ಉಪ್ಪೂರು ಜಿ.ಟಿ.ಟಿ.ಸಿ ಕಾಲೇಜಿನಲ್ಲಿ ಪ್ರವೇಶ ಪ್ರಕ್ರಿಯೆ ಆರಂಭ
ಉಡುಪಿ : ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಸಂಸ್ಥೆಯನ್ನು ಕರ್ನಾಟಕ ಸರ್ಕಾರ ಮತ್ತು ಡೆನ್ಮಾಕನ್ ಸಹಯೋಗದೊಂದಿಗೆ ಸ್ಥಾಪಿಸಲಾಗಿದ್ದು ಒಂದು ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆಯಾಗಿದೆ.
ಜಿಟಿಟಿಸಿ ಸಂಸ್ಥೆಯು ಕರ್ನಾಟಕ ಸರ್ಕಾರದ ಕೌಶಲ್ಯ ಇಲಾಖೆಗೆ ಒಳಪಟ್ಟಿದ್ದು ಕರ್ನಾಟಕದಲ್ಲಿ 24 ಉಪಕೇಂದ್ರಗಳನ್ನು ಒಳಗೊಂಡಿದ್ದು ಎಲ್ಲ ಕೇಂದ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲಿದ್ದು ಂIಅಖಿಇ ಮತ್ತು ಡಿಟಿಇ ಯಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ.ಈ ಸಂಸ್ಥೆಯು ಕೌಶಲ್ಯ ಅಭಿವೃದ್ದಿ ತರಭೇತಿ ಕಾರ್ಯಕ್ರಮಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಪ್ರೋತ್ಸಾಹಿಸುತ್ತಿದೆ.
ಕೈಗಾರಿಕೆಗಳ ಬೆಳವಣಿಗೆ ಉತ್ಕೃಷ್ಟ ಕೌಶಲ್ಯ ತರಭೇತಿ ಹಾಗೂ ನೈಪುಣ್ಯತೆ ಪಡೆದ ನುರಿತ ಮಾನವ ಸಂಪನ್ಮೂಲದ ಮೇಲೆ ಅವಲಂಭಿಸಿದ್ದು, ಉತ್ಕೃಷ್ಟ ರಚನಾತ್ಮಕ ,ಮಾಡ್ಯುಲರ್ ಪ್ರಯೋಗಿಕಾದರಿತ ದೀರ್ಘ ಅವಧಿ ಹಾಗೂ ಅಲ್ಪವಾದಿ ಕೌಶಲ್ಯ ತರಭೇತಿ ಜಿಟಿಟಿಸಿ ಯ ಪ್ರಮುಖ ಕಾರ್ಯವಾಗಿದೆ.
ಜಿಟಿಟಿಸಿಯ ನೂತನ ಸಹಾಯಕ ಸಂಸ್ಥೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ಈದೀಗ ಉಡುಪಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದಲ್ಲದೆ ಉದ್ಯೋಗ ಕಲ್ಪಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ಉಡುಪಿ ಜಿಲ್ಲೆಯ ಉಪ್ಪೂರು ಗ್ರಾಮ ಕೊಳಲಗಿರಿ ಮುಖ್ಯ ರಸ್ತೆಯ ಸರಕಾರಿ ಪ್ರೌಢಶಾಲೆ ಬಳಿ ಜಿಟಿಟಿಸಿ ಸಂಸ್ಥೆಯು ಎಸ್ ಎಸ್ ಎಲ್ ಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಟೂಲ್ ಆಂಡ್ ಡೈ ಮೇಕಿಂಗ್ ಮತ್ತು ಮೆಕಾಟ್ರಾನಿಕ್ಸ್ ವಿಷಯದಲ್ಲಿ ಡಿಪ್ಲೊಮಾ ಕೋರ್ಸಿನಲ್ಲಿ ನಾಲ್ಕು ವರ್ಷಗಳ ಶಿಕ್ಷಣ ನೀಡುವ ಮೂಲಕ ಉದ್ಯೋಗ ಕಲ್ಪಿಸುವ ಯೋಜನೆಯನ್ನು ಹಮ್ಮಿಕೊಂಡಿದೆ.
ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ಉದ್ಯಮಗಳ ಪರಿಸರಕ್ಕೆ ಹೊಂದಿಕೊಳ್ಳುವುದಕ್ಕಾಗಿ ಹೆಚ್ಚಿನ ಕೌಶಲ್ಯ ತರಬೇತಿ ಪಡೆಯಲು ಕೊನೆಯ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಕಡ್ಡಾಯ ತರಬೇತಿಗಾಗಿ ವಿವಿಧ ಉದ್ಯಮ ಹಾಗೂ ಕೈಗಾರಿಕೆಗಳಿಗೆ ನಿಯೋಜಿಸಲಾಗುವುದು ಈ ಅವಧಿಯಲ್ಲಿ ಮಾಸಿಕ ಸ್ಟೆöÊಫಂಡ್ ನೀಡಲಾಗುವುದು.
