ಉರ್ವಾ ಮೈದಾನದ ಪರಿಸರದಲ್ಲಿ ಅಕ್ರಮ ಮಟ್ಕಾ ದಂಧೆ : ಓರ್ವನ ಸೆರೆ
ಮಂಗಳೂರು: ನಗರದ ಉರ್ವಾ ಮೈದಾನದ ಪರಿಸರದಲ್ಲಿ ಅಕ್ರಮವಾಗಿ ಮಟ್ಕಾ ದಂಧೆ ನಡೆಸುತ್ತಿದ್ದವನನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿರುತ್ತಾರೆ.
ಸಪ್ಟೆಂಬರ್ 19 ರಂದು ಮಂಗಳೂರು ನಗರದ ಉರ್ವಾ ಆರ್ ಆರ್ ಪೈ ಮೆಮೊರಿಯಲ್ ಮೈದಾನದ ಪರಿಸರದಲ್ಲಿ ಅಕ್ರಮವಾಗಿ ಮಟ್ಕಾ ದಂಧೆಯನ್ನು ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮಟ್ಕಾ ದಂಧೆಯಲ್ಲಿ ನಿರತನಾಗಿದ್ದ ಮಂಗಳೂರು ಶಕ್ತಿನಗರ ನಿವಾಸಿ ಸುಜಿತ್ ಪೂಜಾರಿ (31) ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನಿಂದ ಮಟ್ಕಾ ಆಟಕ್ಕೆ ಬಳಸಿದ ರೂ. 17,630/-ನಗದು, ಮಟ್ಕಾ ನಂಬ್ರ ಬರೆದ ಚೀಟಿಗಳು, ಮೊಬೈಲ್ ಫೋನ್, ಸುಝುಕಿ ಅಕ್ಸೆಸ್ ಸ್ಕೂಟರ್ ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ. 67,630/- ಆಗಿರುತ್ತದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಾನ ದಾಖಲಾಗಿರುತ್ತದೆ.
ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಾಂತಾರಾಮ, ಪಿಎಸ್ಐಯವರಾದ ಶ್ಯಾಮ್ ಸುಂದರ್, ಹಾಗೂ ಸಿಬ್ಬಂದಿಗಳು ಮತ್ತು ಮಂಗಳೂರು ಬರ್ಕೆ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ರಾಮಕೃಷ್ಣ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.