ಉನ್ನಿಕೃಷ್ಣನ್ ಕೊಲೆ ಇನ್ನೋರ್ವ ಆರೋಪಿಯ ಬಂಧನ

Spread the love

ಉನ್ನಿಕೃಷ್ಣನ್ ಕೊಲೆ ಇನ್ನೋರ್ವ ಆರೋಪಿಯ ಬಂಧನ

ಮಂಗಳೂರು: ಕೇರಳ ನಿವಾಸಿ ಉನ್ನಿಕೃಷ್ಣನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿ್ದ್ದಾರೆ.

ಬಂಧಿತನ್ನನ್ನು ಕೇರಳ ಪರಂಬೂರು ನಿವಾಸಿ ಅನ್ಸಾರ್ @ಅನಾಸ್ ಪಿ ಕೆ (34) ಎಂದು ಗುರುತಿಸಲಾಗಿದೆ.

ದಿನಾಂಕ: 03-09-2018 ರಂದು ಉಪ್ಪಿನಂಗಡಿ ಪೊಲೀಸ್‌ ಠಾಣಾ ಸರಹದ್ದಿನ ಕುಪ್ಪೆಟ್ಟಿ ಹೊಳೆಯ ನೀರಿನಲ್ಲಿ ಒಂದು ಗಂಡಸಿನ ಮೃತದೇಹ ಇದ್ದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣದ ಬಗ್ಗೆ ಪ್ರಥಮ ವರ್ತಮಾನ ವರದಿ ದಾಖಲಾಗಿದ್ದು, ತನಿಖೆಯ ಬಳಿಕ ಮೃತಪಟ್ಟ ವ್ಯಕ್ತಿಯು ಕೇರಳ ರಾಜ್ಯದ ಎರ್ನಾಕುಳಮ್‌ ಜಿಲ್ಲೆಯ ಕುನ್ನತ್ತನಾಡು ತಾಲೂಕಿನ ಅರೆಕ್ಕಿಪ್ಪಾಡಿ ನಿವಾಸಿ ಉನ್ನಿಕೃಷ್ಣನ್‌ ಎಂಬಾತನೆಂದು ತಿಳಿದುಬಂದು ಈತನ ಮರಣೋತ್ತರ ಪರೀಕ್ಷೆಯ ವೇಳೆ ಮೃತ ಶರೀರದಲ್ಲಿ ಆಗಿದ್ದ ಗಾಯಗಳು ಹಾಗೂ ಮೃತ ವ್ಯಕ್ತಿಯ ಸಹೋದರನ ಮಗ ಇದೊಂದು ವ್ಯವಸ್ಥಿತ ಕೊಲೆ ಎಂದು ದೂರು ನೀಡಿದ್ದರಿಂದ ದಿನಾಂಕ; 04/09/2018ರಂದು ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಅ.ಕ್ರ ನಂಬ್ರ ;259/18 ಕಲಂ;302,201,120(ಬಿ) ಐಪಿಸಿಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಈ ಪ್ರಕರಣದಲ್ಲಿ ಕೊಲೆ ನಡೆಸಿದ ಪ್ರಮುಖ ಆರೋಪಿಗಳಾದ 1)  ಜೀತು ಸಾಜಿ ಪ್ರಾಯ 23 ವರ್ಷ, ತಂದೆ; ಸಾಜಿ ವಾಸ: ಎಲಿಯಟೈಲ್  ಹೌಸ್‌ ಪತ್ತೀತಾಯ ಮೊಲಂದರ್ತೀ  ಪಲ್ಲಿತ್ತಾಯ ತಾಲೂಕು , ಎರ್ನಾಕುಲಂ ಜಿಲ್ಲೆ, ಕೇರಳ, 2) ಸುಹೈಲ್‌ ನಝರ್‌, ಪ್ರಾಯ 22 ವರ್ಷ, ತಂದೆ:  ಅಬ್ದುಲ್‌ ನಾಸೀರ್‌  ವಾಸ: ಕುಂಗತ್ತಿ ಪರಂಬಿಲ್‌ , ಚುರ್‌ರ್ನಿಕೆರೆ ಗ್ರಾಮ ತಾಯಕಟ್ಟಕೆರೆ ತಾಲೂಕು ಅಲುವಾ ಎರ್ನಾಕುಳ  ಜಿಲ್ಲೆ, ಕೇರಳ 3] ಮಹಮ್ಮದ್ ಶಮ್ನಾಝ ಪ್ರಾಯ 22 ವರ್ಷ ವಾಸ:ಮೊಯಿದೀನ್ ಕುಟ್ಟಿ ವಾಸ:ಕೊಕ್ರಟಿಲ್ ಮನೆ,  ಚುಂಡ ಕಾಡು  ಕಾವುಶ್ಯೇರಿ ಅಂಚೆ ಮತ್ತು ತಾಲೂಕು ಅಲೂತ್ತೂರು ತಾಲೂಕು ಪಾಲಕ್ಕಾಡು ಜಿಲ್ಲೆ  ಕೇರಳ  ರಾಜ್ಯ 4] ಔರಂಗಜೀಬ್  @  ನೌಫಲ್ @ ಇಕ್ಯಾಕ್ @ .ನೌಫ್ಲಿಕ್   ಪ್ರಾಯ  37 ವರ್ಷ   ತಂದೆ:  ದಿ| ಸಿದ್ದೀಕ್  ವಾಸ: ಕೊಟಕ್ಕಿದತ್ ಮನೆ, ತಾಯಿಕಾಟಕೆರೆ ಅಂಚೆ, ಆಲುವಾ  ತಾಲೂಕು ಎರ್ನಾಕುಲಂ ಜಿಲ್ಲೆ ಕೇರಳ ರಾಜ್ಯ ಎಂಬವರುಗಳನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,  ನ್ಯಾಯಾಂಗ ಬಂಧನದಲ್ಲಿರತ್ತಾರೆ.

