ಉಪ್ಪಿನಂಗಡಿ ಕೊಲೆ ಪ್ರಕರಣದ ಆರೋಪಿಗಳ ಬಂಧನ

Spread the love

ಉಪ್ಪಿನಂಗಡಿ ಕೊಲೆ ಪ್ರಕರಣದ ಆರೋಪಿಗಳ ಬಂಧನ

ಮಂಗಳೂರು: ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಕೇರಳ ರಾಜ್ಯದ ಎರ್ನಾಕುಳಮ್ ಜಿಲ್ಲೆಯ ಕುನ್ನತ್ತನಾಡು ತಾಲೂಕಿನ ಅರೆಕ್ಕಿಪ್ಪಾಡಿ ನಿವಾಸಿ ಉನ್ನಿಕೃಷ್ಣನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕೇರಳ ಎರ್ನಾಕುಲಮ್ ನಿವಾಸಿ ಔರಂಗಝೀಬ್ (37) ಮತ್ತು ಪಾಲಕ್ಕಾಡು ನಿವಾಸಿ ಮಹಮ್ಮದ್ ಶಮನಾಝ್ (23) ಎಂದು ಗುರುತಿಸಲಾಗಿದೆ

ದಿನಾಂಕ: 03-09-2018 ರಂದು ಉಪ್ಪಿನಂಗಡಿ ಪೊಲೀಸ್ ಠಾಣಾ ಸರಹದ್ದಿನ ಕುಪ್ಪೆಟ್ಟಿ ಹೊಳೆಯ ನೀರಿನಲ್ಲಿ ಒಂದು ಗಂಡಸಿನ ಮೃತದೇಹ ಇದ್ದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣದ ಬಗ್ಗೆ ಪ್ರಥಮ ವರ್ತಮಾನವರದಿ ದಾಖಲಾಗಿದ್ದು ತನಿಖೆಯ ಬಳಿಕ ಮೃತಪಟ್ಟ ವ್ಯಕ್ತಿಯು ಕೇರಳ ರಾಜ್ಯದ ಎರ್ನಾಕುಳಮ್ ಜಿಲ್ಲೆಯ ಕುನ್ನತ್ತನಾಡು ತಾಲೂಕಿನ ಅರೆಕ್ಕಿಪ್ಪಾಡಿ ನಿವಾಸಿ ಉನ್ನಿಕೃಷ್ಣನ್ ಎಂಬಾತನೆಂದು ತಿಳಿದುಬಂದು ಈತನ ಮರಣೋತ್ತರ ಪರೀಕ್ಷೆಯ ವೇಳೆ ಮೃತ ಶರೀರದಲ್ಲಿ ಆಗಿದ್ದ ಗಾಯಗಳು ಹಾಗೂ ಮೃತ ವ್ಯಕ್ತಿಯ ಸಹೋದರನ ಮಗ ಇದೊಂದು ವ್ಯವಸ್ಥಿತ ಕೊಲೆ ಎಂದು ದೂರು ನೀಡಿದ್ದರಿಂದ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಈ ಪ್ರಕರಣದ ಪತ್ತೆಯ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ವಿಶೇಷ ತಂಡಗಳನ್ನು ರಚಿಸಿದ್ದು , ದಿನಾಂಕ 06/09/2018ರಂದು ಈ ಪ್ರಕರಣದ ಪ್ರಮುಖ ಆರೋಪಿಗಳನ್ನು ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಸುನಿಲ್ ವೈ ನಾಯ್ಕ್ ನೇತೃತ್ವದ ತಂಡವು ಕಾಸರಗೋಡುನಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ. ದಸ್ತಗಿರಿಯಾದ ಆರೋಪಿಗಳು ವಿಚಾರಣೆಯ ವೇಳೆ ತಾವು ಇತರರೊಂದಿಗೆ ಸೇರಿ ಈ ಕೊಲೆ ನಡೆಸಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಕೊಲೆ ಮಾಡಿರುವ ಉದ್ದೇಶ ಮುಂದಿನ ತನಿಖೆಯಲ್ಲಿ ತಿಳಿದು ಬರ ಬೇಕಿರುತ್ತದೆ. ದಸ್ತಗಿರಿಯಾದ ಆರೋಫಿಗಳು ಕ್ರಿಮಿನಲ್ ಹಿನ್ನೆಲೆಯುಲ್ಲವರಾಗಿದ್ದು ಔರಂಗಝೀಬ್ ಎಂಬಾತನ ಮೇಲೆ ಕೇರಳ ರಾಜ್ಯದ ಎರ್ನಾಕುಲಂ ಜಿಲ್ಲೆಯ ಆಳುವ ಪೊಲೀಸ್ ಠಾಣೆಯಲ್ಲಿ 3 ಕೊಲೆಯತ್ನ ಪ್ರಕರಣ 1 ದೊಂಬಿ ಪ್ರಕರಣ, ಕಲ್ಮಶ್ಯೇರಿ ಪೊಲೀಸ್ ಠಾಣೆಯಲ್ಲಿ 1 ಕೊಲೆಯತ್ನ ಪ್ರಕರಣ ಮತ್ತು 1 ದರೋಡೆ ಪ್ರಕರಣ, ಛಾವಕ್ಕಾಡ್ ಪೊಲೀಸ್ ಠಾಣೆಯಲ್ಲಿ 1 ದರೋಡೆಗೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ, ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ 1 ದರೋಡೆಗೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ ಮತ್ತು ಬೆನಾನಿಪುರಂ ಪೊಲೀಸ್ ಠಾಣೆಯಲ್ಲಿ ಶಿಶುಭವನ್ ಪ್ರಕರಣ ದಾಖಲಾಗಿದ್ದು, ಒಟ್ಟು 9 ಪ್ರಕರಣಗಳು ದಾಖಲಾಗಿದ್ದು ಈತನ ಮೇಲೆ ಅಳುವ ಪೊಲೀಸ್ ಠಾಣೆಯಲ್ಲಿ ಚಾರಿತ್ರ್ಯ ಹಾಳೆ (History Sheet) ಇರುತ್ತದೆ. ಈ ಆರೋಪಿಗಳು ಕೇರಳದ ಕುಖ್ಯಾತ ರೌಡಿ ಗ್ಯಾಂಗ್ಗೆ ಸೇರಿದವರಾಗಿರುತ್ತಾರೆ. ಆರೋಪಿಗಳನ್ನು ಮುಂದಿನ ತನಿಖೆಯ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆರೋಪಿಗಳು ತನಿಖೆಯ ವೇಳೆ ಕೃತ್ಯಕ್ಕೆ ಬಳಸಿದ್ದ ಪ್ರಕರಣದಲ್ಲಿ ಕೊಲೆಯಾದ ವ್ಯಕ್ತಿಯ ಇನೋವಾ ಕಾರನ್ನು ಕಾಸರಗೋಡಿನ ಬಸ್ಸು ನಿಲ್ದಾಣದ ಬಳಿ ನಿಲ್ಲಿಸಿರುವುದಾಗಿ ತಿಳಿಸಿದ್ದು, ಅಲ್ಲಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಇನ್ನುಳಿದ ಆರೋಪಿಗಳ ಪತ್ತೆ ಬಗ್ಗೆ ಕಾರ್ಯಾಚರಣೆ ಮುಂದುವರಿದಿದೆ.

