್ರಕಟಣೆ ನೀಡಿದ್ದಾರೆ.


Spread the love

Exit mobile version