ಪ್ರಕರಣದ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಬಗ್ಗೆ ಪೊಲೀಸ್ ಕಸ್ಟಡಿ ಪಡೆದು, ವಿಚಾರಣೆ ನಡೆಸಲಾಗಿದ್ದು, ಈ ಸಮಯ ಸದ್ರಿ  ಆರೋಪಿಗಳು ಈ ಕೃತ್ಯವನ್ನು ಕೇರಳದ ಕುಖ್ಯಾತ ರೌಡಿ ಆಸಾಮಿ ಅನ್ಸಾರ್ @ ಅನಾಸ್ ಪಿ.ಕೆ ಎಂಬಾತನು ಕೊಲೆಗೆ ಒಳಸಂಚು ನಡೆಸಿ, ಸದ್ರಿಯಾತನ ಸಹಕಾರದಿಂದ ನಡೆಸಿರುವುದಾಗಿ ವಿಚಾರಣೆ ಸಮಯ ತಿಳಿಸಿದ್ದರಿಂದ, ಆರೋಫಿ ಅನ್ಸಾರ್ @ ಅನಾಸ್  ,ಪಿ.ಕೆ , ಪ್ರಾಯ: 34 ವರ್ಷ ,ತಂದೆ:  ಕುಂಞ ಮಹಮ್ಮದ್ವಾಸ: ಪುತ್ತನ್ ಪುರಂ ಮನೆ, ವಂಗೂಲ  ಗ್ರಾಮ. ಮುಡಿಕಲ್ ಅಂಚೆ,  ಪೆರಂಬವೂರು  ತಾಲೂಕು. ಎರ್ನಾಕುಲಂ  ಜಿಲ್ಲೆ, ಕೇರಳ ರಾಜ್ಯ ಎಂಬಾತನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಸದರಿಯಾತನ ವಿರುದ್ದ ಕೇರಳ ರಾಜ್ಯದ ತಿರುವನಂತಪುರದ ವೆಲಿಯೂರು ಪೊಲೀಸ್ ಠಾಣೆಯಲ್ಲಿ 01 ಪ್ರಕರಣ, ಪುರುತ್ತಪುಡಿ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ, ಎಡತ್ತಲ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ, ಪೆರಂಬೂರು ಪೊಲೀಸ್ ಠಾಣೆಯಲ್ಲಿ 06 ಪ್ರಕರಣಗಳಿದ್ದು, ಇದರಲ್ಲಿ ಕೊಲೆಗೆ ಯತ್ನ, ಹಲ್ಲೆ, ಗುಂಪುಗಾರಿಕೆ, ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿರುತ್ತದೆ

ಸದ್ರಿ ಆರೋಪಿ ಪತ್ತೆಯ ಕಾರ್ಯಾಚರಣೆಯಲ್ಲಿ ದ.ಕ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಡಾ| ರವಿಕಾಂತೇಗೌಡ ಐ.ಪಿ.ಎಸ್‌ ಮತ್ತು ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಶ್ರೀ ಸಜಿತ್‌ ವಿ,ಜೆ ರವರ ನಿರ್ದೇಶನದಂತೆ, ತನಿಖಾಧಿಕಾರಿಯಾದ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಶ್ರೀನಿವಾಸ್ ಬಿ ಎಸ್‌‌ ರವರುಮತ್ತು  ಉಪ್ಪಿಂಗಡಿ ಪೊಲೀಸ್ ಠಾಣಾ  ಪಿಎಸ್‌‌ಐ ನಂದ ಕುಮಾರ್ ಎಂ ಎಂ ಹಾಗೂ ಸಿಬ್ಬಂಧಿಗಳಾದ ಎಎಸ್‌‌‌ಐ ಶಿವಪ್ಪ ಪೂಜಾರಿ, ಹರೀಶ್ಚಂದ್ರ, ಬಾಲಕೃಷ್ಣ ,ಚೋಮ ಪಿ, ಬಾಲಕೃಷ್ಣ, ಶಿವರಾಮ್‌, ದರ್ಣಪ್ಪ, ಅಬ್ದುಲ್‌ ಸಲೀಮ್‌, ಮತ್ತು ಜಗದೀಶ್‌, ಮನೋಹರ ಪಿ.ಸಿ, ಪ್ರತಾಪ್‌, ಇರ್ಷಾದ್‌‌  ಹಾಗೂ ನಾರಾಯಣ ಗೌಡ ರವರು ಭಾಗವಹಿಸಿರುತ್ತಾರೆ.


Spread the love