ಉಪ್ಪುಂದ: ಉಮಾಮಹೇಶ್ವರ ದೇವಸ್ಥಾನದಲ್ಲಿ ವೈಭವದ ಮನ್ಮಹಾರಥೋತ್ಸವ
ಬೈಂದೂರು: ಉಪ್ಪುಂದ ಮಾದಯ್ಯ ಶೆಟ್ಟಿ ಅವರ ಮೂಲಸ್ಥಾನದಲ್ಲಿ ಪುನರುತ್ಥಾನಗೊಂಡ ನೂತನ ಶಿಲಾಮಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಬುಧವಾರ ಶಿವರಾತ್ರಿ ಮಹೋತ್ಸವದ ಅಂಗವಾಗಿ ವೈಭವದ ಮನ್ಮಹಾರಥೋತ್ಸವ ನಡೆಯಿತು.
ಹೊನ್ನಾವರ ನವಿಲಗೋಣದ ಆಗಮಶ್ರೇಷ್ಠ ಶಂಕರ ಪರಮೇಶ್ವರ ಭಟ್ ನೇತೃತ್ವದಲ್ಲಿ ರಥ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಮಂಗಳಾರತಿ ಹಾಗೂ ವಿಶೇಷ ಬಲಿ ಪೂಜೆಯ ಬಳಿಕ, ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಗರ್ಭಗುಡಿಯಿಂದ ಹೊರತಂದು ಪ್ರದಕ್ಷಿಣೆ ನಡೆಸಿ, ಬ್ರಹ್ಮರಥಕ್ಕೆ ಆರೋಹಣ ಮಾಡಲಾಯಿತು. ಉಮಾಮಹೇಶ್ವರನಿಗೆ ಮಂಗಳಾರತಿ ಬೆಳಗಿಸಿದ ಬಳಿಕ, ರಥದ ಮುಂದೆ ತೆಂಗಿನ ಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಮಂಗೇಶ್ ಬೆಂಡೆ ಅವರು ಮೊದಲ ತೆಂಗಿನ ಕಾಯಿ ಒಡೆದರು. ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿಗಳಾದ ವಿಠ್ಠಲ್ ಹೆಗ್ಡೆ ಬೆಳಗಾಂ, ಬಾಲಕೃಷ್ಣ ಭಂಡಾರಿ ಮುಂಬೈ, ಪ್ರಮುಖರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಶರತ್‌ಕುಮಾರ ಶೆಟ್ಟಿ ಉಪ್ಪುಂದ, ಗುರುಕಾರ್ತಿಕ್ ಶೆಟ್ಟಿ ಉಪ್ಪುಂದ, ಸುರೇಶ್ ಶೆಟ್ಟಿ ಕಾಲ್ತೋಡು, ರಾಜೂ ಎಸ್ ಪೂಜಾರಿ, ರಘುರಾಮ ಶೆಟ್ಟಿ ಬಿಜೂರು, ಕೃಷ್ಣರಾಜ್ ಶೆಟ್ಟಿ ಚೋರಾಡಿ, ಅಣ್ಣಪ್ಪ ಶೆಟ್ಟಿ ಕಾಲ್ತೋಡು, ಮೋಹನ್‌ಚಂದ್ರ ಉಪ್ಪುಂದ, ಬಾಂಡ್ಯದವರ ಮನೆ ಪ್ರಭಾಕರ ಶೆಟ್ಟಿ, ಅನಿಲ್ ಉಪ್ಪುಂದ, ರಂಜಿತ್‌ಕುಮಾರ ಶೆಟ್ಟಿ, ಸಂತೋಷ್‌ಕುಮಾರ ಶೆಟ್ಟಿ ಹಟ್ಟಿಯಂಗಡಿ, ಕುಮಾರ್ ಶೆಟ್ಟಿ ಬೈಂದೂರು, ಮದನಕುಮಾರ ಉಪ್ಪುಂದ, ವಾಸುದೇವ ಪೂಜಾರಿ, ರಾಜು ದೇವಾಡಿಗ ಚಪ್ಪರಮನೆ, ಮಾದ ದೇವಾಡಿಗ, ಪ್ರಭಾಕರ ಶೆಟ್ಟಿ ಕಟ್ಕೆರೆ ಮುಂತಾದವರು ಇದ್ದರು.
ಮಾದಯ್ಯ ಶೆಟ್ರಮನೆ ಪ್ರಮುಖರಾದ ಯು.ಸೀತಾರಾಮ ಶೆಟ್ಟಿ, ಜಲಜಾಕ್ಷಿ ಎಂ. ಶೆಟ್ಟಿ, ನಾರಾಯಣ ಎಂ.ಶೆಟ್ಟಿ, ಯು.ಬಿ.ಶೆಟ್ಟಿ, ರತ್ನಾಕರ ಟಿ. ಶೆಟ್ಟಿ, ಕೆ.ವಸಂತ ಭಂಡಾರಿ, ಭುಜಂಗ.ಎಂ. ಶೆಟ್ಟಿ, ಹರೀಶ್‌ಕುಮಾರ ಶೆಟ್ಟಿ, ಶೀಲಾ ವಿ.ಭಂಡಾರಿ, ಜ್ಯೋತಿ ಆರ್. ಶೆಟ್ಟಿ, ನಾಗಯ್ಯ ಶೆಟ್ಟಿ , ಶಾಂತಾರಾಮ್ ಶೆಟ್ಟಿ, ಸದಾನಂದ ಶೆಟ್ಟಿ, ಸುಪ್ರದ ಶೆಟ್ಟಿ, ಜ್ಯೋತಿ ಜಿ ಶೆಟ್ಟಿ, ಪ್ರತ್ಯೇಕ್ಷ ಶೆಟ್ಟಿ, ಡಾ.ರಕ್ಷಿತ್ ಶೆಟ್ಟಿ, ಚರಿತ್ರಾ ಶೆಟ್ಟಿ , ಮಾದೇಶ್ ಶೆಟ್ಟಿ, ಸರಾಗ್ ಶೆಟ್ಟಿ, ಅನಿರುದ್ಧ ಶೆಟ್ಟಿ, ಡಾ.ಸಮೃದ್ದ ಶೆಟ್ಟಿ, ಡಾ.ಮಾಧವ ಶೆಟ್ಟಿ ಗಂಗಾವತಿ, ಪ್ರಶಾಂತ್ ಶೆಟ್ಟಿ ಧಾರವಾಡ, ಉಲ್ಲಾಸ್‌ಕುಮಾರ ಶೆಟ್ಟಿ ಇದ್ದರು.
ಸಂಜೆ ಬ್ರಹ್ಮರಥ ಅವರೋಹಣ ನಡೆಯಿತು. ರಾತ್ರಿ ಕುಲದೇವತೆ ಶ್ರೀ ದುರ್ಗಾಪರಮೇಶ್ವರಿ ಹಣಬಿನ ಕಟ್ಟೆಯಲ್ಲಿ ಹಣಬು ಸೇವೆ ನಡೆಸಲಾಯಿತು