ಈ ಕೊಲೆ ಪ್ರಕರಣದ ಆರೋಪಿಗಳ ಪತ್ತೆಯ ಕಾರ್ಯಾಚರಣೆಯಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ|ರವಿಕಾಂತೇಗೌಡ ಐ.ಪಿ.ಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಜಿತ್ ವಿ,ಜೆ ರವರ ನಿರ್ದೇಶನದಂತೆ ಡಿ.ಸಿ.ಐ.ಬಿ ಪೊಲೀಸ್ ನಿರೀಕ್ಷಕರಾದ ಶ್ರೀ ಸುನೀಲ್ ವೈ ನಾಯಕ್ ರವರ ನೇತ್ರತ್ವದ ತಂಡದಲ್ಲಿ ಸಿಬ್ಬಂದಿಯವರಾದ ನಾರಾಯಣ,ವಾಸು ನಾಯ್ಕ, ಲಕ್ಷ್ಮಣ ಕೆ.ಜಿ, ಇಕ್ಬಾಲ್ ಎ.ಇ, ಉದಯ ರೈ, ಪ್ರವೀಣ್ ಎಂ, ತಾರಾನಾಥ್ ,ಉದಯ ಗೌಡ, ಪ್ರವೀಣ ರೈಮತ್ತು ಸುರೇಶ್ ಪೂಜಾರಿರವರು ಭಾಗವಹಿಸಿರುತ್ತಾರೆ. ಸದ್ರಿ ತಂಡಕ್ಕೆ ಪೊಲೀಸ್ ಅಧೀಕ್ಷಕರು ಬಹುಮಾನವನ್ನು ಘೋಷಿಸಿರುತ್ತಾರೆ.


Spread the love