Home Mangalorean News Kannada News ಉಪಚುನಾವಣೆಯಲ್ಲಿ ಗೆಲುವು: ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಉಪಚುನಾವಣೆಯಲ್ಲಿ ಗೆಲುವು: ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

Spread the love
RedditLinkedinYoutubeEmailFacebook MessengerTelegramWhatsapp

ಉಪಚುನಾವಣೆಯಲ್ಲಿ ಗೆಲುವು: ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಮಂಗಳೂರು: ರಾಜ್ಯದ ಶಿಗ್ಗಾಂವಿ, ಚನ್ನಪಟ್ಟಣ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ಸಂದರ್ಭ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಪದ್ಮರಾಜ್.ಆರ್ ಪೂಜಾರಿ, ಕಾಂಗ್ರೆಸ್ ಧುರೀಣರಾದ ಹೇಮಂತ್ ಗರೋಡಿ, ಟಿ.ಕೆ.ಸುಧೀರ್, ಶಬೀರ್ ಸಿದ್ದಕಟ್ಟೆ, ನಝೀರ್ ಬಜಾಲ್, ಹಬೀಬ್ ಕಣ್ಣೂರು, ಜೀತೇಂದ್ರ ಸುವರ್ಣ, ಇಸ್ಮಾಯೀಲ್ ತಲಪಾಡಿ, ಯೋಗೀಶ್ ಕುಮಾರ್, ರಮಾನಂದ ಪೂಜಾರಿ, ಸೌಹಾನ್ ಎಸ್.ಕೆ, ಸುನೀಲ್ ಬಜಿಲಕೇರಿ, ಸುಹಾನ್ ಆಳ್ವ, ಸಲೀಂ ಪಾಂಡೇಶ್ವರ, ದುರ್ಗ ಪ್ರಸಾದ್, ಶಾಂತಲಾ ಗಟ್ಟಿ, ಶಾರಿಕಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version