ಉದ್ಯೋಗಿಗಳಿಗೆ ದಕ- ಉಡುಪಿ ಜಿಲ್ಲೆಯ ನಡುವೆ ಒಡಾಡಕ್ಕೆ ಪಾಸ್ ಅಗತ್ಯವಿಲ್ಲ
ಮಂಗಳೂರು/ಉಡುಪಿ: ಪ್ರಸ್ತುತ ಜಾರಿಯಲ್ಲಿರುವ ಲಾಕ್ಡೌನ್ ಅವಧಿಯಲ್ಲಿ ಸರ್ಕಾರ ಅನುಮತಿಸಲಾದ ಚಟುವಟಿಕೆಗೆ ದಕ್ಷಿಣಕನ್ನಡ ಉಡುಪಿ ಜಿಲ್ಲೆಯ ನಡುವೆ ಅಂತರ್ ಜಿಲ್ಲಾ ಪಾಸ್ ನ ಅವಶ್ಯಕತೆ ಇಲ್ಲ ಬದಲಾಗಿ ಕೆಲಸ ಮಾಡುತ್ತಿರುವ ಸಂಸ್ಥೆಯ ಗುರುತಿನ ಚೀಟಿ ಇದ್ದರೆ ಸಾಕು ಎಂದು ರಾಜ್ಯ ಸರಕಾರ ಸೋಮವಾರ ಆದೇಶ ನೀಡಿದೆ.
ಈ ದಿನಗಳಲ್ಲಿ ಹಗಲಿನ ವೇಳೆ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಚಲಿಸುವ ಉದ್ದೇಶದಿಂದ ಒಂದೇ ಘಟಕವಾಗಿ ಪರಿಗಣಿಸಲಾಗುವುದು. ವ್ಯಕ್ತಿಗಳು ಕೆಲಸ ಮಾಡುತ್ತಿರುವ ಕಂಪನಿ, ಸಂಸ್ಥೆಗಳಿಂದ ನೀಡಲಾಗುವ ಪತ್ರದ ಮೇರೆಗೆ ಮತ್ತು ಕಂಪನಿ, ಸಂಸ್ಥೆಯ ಅಧಿಕೃತ ಗುರುತಿನ ಚೀಟಿಯೊಂದಿಗೆ ಮಾತ್ರ ಚಲನವಲನಗಳಿಗೆ ಅನುಮತಿಸಿದೆ. ಆದ್ದರಿಂದ ಈ ಜಿಲ್ಲೆಗಳಲ್ಲಿ ಚಲನೆಗೆ ಬೇರೆ ಯಾವುದೇ ಅಂತರ್ ಜಿಲ್ಲಾ ಪಾಸ್ಗಳ ಅವಶ್ಯಕತೆ ಇರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳನ್ನು ಒಂದು ಘಟಕವಾಗಿ ಪರಿಗಣಿಸಬೇಕು ಮತ್ತು ಅದೇ ರೀತಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಂದು ಘಟಕವಾಗಿ ಪರಿಗಣಿಸಿ, ಹಗಲಿನ ವೇಳೆಯಲ್ಲಿ ಬೆಳಿಗ್ಗೆ 7ರಿಂದ ಸಂಜೆ 7 ರವರೆಗೆ ಚಲಿಸುವ ಉದ್ದೇಶದಿಂದ ಒಂದೇ ಘಟಕವಾಗಿ ಪರಿಗಣಿಸಲಾಗುವುದು. ವ್ಯಕ್ತಿಗಳು ಕೆಲಸ ಮಾಡುತ್ತಿರುವ ಕಂಪನಿ / ಸಂಸ್ಯೆಗಳಿಂದ ನೀಡಲಾಗುವ ಪತ್ರದ ಮೇಲೆ ಮತ್ತು ಕಂಪನಿ/ ಸಂಸ್ಥೆಯ ಅಧಿಕೃತ ಗುರುತಿನ ಚೀಟಿಯೊಂದಿಗೆ ಮಾತ್ರ ಚಲನವಲನಗಳಿಗೆ ಅನುಮತಿಸಿದೆ. ಆದ್ದರಿಂದ, ಈ ಜಿಲ್ಲೆಗಳಲ್ಲಿ ಚಲನೆಗೆ ಬೇರೆ ಯಾವುದೇ ಅಂತರ್ ಜಿಲ್ಲಾ ಪಾಸ್ ಗಳ ಅವಶ್ಯಕತೆ ಇರುವುದಿಲ್ಲ. ಆದರೆ, ಇತರೆ ಜಿಲ್ಲೆಗಳಿಗೆ ಅನುಮತಿಸಲಾದ ಚಟುವಟಿಕೆಗಳಿಗೆ ಅಂತರ ಜಿಲ್ಲೆಗಳ ಸಂಚಾರಕ್ಕೆ ಪಾಸ್ ಅಗತ್ಯವಿರುತ್ತದೆ ಎಂದು ತಿಳಿಸಲಾಗಿದೆ.