ಎಸ್.ಎಲ್.ಎಲ್ ಸಿ ಪಾಸದ ಆಸಕ್ತರು ಸೆಪ್ಟೆಂಬರ್ 15 ರೊಳಗೆ www.gttc.co.inವೆಬ್ ಸೈಟ್ ಅಥವಾ ಇತ್ತೀಚಿನ ಭಾವಚಿತ್ರ ,10 ನೇ ತರಗತಿ ಅಂಕಪಟ್ಟಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ,ಇ-ಮೇಲ್ ಐಡಿ ಯೊಂದಿಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ.ಐ ಟಿ ಐ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ 3ನೇ ಸೆಮಿಸ್ಟರ್ ,2ನೇ ವರ್ಷದ ಡಿಪ್ಲೊಮಾ ಕೋರ್ಸ್ಗೆ ನೇರ ಪ್ರವೇಶ ಪಡೆಯಬಹುದಾಗಿದೆ.
ಸೀಟು ಹಂಚಿಕೆ ಮೆರಿಟ್ ಕಂ ರೋಸ್ಟರ್ ಮೂಲಕ ನಡೆಯಲಿದೆ.ಶೇ.30 ರಷ್ಟು ಸೀಟುಗಳನ್ನು ವಿದ್ಯಾರ್ಥಿನಿಯರಿಗಾಗಿ ಮೀಸಲಿರಿಸಲಾಗುತ್ತದೆ. ಜಿಟಿಟಿಸಿಯಲ್ಲಿ ವಿದ್ಯಾರ್ಥಿಗಳಿಗೆ ಅನುಭವಿ ತರಬೇತುದಾರರಿಂದ ವೃತ್ತಿಪರ ಶಿಕ್ಷಣ ನೀಡಲಾಗುತ್ತಿದ್ದು ಉದ್ಯೋಗ ಕಲ್ಪಿಸಲಾಗುತ್ತದೆ.
ಕೌಶಲ ತರಬೇತಿ ನೀಡುವ ಇತರೇ ವೃತ್ತಿಪರ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಪಡೆಯಲು ಅಗತ್ಯ ತರಬೇತಿ ನೀಡಲಾಗುತ್ತದೆ.ಜೊತೆಗೆ ಇಂಗ್ಲೀಷ್ ಸಂವಹನ ಕಲೆ ವೃದ್ದಿಸಲು ವಿಶೇಷ ತರಬೇತಿ ಯನ್ನು ನೀಡಲಾಗುತ್ತದೆ.
ಜಿಟಿಟಿಸಿಯಲ್ಲಿ ನಾಲ್ಕು ವರ್ಷದ ಡಿಪ್ಲೊಮಾ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಮೈಸೂರು ಸೇರಿದಂತೆ ಬೆಂಗಳೂರು,ಪೂನಾ,ನಾಸಿಕ್ ಮತ್ತು ಕೊಯಮತ್ತೂರಿನಲ್ಲಿ ಉದ್ಯೋಗಾವಕಾಶ ಲಭ್ಯವಿದ್ದು ಟೊಯೆಟಾ ಕಿರ್ಲೋಸ್ಕರ್,ಎಲ್ ಆಂಡ್ ಟಿ, ಟೈಟಾನ್.ವಿಡಿಯೋಕಾನ್ ಇಂಟೆಲ್ .ನೋಕಿಯಾದಂತಹ ಕಂಪನಿಗಳಲ್ಲಿ ಉತ್ತಮ ವೇತನದ ಉದ್ಯೋಗವಕಾಶ ಸಿಗುವುದಲ್ಲದೆ ಬಹುತೇಕ ವಿದ್ಯಾರ್ಥಿಗಳು ಸ್ವಂತ ಕೈಗಾರಿಕೆ ಆರಂಭಿಸಿ ಯಶ್ವಸಿ ಉದ್ಯಮಿ ಗಳಾಗಿದ್ದಾರೆ ಎಂದು ಘಟಕದ ಮುಖ್ಯಸ್ಥ ಮಂಜುನಾಥ್ ನಾಯಕ್ ಎ ತಿಳಿಸಿದ್ದಾರೆ.
ಸಂಸ್ಥೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರಾದ ಮಂಜುನಾಥ ನಾಯಕ್ .ಎ ದೂರವಾಣಿ ಸಂಖ್ಯೆ 0820-2950101, 9880510585 ಸಂಪರ್ಕಿಸಬಹುದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.